KGF-2 ಪ್ರದರ್ಶನ ವೇಳೆ ಗುಂಡಿನ ದಾಳಿ, ಆರೋಪಿ ಅರೆಸ್ಟ್, 1 ತಿಂಗಳಿನಿಂದ ನಡೆದಿತ್ತು ಸರ್ಚ್ ಆಪರೇಷನ್

By Suvarna News  |  First Published May 19, 2022, 6:16 PM IST

* ಕೆ.ಜಿ.ಎಫ್ ಫಿಲಂ ವೀಕ್ಷಣೆ ವೇಳೆ ಯುವಕನ ಮೇಲೆ ಶೂಟೌಟ್ ಪ್ರಕರಣ
* ಗುಂಡು ಹಾರಿಸಿ ಎಸ್ಕೇಪ್ ಆಗಿದ್ದ ಚಾಲಾಕಿ ಆರೋಪಿ ಅಂದರ್
* ಶಿಗ್ಗಾಂವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಏ.19 ರಂದು ರಾತ್ರಿ ನಡೆದಿದ್ದ ಗುಂಡಿನ ದಾಳಿ


ವರದಿ - ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ

ಹಾವೇರಿ (ಮೇ 19 ):
ಶಿಗ್ಗಾಂವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಏ.19 ರಂದು ರಾತ್ರಿ  ಕೆ.ಜಿ.ಎಫ್ ಚಾಪ್ಟರ್-2 ವೀಕ್ಷಣೆ ವೇಳೆ  ನಡೆದಿದ್ದ ಗುಂಡಿನ ದಾಳಿ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಅಂದು ಫೈರ್ ಮಾಡಿ ಎಸ್ಕೇಪ್ ಆಗಿದ್ದ ಐನಾತಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ಕ್ಷೇತ್ರದ ಕೇಂದ್ರಸ್ಥಾನ ನಗರದಲ್ಲಿನ ರಾಜಶ್ರೀ ಚಿತ್ರಮಂದಿರದಲ್ಲಿ  ಅಂದು ರಾತ್ರಿ ಕೆಜಿಎಫ್‌-2  ಚಿತ್ರದ ಪ್ರದರ್ಶನದ ವೇಳೆ ಫೈರಿಂಗ್ ನಡೆದಿತ್ತು. ಮುಗಳಿ ಗ್ರಾಮದ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ ಎಂಬಾತನ ಮೇಲೆ ಈ ಗುಂಡಿನ ದಾಳಿಯಾಗಿತ್ತು.ಎರಡು ಗುಂಡುಗಳು ಹೊಟ್ಟೆಯ ಭಾಗಕ್ಕೆ ಹೊಕ್ಕಿದ್ದರೆ, ಮತ್ತೊಂದು ತೋಳಿಗೆ ಸವರಿಕೊಂಡು ಹೋಗಿದ್ದವು‌.ಗಾಯಾಳು ವಸಂತಕುಮಾರ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

Tap to resize

Latest Videos

undefined

  ಅಂದಿನಿಂದ ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದ ಆಸಾಮಿ ಇಂದು ಪೊಲೀಸರ ತೆಕ್ಕೆಗೆ ಬಿದ್ದಿದ್ದಾನೆ.ಈ ಬಗ್ಗೆ ಇಂದು (ಗುರುವಾರ)  ಹಾವೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಹಾವೇರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ,  ಆರೋಪಿ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

KGF 2 Movie ಕೆಜಿಎಫ್ 2 ಪ್ರದರ್ಶನದ ವೇಳೆ ಗುಂಡಿನ ದಾಳಿ, ಗಾಯಳು ಸ್ಥಿತಿ ಗಂಭೀರ!

ಆರೋಪಿ ಮಂಜುನಾಥ್ ಅಲಿಯಾಸ್ ಮಲೀಕ್ ಪಾಟೀಲ್ ಅರೆಸ್ಟ್ ಮಾಡಿದ್ದೇವೆ.ಶಿಗ್ಗಾವಿಯ ರಾಜಶ್ರೀ ಥಿಯೇಟರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ  ವಸಂತ್ ಎಂಬ ಯುವಕನ ಮೇಲೆ ಆರೋಪಿ ಫೈರ್ ಮಾಡಿದ್ದ. ಎರಡು ರೌಂಡ್ ಫೈರ್ ಮಾಡಿದ್ದ.ಆಗ ಭಯಬೀತರಾಗಿ ಥಿಯೇಟರ್ ನಲ್ಲಿದ್ದ ಸುಮಾರು 70 ರಿಂದ 80 ಜನ ಓಡಿಹೋಗಿದ್ರು.ವಸಂತ್ ಕುಮಾರ್ ತೀವ್ರ ಗಾಯಗೊಂಡಿದ್ರು. ವಸಂತ್ ಕುಮಾರ್ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸದ್ಯ ವಸಂತ್ ಕುಮಾರ್ ಸೇಫ್ ಇದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಸಂತ್ ಕುಮಾರ್ ಸ್ನೇಹಿತ ದೂರು ದಾಖಲು ಮಾಡಿದ್ರು.ನಂತರ ತನಿಖೆ ಶುರು ಮಾಡಿದೆವು.ನಂತರ ಮೂರು ತಂಡಗಳನ್ನ ರಚಿಸಿ, ಎಲ್ಲ ಪ್ರಯತ್ನಗಳನ್ನ ಮಾಡಿ  ಸರ್ಚ್ ಮಾಡಿದ್ದೆವು. ಶಿಗ್ಗಾಂವಿ ಪೋಲಿಸರ ತಂಡ, ಜೊತೆಗೆ ವಿಶೇಷ ಅಪರಾಧ ತಂಡ ರಚಿಸಿ ಚುರುಕಿನ ತನಿಖೆ ನಡೆಸಿ ಆರೋಪಿ ಬಂಧಿಸಲಾಗಿದೆ ಎಂದು ಎಸ್ ಪಿ  ಹನುಮಂತರಾಯ ಹೇಳಿದರು.

