ತುಮಕೂರು ಜಿಲ್ಲೆಯ ನಾಗವಲ್ಲಿ ಗ್ರಾಮದ ಕೋಳಿ ಫಾರಂ ಮೇಲೆ ಸಿಐಡಿ ದಾಳಿ, ಅಕ್ರಮವಾಗಿ ನರಿ ಸಾಕಿದ್ದ ವ್ಯಕ್ತಿ ಸೆರೆ.
ತುಮಕೂರು(ಫೆ.28): ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟ ಬರುತ್ತದೆ ಎಂಬ ಮೂಢನಂಬಿಕೆಗೆ ಜೋತು ಬಿದ್ದು ಕೋಳಿ ಫಾರಂ ಮಾಲೀಕನೊಬ್ಬ ಅಕ್ರಮವಾಗಿ ನರಿ ಸಾಕಿ ಈಗ ಜೈಲು ಸೇರಿದ್ದಾನೆ.
ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮದ ನಿವಾಸಿ ಲಕ್ಷ್ಮೇಕಾಂತ್ ಬಂಧಿತನಾಗಿದ್ದು, ಆರೋಪಿಯಿಂದ ನರಿ ರಕ್ಷಣೆ ಮಾಡಲಾಗಿದೆ. ತನ್ನ ಕೋಳಿ ಫಾರಂನಲ್ಲಿ ಅಕ್ರಮವಾಗಿ ಲಕ್ಷ್ಮೇಕಾಂತ್ ನರಿ ಸಾಕಿರುವ ಕುರಿತು ಮಾಹಿತಿ ಪಡೆದ ಸಿಐಡಿ ಅರಣ್ಯ ಸಂಚಾರ ದಳದ ಪೊಲೀಸರು, ದಿಢೀರ್ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
undefined
ಬೆಂಗಳೂರು: ಶಾಲೆ, ಕಾಲೇಜು ದೋಚುವ ಗ್ಯಾಂಗ್ ಅರೆಸ್ಟ್
ಏಳು ತಿಂಗಳ ಹಿಂದೆ ತಮ್ಮೂರಿನ ಕೆರೆ ಸಮೀಪ ಲಕ್ಷ್ಮೀಕಾಂತ್‌ಗೆ ನರಿ ಮರಿಗಳು ಸಿಕ್ಕಿವೆ. ಆಗ ಅವುಗಳಲ್ಲಿ ಒಂದು ಮರಿಯನ್ನು ತಂದು ಪಂಜರದಲ್ಲಿಟ್ಟು ಸಾಕುತ್ತಿದ್ದ. ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟಬರುತ್ತದೆ ಎಂಬ ಮೂಢನಂಬಿಕೆಯಿಂದ ಈ ರೀತಿ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ.