ನಾನು ಯಾರ ಮಗಳು ಗೊತ್ತಾ?: ಟ್ರಾಫಿಕ್ ಪೊಲೀಸರೊಂದಿಗೆ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್

Published : Jun 09, 2022, 07:15 PM ISTUpdated : Jun 09, 2022, 07:16 PM IST
ನಾನು ಯಾರ ಮಗಳು ಗೊತ್ತಾ?: ಟ್ರಾಫಿಕ್ ಪೊಲೀಸರೊಂದಿಗೆ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್

ಸಾರಾಂಶ

ಪೊಲೀಸರೊದಿಗೆ ಯುವತಿ "ನಾನು ಯಾರು ಗೊತ್ತಾ? ಶಾಸಕ ಅರವಿಂದ್ ಲಿಂಬಾವಳಿ ಗೊತ್ತಾ? ಅರವಿಂದ ಲಿಂಬಾವಳಿ ಮಗಳು ನಾನು" ಎಂದು ವಾಗ್ವಾದಕ್ಕಿಳಿದಿದ್ದಾಳೆ. 

ಬೆಂಗಳೂರ (ಜೂ. 09):  ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Arvind Limbavali)  ಪುತ್ರಿ ಟ್ರಾಫಿಕ್ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ಬಳಿ ನಡೆದಿದೆ. ರ‍್ಯಾಶ್ ಡ್ರೈವ್ ಮಾಡಿಕೊಂಡು ಬಂದ ಯುವತಿ ಕಾರನ್ನು ಪೊಲೀಸರು ತಡೆದಿದ್ದಾರೆ, ಈ ವೇಳೆ ಕಾರು ನಿಲ್ಲಿಸದೇ ಯುವತಿ ಮುನ್ನುಗ್ಗಿದ್ದಾಳೆ. ಚೇಸ್ ಮಾಡಿ ಕ್ಯಾಪಿಟಲ್ ಹೊಟೆಲ್ ಬಳಿ ಅರವಿಂದ ಲಿಂಬಾವಳಿ ಪುತ್ರಿ ಕಾರನ್ನು ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ತಡೆದಿದ್ದಾರೆ. 

ಈ ವೇಳೆ ಪೊಲೀಸರೊದಿಗೆ ಯುವತಿ "ನಾನು ಯಾರು ಗೊತ್ತಾ? ಶಾಸಕ ಅರವಿಂದ್ ಲಿಂಬಾವಳಿ ಗೊತ್ತಾ? ಅರವಿಂದ ಲಿಂಬಾವಳಿ ಮಗಳು ನಾನು" ಎಂದು ವಾಗ್ವಾದಕ್ಕಿಳಿದಿದ್ದಾಳೆ. ಅರವಿಂದ್ ಲಿಂಬಾವಳಿ ಮಗಳು ನಾನು ಎಂದು ಏರುಧ್ವನಿಯಲ್ಲಿ ಕಿರಿಕ್ ಮಾಡಿದ್ದಾಳೆ. ಅವಾಚ್ಯ ಶಬ್ದಗಳಿಂದ ಪೊಲೀಸರಿಗೆ ಯುವತಿ ನಿಂದಿಸಿದ್ದಾಳೆ. ರ‍್ಯಾಶ್ ಡ್ರೈವ್ ಫೈನ್ ಸೇರಿ ಹಳೆಯ ಕೇಸುಗಳ ಫೈನ್ ವಸೂಲಿ ಮಾಡಿರುವ ಪೊಲೀಸರು ಯುವತಿಯಿಂದ ಒಟ್ಟು 10 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.  

ಇದನ್ನೂ ಓದಿ: ಕಳುವಾದ ಕಾರು ಇಟ್ಟುಕೊಂಡ ಮಾಲೀಕನಿಗೆ ಥಳಿಸಿದ ಪೊಲೀಸ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು