Belagavi Crime: ಗಂಡನ ಮನೆಗೆ ಬರಲು ಒಲ್ಲೆ ಎಂದ ಪತ್ನಿ ಮೇಲೆ ಫೈರಿಂಗ್‌..!

By Kannadaprabha News  |  First Published Sep 14, 2022, 8:00 AM IST

ಆರೋಪಿಯನ್ನು ಬಂಧಿಸಿ, ರಿವಾಲ್ವಾರ್‌ ಮತ್ತು ನಾಲ್ಕು ಮದ್ದುಗುಂಡುಗಳನ್ನು ವಶಪಡಿಸಿಕೊಂಡ ಅಥಣಿ ಪೊಲೀಸರು


ಅಥಣಿ(ಸೆ.14):  ಪತಿ ಕಿರುಕುಳದಿಂದ ಬೇಸತ್ತು ತವರು ಮನೆಗೆ ಬಂದಿದ್ದ ಮಹಿಳೆ ಮೇಲೆ ಫೈರಿಂಗ್‌ ಮಾಡಿ ಕೊಲೆಗೆ ಯತ್ನಿಸಿದ್ದ ಪತಿಯನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಅಥಣಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಶಿವಾನಂದ ಕಾಲೆಬಾಗ (41) ಬಂಧಿತ ಪತಿ. ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಪ್ರೀತಿ ಎಂಬ ಮಹಿಳೆ ತನ್ನ ಪತಿ ಶಿವಾನಂದ ಕಾಲೆಬಾಗ ಎಂಬುವನನ್ನು ಬಿಟ್ಟು ತನ್ನ ತವರು ಮನೆಯಾದ ಅಥಣಿಗೆ ಬಂದು ನೆಲೆಸಿದಳು. ಕಳೆದ ಮೂರು ತಿಂಗಳಿಂದ ತನ್ನ ಪತ್ನಿಯಿಂದ ದೂರವಿದ್ದ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಶಿವಾನಂದಗೆ ತನ್ನ ಪತ್ನಿಯ ಅನಿವಾರ್ಯತೆ ಗೊತ್ತಾಗಿ, ತನಗೆ ತನ್ನ ಹೆಂಡತಿ ಬೇಕೆಂದು ಹಠ ಹಿಡಿದಿದ್ದ ಸೋಮವಾರ ತಡರಾತ್ರಿ ಅಥಣಿಯ ಪತ್ನಿ ತವರು ಮನೆಗೆ ಬಂದ ಪತಿ ಶಿವಾನಂದ ತನ್ನ ಮನೆಗೆ ಬರುವಂತೆ ಪತ್ನಿಯನ್ನು ಒತ್ತಾಯಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ.

ಆಗ ಶಿವಾನಂದ ತನ್ನ ಪಿಸ್ತೂಲ್‌ ತೆಗೆದು ಕೊಲೆ ಮಾಡುವ ಪ್ರಯತ್ನ ಮಾಡಿದ್ದಾನೆ. ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿರುವ ಪ್ರೀತಿ ಮತ್ತು ಅವರ ಸಂಬಂಧಿಕರು ಅಥಣಿ ಠಾಣೆಯಲ್ಲಿ ದೂರು ನೀಡಿದ್ದು, ಅಥಣಿ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಹತ್ತಿರವಿದ್ದ ರಿವಾಲ್ವಾರ್‌ ಮತ್ತು ನಾಲ್ಕು ಮದ್ದುಗುಂಡುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Latest Videos

undefined

ಬೆಳಗಾವಿ: ಹೆಸ್ಕಾಂ ಗುತ್ತಿಗೆ ನೌಕರ ನೇಣಿಗೆ ಶರಣು: ಅಧಿಕಾರಿಗಳ ಕಿರುಕುಳವೇ ಕಾರಣ?

ಹೆಸ್ಕಾಂ ಕಾರ್ಮಿಕ ಆತ್ಮಹತ್ಯೆ ಪ್ರಕರಣ: ಇಬ್ಬರ ಬಂಧನ

ಅಥಣಿ: ಭಾನುವಾರ ತಡರಾತ್ರಿ ಅಥಣಿ ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಕಾರ್ಮಿಕನೋರ್ವ ಆತ್ಮಹತ್ಯೆಗೆ ಶರಣಾಗಿದ ಘಟನೆಗೆ ಸಂಬಂಧಪಟ್ಟಂತೆ ಹೆಸ್ಕಾಂ ಇಲಾಖೆಯ ಇಬ್ಬರು ಸಹೋದ್ಯೋಗಿಗಳನ್ನು ಅಥಣಿ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.

ಓರ್ವ ಮೇಲಧಿಕಾರಿ ಮತ್ತು ಲೈನ್‌ಮನ್‌ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಭೇದಭಾವದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೃತ ಮಂಜುನಾಥ ಮುತ್ತಗಿ ಬರೆದಿಟ್ಟಡೆತ್ತ ನೋಚ್‌ ಪತ್ತೆಯಾಗಿದ್ದು, ಅಲ್ಲದೇ ಆತ್ಮಹತ್ಯೆ ಮಾಡಿಕೊಂಡಿರುವ ಮಂಜುನಾಥ ಮುತ್ತಗಿ ಪತ್ನಿ ಲಕ್ಷ್ಮೀ ಅಥಣಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು , ನನ್ನ ಪತಿಯ ಸಾವಿಗೆ ಅಥಣಿ ಹೆಸ್ಕಾಂ ಅಧಿಕಾರಿ ನಜೀರ ಡಾಲಾಯತ, ಲೈನ್‌ಮನ್‌ ಬಸವರಾಜ ಸದಾಶಿವ ಕುಂಬಾರ ಕಾರಣ ಎಂದು ಆರೋಪಿಸಿದ್ದಾರೆ. ನನ್ನ ಪತಿಗೆ ಭೇದಭಾವ , ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.
 

click me!