ಕಾಲೇಜು ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅವುಗಳನ್ನು ಇನ್ ಸ್ಟಾಗ್ರಾಮ ಮೂಲಕ ಹರಿ ಬಿಟ್ಟ ಪ್ರಕರಣದಲ್ಲಿ ಹುಬ್ಬಳ್ಳಿಯ ಸಮರ್ಥ ಕಾಲೇಜಿನಲ್ಲಿ ಓರ್ವ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಹುಬ್ಬಳ್ಳಿ (ಆ.09): ಕಾಲೇಜು ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅವುಗಳನ್ನು ಇನ್ ಸ್ಟಾಗ್ರಾಮ ಮೂಲಕ ಹರಿ ಬಿಟ್ಟ ಪ್ರಕರಣದಲ್ಲಿ ಹುಬ್ಬಳ್ಳಿಯ ಸಮರ್ಥ ಕಾಲೇಜಿನಲ್ಲಿ ಓರ್ವ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹುಬ್ಬಳ್ಳಿ ಧಾರವಾಡ ಪೊಲೀಸ ಕಮಿಷನ್ ಸಂತೋಷ ಬಾಬು ಬಂಧನ ಮಾಹಿತಿ ಖಚಿತ ಪಡಿಸಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಸಮರ್ಥ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ಈಘಟನೆ ನಡೆದಿತ್ತು. ಕಾಲೇಜಿನಲ್ಲಿ ನಾಲ್ಕು ಜನ ವಿದ್ಯಾರ್ಥಿನಿಯ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಪ್ ಮಾಡಿ Kashmir0009 ಎಂಬ ಇನ್ ಸ್ಟಾಗ್ರಾಮ ಖಾತೆಯೆ ಮೂಲಕ ಅಪ್ಲೋಡ್ ಮಾಡಲಾಗಿತ್ತು. ಈ ಬಗ್ಗೆ ನಾಲ್ವರು ವಿದ್ಯಾರ್ಥಿನಿಯರು ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಯುವತಿರಯ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅಪ್ಲೋಡ್ ಮಾಡುತ್ತಿದ್ದ ಕಿರಾತಕನನ್ನ ಬಂಧಿಸಿಲಾಗಿದೆ.
ಎಸ್ಸಿ-ಎಸ್ಟಿ ಕಾಯ್ದೆಯಡಿ ಸುಳ್ಳು ಕೇಸು: ಹೈಕೋರ್ಟ್ ಕಿಡಿ
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಹುಬ್ಬಳ್ಳಿಯ ಸಮರ್ಥ ಕಾಲೇಜಿನ ನಾಲ್ವರು ಬಿ.ಕಾಂ ವಿದ್ಯಾರ್ಥಿನಿಯರ ಮಾರ್ಪ್ ಮಾಡಿದಪೋಟೋಗಳು ಕಳೆದ ಮೂರು ತಿಂಗಳಿಂದ ಸಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿತ್ತು. ಕಳೆದ ಜೂನ್ 20 ರಂದು ಮೊದಲ ಬಾರಿಗೆ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆರಂಭದಲ್ಲಿ ಪ್ರಕರಣವನ್ನು ಕಾಲೇಜು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ ಕಿಡಿಗೇಡಿ ಆರೋಪಿ ರಜತ್ ಮಾತ್ರ ತನ್ನ ಚಾಳಿ ಮುಂದುವರೆಸಿದ್ದ, ತನ್ನ ವಿರುದ್ಧ ಯಾರು ಕ್ರಮ ಕೈಗೊಳ್ಳಲು ಸಾದ್ಯವಿಲ್ಲ, ಪೊಲೀಸರು ಸಹ ನನ್ನ ಹಿಡಿಯಲು ಸಾದ್ಯವಿಲ್ಲ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸರಿಗೂ ಸವಾಲು ಹಾಕಿ ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದ್ದ, ಇದರಿಂದ ಸಾಕಷ್ಟು ನೋವು ಅನುಭವಿಸಿದ ವಿದ್ಯಾರ್ಥಿನಿಯರು ಪೋಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರು. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಅಲರ್ಟ್ ಅದ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ವಿರುದ್ಧ ವ್ಯವಸ್ಥಿತ ಷಡ್ಯಂತ್ರ: ಸಚಿವ ಕೃಷ್ಣ ಬೈರೇಗೌಡ
ಬಂಧಿತ ಆರೋಪಿ ಅದೇ ಕಾಲೇಜು ವಿದ್ಯಾರ್ಥಿ: ಹೌದು ವಿದ್ಯಾರ್ಥಿನಿಯರು ಪೋಟೋ ಮಾರ್ಪ್ ಮಾಡಿ ಅಪ್ಲೋಡ್ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ರಜತ್ ಅದೇ ಸಮರ್ಥ ಕಾಲೇಜಿನ ವಿದ್ಯಾರ್ಥಿ ಅನ್ನೋದು ಬೆಳಕಿಗೆ ಬಂದಿದ್ದ. ಅದೇ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ರಜತ್ ಸರಿಯಾಗಿ ಕಾಲೇಜಿಗೆ ಬರುತ್ತಿರಲಿಲ್ಲ. ಇದೇ ಕಾರಣಕ್ಕೆ ಹಾಜರಾತಿ ಕಡಿಮೆ ಇದೆ ಎಂದು ಆತನನ್ನು ಕಾಲೇಜಿನಿಂದ ಆಡಳಿತ ಮಂಡಳಿ ಹೊರಹಾಕಿತ್ತು. ಇದೇ ಸಿಟ್ಟಿಗೆ ಆರೋಪಿ ತನ್ನದೇ ಕ್ಲಾಸ್ ಮೇಟ್ ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅವುಗಳನ್ನು ಇನಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಎನ್ನಲಾಗಿದೆ. ಕೇವಲ ರಜತ್ ಮಾತ್ರ ಇದರಲ್ಲಿ ಭಾಗಿಯಾಗಿದ್ದನ್ನ ಅಥವಾ ಇನ್ನೂ ಯಾರಾದರೂ ಆತನ ಜೊತರ ಕೈ ಜೋಡಿಸಿದ್ರಾ ಅನ್ನೊದು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.