
ಮಂಡ್ಯ(ಜು.10): ಕ್ರೀಡೆ ಮತ್ತು ಚಿತ್ರಕಲೆ ಕಲಿಸಿಕೊಡುವ ನೆಪದಲ್ಲಿ ಒಂದೇ ಶಾಲೆಯ 10-15 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಪ್ರಕರಣ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಜಕ್ಕನಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಅಮೃತಹಳ್ಳಿ ಗ್ರಾಮದ ಯೋಗಿ ಎಂಬಾತ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ. ಈ ಸಂಬಂಧ ನಾಲ್ವರು ವಿದ್ಯಾರ್ಥಿನಿಯರು ನೀಡಿದ ಹೇಳಿಕೆಯನ್ನು ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಎಸ್.ಎಂ.ಶೈಲಜಾ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು 15-17 ವರ್ಷದವರಾಗಿದ್ದು, ಅಪ್ರಾಪ್ತಯರಾಗಿದ್ದಾರೆ.
ಕರಾವಳಿ ಹುಡ್ಗೀರಿಗೆ ಎಡಿಟೆಡ್ ಬೆತ್ತಲೆ ಫೋಟೋ ತೋರಿಸಿ ಅತ್ಯಾಚಾರವೆಸಗುತ್ತಿದ್ದ ರೇಪಿಸ್ಟ್ ಗ್ಯಾಂಗ್ ಅರೆಸ್ಟ್!
ಈತ ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಶಾಲೆಯ ಸಮೀಪವೇ ಸ್ವಂತ ತರಬೇತಿ ಕೇಂದ್ರ ನಡೆಸುತ್ತಿದ್ದ. ಕೆಲ ವಿದ್ಯಾರ್ಥಿನಿಯರಿಗೆ ಕ್ರೀಡೆ, ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಕಾರಣ ತರಬೇತಿಗೆ ಸೇರಿಕೊಂಡಿದ್ದರು.
'ಈತ ರಾತ್ರಿವರೆಗೂ ಪಿ.ಟಿ.ರೂಂನಲ್ಲೇ ಇರುತ್ತಿದ್ದ. ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ, ಬೇರೆ ಸಂದರ್ಭ ಗಳಲ್ಲಿ ಕದ್ದು ತನ್ನ ಮೊಬೈಲ್‌ನಲ್ಲಿ ಹುಡುಗಿಯರ ಬೆತ್ತಲೆ, ಅರೆ ಬೆತ್ತಲೆ ಫೋಟೋಗಳನ್ನು ತೆಗೆದು, ಪೋಷಕರಿಗೆ ಕಳುಹಿಸುವುದಾಗಿ ಹೆದರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ತನ್ನೊಂದಿಗೆ ಮಲಗುವಂತೆ ಬಲವಂತ ಮಾಡುತ್ತಿದ್ದ. ತರಬೇತಿ ನೀಡು ವ ವೇಳೆ ಕೆಟ್ಟದಾಗಿ ವರ್ತಿಸುತ್ತಿದ್ದ. ಅಮೃತಹಳ್ಳಿ ಗ್ರಾಮದ ವಿದ್ಯಾರ್ಥಿನಿಯೊಬ್ಬಳಿಗೆ ಒಂದು ದಿನ ತಿನ್ನಲು ಐಸ್‌ಕ್ರೀಂ ಕೊಡಿಸಿದ್ದ. ಅದನ್ನು ತಿಂದ ಬಳಿಕ ಆಕೆ ನಿದ್ರೆಗೆ ಜಾರಿದ್ದಳು. ಆಕೆ ಮತ್ತೆ ಎದ್ದಾಗ ಪಿ.ಟಿ.ರೂಂನಲ್ಲಿ ಇದ್ದಳು. ನಂತರ ಆಕೆಯ ಬೆತ್ತಲೆ ಫೋಟೋ ತೋರಿಸಿ ನನ್ನೊಂದಿಗೆ ಮಲಗಲಿಲ್ಲವೆಂದರೆ ನಿಮ್ಮ ತಂದೆ-ತಾಯಿಗೆ ತೋರಿಸುವು ದಾಗಿ ಬೆದರಿಸಿದ್ದ' ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ವಿದ್ಯಾ ರ್ಥಿನಿಯರು ಪತ್ರ ಬರೆದು ದೂರಿದ್ದಾರೆ, ಹೇಳಿಕೆ ಕೂಡ ಕೊಟ್ಟಿದ್ದಾರೆ. ಆರೋಪಿ ವಿರುದ್ದ ಮೇಲುಕೋಟೆ ಪೊಲೀಸರು ಪೋಕೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