ಇದು ಜಿಲ್ಲೆಗೆ ಬಹುಮುಖ್ಯವಾದ ಪ್ರಕರಣವಾಗಿತ್ತು.ಇದನ್ನ ಚಾಲೆಂಜ್ ಆಗಿ ತೆಗೆದುಕೊಂಡು ಸತತವಾಗಿ ಒಂದು ತಿಂಗಳಿಂದ ಸರ್ಚ್ ಆಪರೆಷನ್ ಮಾಡಿದ್ದೆವು ಗೋವಾ,ಬೆಂಗಳೂರು,ವಿಜಯಪುರ, ದಾಂಡೇಲಿ, ಮುಂಡಗೋಡ ಸುತ್ತಮುತ್ತ ಸರ್ಚ್ ಮಾಡಲಾಗಿತ್ತು‌. ಆದ್ರೆ ಮುಂಡಗೋಡ ಬಸ್ ನಿಲ್ದಾಣದಲ್ಲಿ ಅವನು ಇರುವಿಕೆ ಬಗ್ಗೆ ಸುಳಿವು ಸಿಗುತ್ತೆ.ಮಾಹಿತಿ ಆಧಾರದ ಮೇಲೆ ಮುಂಡಗೋಡದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.ಅವನ ಹತ್ತಿರ ಪಿಸ್ತೂಲ್ ಬಳಸುವುದಕ್ಕೆ ಯಾವುದೇ ರೀತಿಯ ಲೈಸನ್ಸ್ ಇಲ್ಲ.ಅವನಿಗೆ ಆಶ್ರಯ ಕೊಟ್ಟಂತಹ ವ್ಯಕ್ತಿ ಇಸ್ಮಾಯಿಲ್ ಶಿಗ್ಗಾಗಿ ತಾಲೂಕು ಬಂಕಾಪುರದವನು.ಅವನಿಗೆ ಪರಾರಿಯಾಗಲು ಸಹಾಯ ಮಾಡಿದ್ದ ಇಸ್ಮಾಯಿಲ್ ಕೂಡಾ ಅರಸ್ಟ್ ಆಗಿದ್ದಾನೆ.ಆರೋಪಿಗೆ ಸಹಾಯ ಮಾಡಿದ್ದು ಬೆಳಕಿಗೆ ಬಂದಿದ್ದರಿಂದ ಅವರನ್ನು ಕೂಡಾ ದಸ್ತಗಿರಿ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನೂ ತನಿಖೆಯನ್ನ ಮುಂದುವರೆಸಿದ್ದೇವೆ.ಆ ವೆಪನ್ ಅವನ ಕೈಗೆ ಹೇಗೆ ಬಂತು? ಎಲ್ಲಿ ತಗೊಂಡು ಬಂದ ಅನ್ನೋದನ್ನ ತನಿಖೆ ಮಾಡ್ತಿದ್ದೇವೆ.ಯಾಕಂದ್ರೆ ಅಕ್ರಮ ವೆಪನ್ ಬಳಸಿದ ಯಾವುದೇ ಘಟನೆ ಇದುವರೆಗೂ ಜಿಲ್ಲೆಯಲ್ಲಿ ಇರಲಿಲ್ಲ.ಇವರಿಗೆ ವೆಪನ್ ಹೇಗೆ ಸಿಕ್ತು ?ಯಾರು ಸಪ್ಲೈ ಮಾಡ್ತಿದ್ರು ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಯಲಿದೆ. 15 ರೌಂಡ್ ಬುಲೆಟ್, ಕಂಟ್ರಿ ಪಿಸ್ತೂಲ್ ವಶ ಪಡಿಸಿಕೊಂಡಿದ್ದೇವೆ ಎಂದು ಎಸ್ ಪಿ ಹನುಮಂತರಾಯ ಕಂಪ್ಲೀಟ್ ಡೀಟೇಲ್ಸ್ ನೀಡಿದರು...

click me!