ಕೊಪ್ಪಳ: ಕೋವಿಡ್‌ ರೋಗಿಗೆ ಆಹಾರ ನೀಡದೆಕೊಲೆ ಆರೋಪ: ದೂರು ದಾಖಲು!

By Kannadaprabha News  |  First Published Jan 24, 2024, 5:18 AM IST

ನಗರದ ಹೊಸಪೇಟೆ ರಸ್ತೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಸರಿಯಾಗಿ ಆಹಾರ ಮತ್ತು ನೀರು ನೀಡದೆ, ಸಂಬಂಧಿಕರು ಮತ್ತು ಇನ್ನೂ ಕೆಲವರು ಸೇರಿ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆ ಪ್ರಕರಣ ದಾಖಲಾಗಿದೆ.


ಕೊಪ್ಪಳ (ಜ.24): ನಗರದ ಹೊಸಪೇಟೆ ರಸ್ತೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಸರಿಯಾಗಿ ಆಹಾರ ಮತ್ತು ನೀರು ನೀಡದೆ, ಸಂಬಂಧಿಕರು ಮತ್ತು ಇನ್ನೂ ಕೆಲವರು ಸೇರಿ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆಯ ಶಾಂತಪ್ಪ ಅವರು ನ್ಯಾಯಾಲಯದಲ್ಲಿ ದಾಖಲಿಸಿದ ಖಾಸಗಿ ದೂರಿನ ಮೇರೆಗೆ 11 ಮಂದಿ ವಿರುದ್ಧ ಕೊಪ್ಪಳದಲ್ಲಿ ದೂರು ದಾಖಲಾಗಿದೆ.

ಏನಿದು ಪ್ರಕರಣ?: ಹಂಪಸಾಗರದ ಪ್ರವೀಣ ಎಂಬವರು ೨೦೨೧ರ ಮೇ ತಿಂಗಳಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಅವರ ಸಾವಿಗೆ ಆಸ್ಪತ್ರೆ ಸಿಬ್ಬಂದಿ ಆಹಾರ ಮತ್ತು ನೀರು ನೀಡದಿರುವುದೇ ಕಾರಣ. ಇದು ಸಂಚಿನಿಂದಲೇ ಮಾಡಿರುವ ಕೊಲೆ ಎಂದು ಆರೋಪಿಸಲಾಗಿದೆ. ಪ್ರವೀಣ ಹಾಗೂ ಅವರ ಸಹೋದರ ಪ್ರದೀಪ್‌ ನಡುವೆ ಹಣಕಾಸಿನ ವ್ಯವಹಾರ ವಿಷಯವಾಗಿ ಜಗಳವಾಗಿದ್ದೇ ಈ ಕೊಲೆಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Latest Videos

ಜೆಎನ್‌.1 ವೈರಸ್ ಹಾವಳಿ ಹೆಚ್ಚಳ, 1000 ಗಡಿ ದಾಟಿದ ಸೋಂಕಿತರ ಸಂಖ್ಯೆ; ದೇಶದಲ್ಲೇ ಕರ್ನಾಟಕ ನಂ.1

click me!