'ಕಪ್ಪಗಿರೋ ನೀನು ಡಾಕ್ಟರ್ ಆಗಬೇಕಾ?': ಲೆಕ್ಚರರ್ಸ್ ಕೊಂಕು ಮಾತಿಗೆ ಡೆಂಟಲ್ ಸ್ಟೂಡೆಂಟ್ ಬಲಿ, ದಾಖಲಾಯ್ತು ಎಫ್‌ಐಆರ್!

Published : Jan 11, 2026, 09:54 PM IST
Anekal FIR Against Lecturers After Dental Student Yashaswini Dies

ಸಾರಾಂಶ

ಆನೇಕಲ್ ಬಳಿ ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಾಲೇಜು ಅಧ್ಯಾಪಕರ ಜನಾಂಗೀಯ ನಿಂದನೆ ಮತ್ತು ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಪ್ರಾಂಶುಪಾಲರು ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಆನೇಕಲ್ (ಜ.11): ಬೆಂಗಳೂರಿನ ಆನೇಕಲ್ ಸಮೀಪದ ಚಂದಾಪುರದಲ್ಲಿ ನಡೆದ ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮ೧ಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಕಾಲೇಜು ಅಧ್ಯಾಪಕರ ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪ್ರಾಂಶುಪಾಲ ಸೇರಿ ಐವರ ವಿರುದ್ಧ FIR

ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮ೧ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಐವರು ಲೆಕ್ಚರರ್‌ಗಳ ಮೇಲೆ ಎಫ್‌ಐಆರ್ (FIR) ಹಾಕಲಾಗಿದೆ. ಕಳೆದ ಗುರುವಾರ ಚಂದಾಪುರದ ತನ್ನ ಮನೆಯಲ್ಲಿ ಯಶಸ್ವಿನಿ ನೇಣಿಗೆ ಶರಣಾಗಿದ್ದರು. ಈ ಸಾವು ಕೇವಲ ಆತ್ಮ೧ಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಕಿರುಕುಳದಿಂದ ನಡೆದ ಘಟನೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಕಪ್ಪು ಬಣ್ಣದ ನಿನಗೆ ಡಾಕ್ಟರ್ ಆಗಬೇಕಾ?

ಯಶಸ್ವಿನಿ ಸಾವಿನ ಹಿಂದೆ ಕಾಲೇಜು ಲೆಕ್ಚರರ್ಸ್ ಜನಾಂಗೀಯ ದ್ವೇಷ ಮತ್ತು ಬಣ್ಣದ ಬಗ್ಗೆ ಮಾನಸಿಕ ಹಿಂಸೆ ಮಾಡಿರುವ ಆರೋಪ ಕೇಳಿಬಂದಿದೆ. 'ಕಪ್ಪು ಬಣ್ಣದ ನಿನಗೆ ಡಾಕ್ಟರ್ ಆಗಬೇಕಾ? ಎಂದು ಸಹಪಾಠಿಗಳ ಮುದೆಯೇ ಲೆಕ್ಚರರ್ಸ್ ಯಶಸ್ವಿನಿಯನ್ನು ಹೀಯಾಳಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿನಿಯ ಬಣ್ಣ ಹಾಗೂ ಆಕೆ ಧರಿಸುತ್ತಿದ್ದ ಉಡುಪಿನ ಬಗ್ಗೆಯೂ ಕಾಲೇಜು ಲೆಕ್ಚರರ್ಸ್ ಸಾರ್ವಜನಿಕವಾಗಿ ಅವಹೇಳನಕಾರಿ ಮಾತುಗಳನ್ನಾಡಿ ಆಕೆಯ ಆತ್ಮವಿಶ್ವಾಸವನ್ನು ಕುಗ್ಗಿಸಿದ್ದರು ಎನ್ನಲಾಗಿದೆ.

