ಗಲಾಟೆ ಮಾಡಿ ಸಾಯಲು ಹೊರಟ ಮಗ ರಕ್ಷಿಸಲು ಹೋದ ತಾಯಿ ಕೂಡ ರೈಲಿಗೆ ಬಲಿ, ತಂಗಿ ಆತ್ಮಹತ್ಯೆ!

By Suvarna NewsFirst Published Mar 4, 2024, 6:39 PM IST
Highlights

ಕೌಟುಂಬಿಕ ಕಲಹ, ಸಾಲಬಾಧೆಗೆ ಬೇಸತ್ತು ರೈಲಿಗೆ ಹಾರಿದ ಮಗ ; ಮಗನನ್ನ ರಕ್ಷಿಸಲು ಹೋಗಿ ತಾಯಿ ಸಾವು : ಅಕ್ಕನ ಸಾವಿನ ಸುದ್ದಿ ಕೇಳಿ ನೇಣು ಬಿಗಿದುಕೊಂಡ ತಂಗಿ 

ಗದಗ (ಮಾ.4): ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವಿನಹಾಳ ಗ್ರಾಮದ ಒಂದೇ ಕುಟುಂಬದ ಮೂವರು ಸಾಲ ಬಾಧೆ, ಕೌಟುಂಬಿಕ ಕಲಹಕ್ಕೆ ಬಲಿಯಾದ ದಾರುಣ ಘಟನೆ ನಡೆದಿದೆ..

ಸಾಲ ಪಾವತಿ ವಿಷಯವಾಗಿ ಜಗಳವಾಡಿಕೊಂಡು ಮನೆಯಿಂದ ತೆರಳಿದ್ದ ಮಂಜುನಾಥ್ ತೇಲಿ (22) ಯಲವಿಗಿ ರೈಲು ನಿಲ್ದಾಣದ ಬಳಿ ಆತ್ಮಹತ್ಯೆಗೆ ಮುಂದಾಗಿದ್ದ. ಮಗನನ್ನ ತಡೆಯಲು ಹೋಗಿದ್ದ ತಾಯಿ ರೇಣುಕಾ ತೇಲಿ(50) ಮೇಲೂ ರೈಲು ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ರು.. ಈ ವಿಷಯ ತಿಳಿದು ರೇಣುಕಾ ಅವರ ತಂಗಿ ಸಾವಕ್ಕ ತೇಲಿ (45) ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
ರೇಣುಕಾ ಹಾಗೂ ಸಾವಕ್ಕ ಅಣ್ಣ ತಮ್ಮನನ್ನ ಮದುವೆಯಾಗಿ ಒಂದೇ ಮನೆ ಸೇರಿದ್ರು. ರೇಣುಕಾ ಗಂಡ ಈರಬಸಪ್ಪ ಕೆಲ ವರ್ಷಗಳ ಹಿಂದೆ ಮೃತಟ್ಟಿದ್ರೆ. ಸಾವಕ್ಕನ ಗಂಡ ಈರಪ್ಪ ಮನೆ ಜವಾಬ್ದಾರಿ ನೋಡ್ಕೊಂಡು ಹೋಗ್ತಿದ್ರು. ಗೋವಿನಾಳ ಗ್ರಾಮದಲ್ಲಿ ಮನೆ ಕಟ್ಟಬೇಕು ಜೊತೆಗೆ ಟ್ರ್ಯಾಕ್ಟರ್ ಖರೀದಿ ಮಾಡ್ಬೇಕು ಅಂತಾ ಎರಡೂ ಕುಟುಂಬ ಸೇರಿ ಒಟ್ಟು 10 ಲಕ್ಷ ಸಾಲ ಮಾಡಿಕೊಂಡಿದ್ರಂತೆ.

