ಖಾಸಗಿ ಸಂಸ್ಥೆಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿರುವ ಉಮೇಶ ಯಳವಂತಿ ಎಂಬುವವರ ಮೇಲೆ ಗುಂಡಿನ ದಾಳಿಯ ಯತ್ನ ನಡೆದಿದ್ದು, ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಸುನೀಲಕುಮಾರ ಬಸವರಾಜ ಪಾಟೀಲ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ.
ಕಲಬುರಗಿ(ಆ.27): ಗುರುತು ಪರಿಚಯ ವಿಚಾರಿಸಲು ಹೋದ ವ್ಯಕ್ತಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಸಂಭವಿಸಿದೆ. ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿರುವ ಉಮೇಶ ಯಳವಂತಿ ಎಂಬುವವರ ಮೇಲೆ ಗುಂಡಿನ ದಾಳಿಯ ಯತ್ನ ನಡೆದಿದ್ದು, ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಸುನೀಲಕುಮಾರ ಬಸವರಾಜ ಪಾಟೀಲ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ವಿವರ:
undefined
ರಾತ್ರಿ 11 ಗಂಟೆ ಸುಮಾರಿಗೆ ಚಾಲಕ ಉಮೇಶ ತಮ್ಮ ಸ್ನೇಹಿತನೊಂದಿಗೆ ಮನೆಗೆ ಬರುತ್ತಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ಸ್ಕಾರ್ಪಿಯೋ ವಾಹನದಲ್ಲಿ ಉಮೇಶ ಮನೆಯ ಹಿಂದುಗಡೆ ಕಾಣಿಸಿಕೊಂಡಿದ್ದಾನೆ. ಹಿಂದುಗಡೆ ಮನೆಯೊಂದರ ಎರಡನೆಯ ಅಂತಸ್ತಿನ ಕಡೆಗೆ ಧಾವಿಸಿದ್ದಾನೆ.
ಕಲಬುರಗಿ: 6 ವರ್ಷದ ಬಾಲಕಿ ಮೇಲೆ 60ರ ವೃದ್ಧನಿಂದ ಅತ್ಯಾಚಾರ
ಮೇಲಂತಸ್ತಿನತ್ತ ಬಂದು ನಿನ್ನ ಪೌರುಷ ತೋರಿಸು ಎಂದು ಅಪರಿಚಿತ ಒಡ್ಡಿದ್ದ ಸವಾಲು ಸ್ವೀಕರಿಸಿದ ಉಮೇಶ ಅತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ಮುಂದುವರೆದ ಅಪರಿಚಿತ ತನ್ನಲ್ಲಿದ್ದ ಪಿಸ್ತೂಲಿನಿಂದ ಉಮೇಶನ ಕಾಲಿಗೆ ಗುಂಡು ಹಾರಿಸಿದ್ದಾನೆ. ಆದರೆ ಗುಂಡು ಉಮೇಶನಿಗೆ ತಾಕದೇ ಪಕ್ಕದ ಗೋಡೆಗೆ ತಗುಲಿದೆ. ಗುಂಡಿನ ಸದ್ದು ಕೇಳಿದ ಉಮೇಶ ಮಿತ್ರ ಅಲ್ಲಿಗೆ ಬಂದು ಆತನನ್ನು ಅಲ್ಲಿಂದ ಕರೆದೋಯ್ದಿದ್ದಾನೆ. ಅಪರಿಚಿತ ವ್ಯಕ್ತಿ ತನ್ನ ಬಂದುಕಿನಿಂದ ಮತ್ತೊಂದು ಸುತ್ತು ಗುಂಡು ಹಾರಿಸಲು ಸಜ್ಜಾಗುತ್ತಿದ್ದನೆಂದು ಉಮೇಶ ಜಾಧವ್ ಪೊಲೀಸರಿಗೆ ತಿಳಿಸಿದ್ದಾನೆ.
ಅಪರಿಚಿತನೊಂದಿಗೆ ರಾತ್ರಿ ಹೊತ್ತಲ್ಲಿ ತಮ್ಮ ವಾದ - ವಾಗ್ವಾದ ನಡೆದಿದೆ. ಯಾರ ಮನೆಗೆ ಬಂದಿರುವೆ, ಯಾಕೆ ಬಂದಿರುವೆ ಎಂದು ಕೇಳಿದ್ದಕ್ಕೆ ಯಾವುದೇ ಉತ್ತರ ಹೇಳಲು ಸಿದ್ಧವಾಗದ ಆತ ಮಹಡಿ ಮನೆಯ ಮೊದಲ ಅಂತಸ್ತಿಗೆ ಓಡುತ್ತ ಹೋದ. ಅಲ್ಲೇ ಬಂದೂಕು ಇತ್ತೋ, ಜೊತೆಗೇ ಇತ್ತೋ ಗೊತ್ತಿಲ್ಲ. ನಾನೂ ಅತ್ತ ಹೋಗಿ ವಿಚಾರಿಸುತ್ತಿದ್ದಂತೆಯೇ ಬಂದೂಕಿನಿಂದ ಫೈರಿಂಗ್ ಮಾಧಿಡಿದನೆಂದು ಉಮೇಶ ಹೇಳಿದ್ದಾನೆ.
ಈ ಕುರಿತು ಚಾಲಕ ಉಮೇಶ ಯಳವಂತಿ ರೋಜಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು,ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ ಆಯುಕ್ತ ಚೇತನ ಆರ್ ಹಾಗೂ ಇತರ ಪೊಲೀಸ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.