ಸೆಮಿನಾರ್‌ಗೂ ನೀಡಲಿಲ್ಲ ಅವಕಾಶ

ಕೇವಲ ವೈಯಕ್ತಿಕ ನಿಂದನೆಯಷ್ಟೇ ಅಲ್ಲದೆ, ಶೈಕ್ಷಣಿಕವಾಗಿಯೂ ಯಶಸ್ವಿನಿಗೆ ಕಾಲೇಜು ಲೆಕ್ಚರರ್ಸ್ ಹತ್ತಾರು ಅಡೆತಡೆಗಳನ್ನು ಒಡ್ಡಿದ್ದರು ಎಂಬ ಆರೋಪ ಕೇಳಿಬಂದಿದೆ. ಸೆಮಿನಾರ್‌ಗಳಲ್ಲಿ ಭಾಗವಹಿಸಲು ಆಕೆಗೆ ಅನುಮತಿ ನೀಡುತ್ತಿರಲಿಲ್ಲ. ಅಲ್ಲದೆ, ರೆಡಿಯಾಲಜಿ ಕೇಸ್ ನೀಡದೆ ಆಕೆಯನ್ನು ಸತಾಯಿಸಲಾಗುತ್ತಿತ್ತು. ಒಮ್ಮೆ ಕಣ್ಣು ನೋವು ಎಂದು ರಜೆ ಕೇಳಿದಾಗಲೂ ಶಿಕ್ಷಕರು ಕೊಂಕು ಮಾತುಗಳಿಂದ ಆಕೆಯನ್ನು ಹೀಯಾಳಿಸಿದ್ದರು ಎಂದು ಮೃತಳ ತಾಯಿ ಪರಿಮಳ ದೂರಿದ್ದಾರೆ.

ತಾಯಿಯ ಆಕ್ರೋಶ: ನ್ಯಾಯಕ್ಕಾಗಿ ಆಗ್ರಹ

ತನ್ನ ಮಗಳ ಸಾವಿಗೆ ಕಾರಣರಾದ ಲೆಕ್ಚರರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯಶಸ್ವಿನಿ ತಾಯಿ ಪರಿಮಳ ಒತ್ತಾಯಿಸಿದ್ದಾರೆ. 'ನನ್ನ ಮಗಳು ವೈದ್ಯೆಯಾಗಿ ಸಮಾಜ ಸೇವೆ ಮಾಡಬೇಕೆಂಬ ಕನಸು ಕಂಡಿದ್ದಳು. ಆದರೆ ಕಾಲೇಜು ಲೆಕ್ಚರರ್ಸ್ ಆಕೆಯ ಕನಸನ್ನು ಹೊಸಕಿ ಹಾಕಿದ್ದಾರೆ. ಅವಳಿಗೆ ಸಿಗಬೇಕಾದ ನ್ಯಾಯ ಎಲ್ಲ ವಿದ್ಯಾರ್ಥಿಗಳಿಗೂ ಸಂದೇಶವಾಗಬೇಕು' ಎಂದು ಕಣ್ಣೀರಿಟ್ಟಿದ್ದಾರೆ. ಸದ್ಯ ಸೂರ್ಯನಗರ ಪೊಲೀಸರು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ಆಗೋದೇ ಕೆಲಸ, ಮೂರಾಯ್ತು ಈಗ 4ನೇ ಗಂಡ ಬೇಕಂತೆ: ಪತಿ ಸೈಕೋ ಎಂದು ಕೇಸ್‌ ಹಾಕಿದ್ದ ಟೆಕ್ಕಿಗೆ ಗಂಡನ ತಿರುಗೇಟು!
'ದಮ್ಮಿದ್ರೆ ಮೋದಿಗೆ ಹೋಗಿ ಹೇಳು': ದೇಶದ ಪ್ರಧಾನಿಗೆ ಕೆಟ್ಟ ಬೈಗುಳ, ಇಮ್ತಿಯಾಜ್ ವಿರುದ್ಧ FIR