
ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್‌ನಲ್ಲಿ ಜನವರಿ 24 ರಂದು ಯುವತಿಯ ಶವ ಪತ್ತೆಯಾಗಿತ್ತು. ಮಿಂಕಿ ಶರ್ಮಾ ಎಂಬ ಯುವತಿಯ ಸಾವಿಗೆ ಸಂಬಂಧಿಸಿದಂತೆ ವಿನಯ್ ರಜಪೂತ್ ಎಂಬಾತನನ್ನು ಬಂಧಿಸಲಾಗಿದೆ.
ಯುವತಿ ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ದೂರು ನೀಡಿದ್ದರು. ಪ್ರಮುಖ ರಸ್ತೆಗಳಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ಸುಳಿವು ಸಿಕ್ಕಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಯುವತಿಯ ಸ್ಕೂಟರ್ ಅನ್ನು ಆಕೆಯ ಸಹೋದ್ಯೋಗಿ ವಿನಯ್ ಬಳಸಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದರು. 12 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಯುವತಿಯೊಂದಿಗೆ ದೀರ್ಘಕಾಲದಿಂದ ಪ್ರೀತಿಸುತ್ತಿದ್ದ ಯುವಕನಿಗೆ ಆಕೆಯ ಮೇಲೆ ಉಂಟಾದ ಅನುಮಾನವೇ ಕೊ*ಲೆಗೆ ಕಾರಣವಾಗಿದೆ. ಯುವತಿಯನ್ನು ಕಚೇರಿಗೆ ಕರೆಸಿಕೊಂಡು ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದದ ವೇಳೆ ಯುವತಿಗೆ ಎಂಟಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿ, ನಂತರ ತಲೆ ಕತ್ತರಿಸಿದ್ದಾಗಿ ವಿನಯ್ ರಜಪೂತ್ ಪೊಲೀಸರಿಗೆ ತಿಳಿಸಿದ್ದಾನೆ. ಯಮುನಾ ಕಾಲೊನಿಯ ನಿವಾಸಿಯಾಗಿದ್ದ ಅದೇ ಖಾಸಗಿ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ, ಬರ್ಬರವಾಗಿ 25 ವರ್ಷದ ಮಿಂಕಿ ಶರ್ಮಾ ಅವರನ್ನು ಹ*ತ್ಯೆ ಮಾಡಿದ್ದಾನೆ.
ವಿನಯ್ ಹಾಗೂ ಮಿಂಕಿ ಇಬ್ಬರೂ ಲವ್ ಮಾಡುತ್ತಿದ್ದರು. ಆದರೆ ಕಳೆದ ಆರು ತಿಂಗಳಿನಿಂದ ಮಿಂಕಿ ಶರ್ಮಾ ಇನ್ನ್ಯಾರದ್ದೋ ಜತೆ ಮಾತಾಡುತ್ತಿದ್ದಳು. ಈ ವಿಚಾರವಾಗಿವಾಗಿ ಮಿಂಕಿ ಹಾಗೂ ವಿನಯ್ ನಡುವೆ ಆಗಾಗ ಜಗಳಗಳಾಗುತ್ತಿದ್ದವು. ತಾಳ್ಮೆ ಕಳೆದುಕೊಂಡ ವಿನಯ್, ಮಿಂಕಿಯನ್ನು ಕೊಲೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ. ಹೀಗಾಗಿ ನಿನ್ನ ಜತೆ ಮಾತಾಡೋದು ಇದೆ ಎಂದು ಮಿಂಕಿಯನ್ನು ವಿನಯ್ ಆಫೀಸ್‌ಗೆ ಕರೆಸಿಕೊಂಡು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊ*ಲೆ ಮಾಡಿದ್ದಾನೆ.
ಯುವಕ ಯಮುನಾ ನದಿಯಲ್ಲಿ ಶವವನ್ನು ಎಸೆಯಲು ಯೋಜಿಸಿದ್ದ. ಆದರೆ ಚೀಲದ ಭಾರವನ್ನು ಹೊರಲು ಸಾಧ್ಯವಾಗದ ಕಾರಣ ಜವಾಹರ್ ನಗರದ ಸೇತುವೆಯಿಂದ ದೇಹದ ಭಾಗವನ್ನು ಎಸೆದು ಪರಾರಿಯಾಗಿದ್ದ. ಯುವತಿಗೆ ಬೇರೊಬ್ಬರೊಂದಿಗೆ ಸಂಬಂಧವಿದೆ ಎಂಬ ಅನುಮಾನದಿಂದ ಕೊಲೆ ಮಾಡಿದ್ದಾಗಿ ವಿನಯ್ ಪೊಲೀಸರಿಗೆ ತಿಳಿಸಿದ್ದಾನೆ.
ಕಚೇರಿಯಲ್ಲೇ ಶವವನ್ನು ತುಂಡು ಮಾಡಿ ಚೀಲದಲ್ಲಿ ತುಂಬಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಯುವತಿ ಖಾಸಗಿ ಕಂಪನಿಯೊಂದರ ಎಚ್‌ಆರ್ ವಿಭಾಗದಲ್ಲಿ ಉದ್ಯೋಗಿಯಾಗಿದ್ದಳು. ತಲೆಯನ್ನು ಚರಂಡಿಗೆ ಎಸೆದಿದ್ದಾಗಿ ಯುವಕ ಹೇಳಿಕೆ ನೀಡಿದ್ದಾನೆ. ಯುವತಿಯ ತಲೆ ಇನ್ನೂ ಪತ್ತೆಯಾಗಿಲ್ಲ. ಘಟನೆಯ ಬಗ್ಗೆ ಅನುಮಾನ ಬಾರದಂತೆ ಮಿಂಕಿ ಸಂಬಂಧಿಕರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಮಿಂಕಿ ಶರ್ಮಾ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿ ಖಾಸಗಿ ಕಂಪನಿಯೊಂದರಲ್ಲಿ ಎಚ್ ಆರ್ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 23 ಜನವರಿ ಮಧ್ಯಾಹ್ನ 2 ಗಂಟೆಗೆ ಮಿಂಕಿ ಮನೆಯಿಂದ ಹೊರಟಿದ್ದರು. ಮಿಂಕಿ ಮನೆಯಲ್ಲಿ ತಮ್ಮ ಸಹೋದರನ ಮದುವೆ ಕಾರ್ಡ್ ಕೊರಿಯರ್ ಮಾಡಲು ತೆರಳುತ್ತಿರುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರು. ಆದರೆ ಸಂಜೆ ಎಂಟು ಗಂಟೆಯಾದರೂ ಮಿಂಕಿ ಮನೆಗೆ ವಾಪಾಸ್ಸಾಗಿರಲಿಲ್ಲ. ಅಂದಹಾಗೆ ಮಿಂಕಿ ಶರ್ಮಾ ಅವರ ಆರನೇ ಅಣ್ಣನ ಮದುವೆ ಮುಂಬರುವ ಫೆಬ್ರವರಿ 06ಕ್ಕೆ ನಿಗದಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