ಚಿತ್ರದುರ್ಗಕ್ಕೆ ಆಂಧ್ರದಿಂದ ಕುಡಿಯುವ ನೀರು ಪೂರೈಕೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ದ ಸಿಡಿದೆದ್ದ ಜನತೆ

ಆದ್ರೆ ಕುಡಿತದ ದಾಸನಾಗಿದ್ದ ಮಂಜುನಾಥ್ ಸಾಲ ತೀರಿಸುವ ವಿಚಾರಕ್ಕಾಗಿ ಆಗಾಗ ಕಿರಿಕ್ ಮಾಡ್ತಿದ್ನಂತೆ. ನಿನ್ನೆಯೂ ಚಿಕ್ಕಪ್ಪ ಈರಪ್ಪ ಜೊತೆ ಹಣದ ವಿಷಯವಾಗಿ ಜಗಳವಾಡಿದ್ದ. ಅಲ್ದೆ, ಟ್ರ್ಯಾಕ್ಟರ್ ಸಾಲ ತೀರಿಸುವ ವಿಚಾರಕ್ಕೆ ಗಲಾಟೆಯೂ ಆಗಿತ್ತಂತೆ.
ಅಲ್ಲಿಂದ ಮನೆಗೆ ಬಂದಿದ್ದ ಮಂಜುನಾಥ್ ಸಣ್ಣ ಕಲಾಟೆ ಮಾಡಿದ್ದಾನೆ. ಅಲ್ಲಿಂದ ರೇಣುಕಾ ಅವರು ದುಡಿದು ಸಾಲ ತೀರಿಸುವುದಾಗಿ ಹೇಳಿ ಮನೆಯಿಂದ ತೆರಳಿದ್ರು. ಆದ್ರೆ ಭಾನುವಾರ ರಾತ್ರಿ 10;30 ಗಂಟೆಗೆ ರೈಲು ಟ್ರ್ಯಾಕ್ ಬಳಿ ಶವವಾಗಿ ಪತ್ತೆಯಾಗಿದಾರೆ.

ಸಾರಿಗೆ ನಿಗಮಗಳ ನೌಕರರ ಬೇಡಿಕೆ ಬೇಗ ಈಡೇರಿಸಲು ಒತ್ತಾಯ

ಸಾಲಬಾಧೆಗೆ ಹೆದರಿದ್ದ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಚಿಕ್ಕಪ್ಪ ಈರಪ್ಪ ತಿಳಿಸಿದಾರೆ. ಕೈ ಸಾಲ, ಹಾಗೂ ಬ್ಯಾಂಕ್ ನಿಂದ ಸಾಲ ಪಡೆದಿದ್ವಿ. ಸಾಲ ತೀರಿಸಲು ಆಗ್ತಿರಲಿಲ್ಲ. ಸಾಲ ಪಡೆದು ಖರೀದಿಸಿದ್ದ  ಟ್ರ್ಯಾಕ್ಟರ್ ಗೆ ಸರಿಯಾಗಿ ಬಾಡಿಗೆ ಸಿಗ್ತಿರಲಿಲ್ಲ. ಬೇರೆಯವರ ಜಮೀನು ಪಡೆದು ಬೇಸಾಯ ಮಾಡ್ತಿದ್ವಿ. ಅಲ್ಲೂ ಸರಿಯಾಗಿ ಬೆಳೆ ಇಲ್ಲ. ಸಾಲದ ಒತ್ತಡ ಕುಟುಂಬವನ್ನ ಕುಗ್ಗಿಸಿತು ಅಂತಾ ಈರಪ್ಪ ಹೇಳಿಕೊಂಡಿದ್ದಾರೆ. 

ಬಾಳಿ ಬದುಕಬೇಕಿದ್ದ ಮಂಜುನಾಥ್ ಆತುರದ ನಿರ್ಧಾರ ಮಾಡಿ ತಾನಲ್ಲದೇ ತಾಯಿಯೂ ಉಸಿರು ಚೆಲ್ಲುವಂತೆ ಮಾಡಿದ್ದಾನೆ. ಅಕ್ಕನ ಸಾವಿನ ಸುದ್ದಿ ತಿಳಿದು ಸಾವಕ್ಕನೂ ಸಾವಿನ ಮನೆ ಸೇರಿದಾಳೆ. ಈ ಮಧ್ಯೆ ಮೂವರನ್ನ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ. 

click me!