Bengaluru: ಲಂಚಕ್ಕೆ ಕೈ ಚಾಚಿ ಜೈಲು ಸೇರಿದ ಲೇಡಿ ಇನ್ಸ್‌ಪೆಕ್ಟರ್‌

By Govindaraj S  |  First Published Apr 21, 2022, 3:00 AM IST

ಜಕ್ಕೂರು ವಾರ್ಡ್‌ನಲ್ಲಿ ನೆಲದಡಿ ಗ್ಯಾಸ್‌ ಲೇನ್‌ ಸಂಪರ್ಕಿಸುವ ಕಾಮಗಾರಿ ನಡೆಸಲು .20 ಸಾವಿರ ಲಂಚ ಸ್ವೀಕರಿಸುವಾಗ ಮಹಿಳಾ ಸಂಚಾರ ಪೊಲೀಸ್‌ ಇನ್ಸ್‌ಪೆಕ್ಟರ್‌ವೊಬ್ಬರು ಠಾಣೆಯಲ್ಲೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬುಧವಾರ ಬಿದ್ದಿದ್ದಾರೆ.


ಬೆಂಗಳೂರು (ಏ.21): ಜಕ್ಕೂರು ವಾರ್ಡ್‌ನಲ್ಲಿ ನೆಲದಡಿ ಗ್ಯಾಸ್‌ ಲೇನ್‌ ಸಂಪರ್ಕಿಸುವ ಕಾಮಗಾರಿ ನಡೆಸಲು 20 ಸಾವಿರ ಲಂಚ (Bribe) ಸ್ವೀಕರಿಸುವಾಗ ಮಹಿಳಾ ಸಂಚಾರ ಪೊಲೀಸ್‌ ಇನ್ಸ್‌ಪೆಕ್ಟರ್‌ವೊಬ್ಬರು (Traffic Police Inspector) ಠಾಣೆಯಲ್ಲೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬುಧವಾರ ಬಿದ್ದಿದ್ದಾರೆ. ಚಿಕ್ಕಜಾಲ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಹಂಸವೇಣಿ ಬಂಧಿತರಾಗಿದ್ದು, ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಹೆಡ್‌ ಕಾನ್‌ಸ್ಟೇಬಲ್‌ ಗಂಗರಾಜು ಪತ್ತೆಗೆ ತನಿಖೆ ನಡೆದಿದೆ. ಈ ಕೃತ್ಯದಲ್ಲಿ ಪಾತ್ರದ ಶಂಕೆ ಮೇರೆಗೆ ಕಾನ್‌ಸ್ಟೇಬಲ್‌ ಅಮುಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಜಕ್ಕೂರು ವಾರ್ಡ್‌ನ ಟೆಲಿಕಾಂ ಬಡಾವಣೆಯ 8ನೇ ಅಡ್ಡರಸ್ತೆಯಲ್ಲಿ ಗ್ಯಾಸ್‌ ಪೈಪ್‌ ಲೇನ್‌ ಕಾಮಗಾರಿಗೆ ತಡೆದು ಇನ್ಸ್‌ಪೆಕ್ಟರ್‌ ಹಣ ಸುಲಿಗೆ ಮುಂದಾಗಿದ್ದರು. ಈ ಬಗ್ಗೆ ರಾಮಪುರ ನಿವಾಸಿ ಗುತ್ತಿಗೆದಾರ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಯನ್ನು ಗೇಲ್‌ ಕಂಪನಿಯಿಂದ ಮಾಸ್‌ ಕನ್‌ಸ್ಟ್ರಕ್ಷನ್‌ ಗುತ್ತಿಗೆ ಪಡೆದಿದೆ. ಜಕ್ಕೂರು ವಾರ್ಡ್‌ನ ಟೆಲಿಕಾಂ ಬಡಾವಣೆಯಲ್ಲಿ ಕಾಮಗಾರಿಯನ್ನು ರಾಮಪುರದ ಗುತ್ತಿಗೆದಾರನಿಗೆ ಆ ಕಂಪನಿ ಉಪ ಗುತ್ತಿಗೆ ನೀಡಿತ್ತು. 

Tap to resize

Latest Videos

ಬೊಲೆರೋ ವಾಹನ ಮರಕ್ಕೆ ಡಿಕ್ಕಿ, 6 ಮಂದಿ ಸಾವು, ಮದ್ವೆ ಮುಗಿಸಿ ಮನೆಗೆ ಹೋಗುತ್ತಿದ್ದವರು ಮಸಣಕ್ಕೆ

ಅಂತೆಯೇ ಕಾಮಗಾರಿಯನ್ನು ಆರಂಭಿಸಲು ಗುತ್ತಿಗೆದಾರ ಮುಂದಾಗಿದ್ದರು. ಆದರೆ ಏ.13ರಂದು ಕಾಮಗಾರಿ ಸ್ಥಳಕ್ಕೆ ತೆರಳಿ ತಡೆದ ಕೋಬ್ರಾ ವಾಹನದ ಕಾನ್‌ಸ್ಟೇಬಲ್‌ ಅಮುಲು, ‘ನೀವು ಠಾಣೆಗೆ ಬಂದು ಇನ್ಸ್‌ಪೆಕ್ಟರ್‌ ಹಂಸವೇಣಿ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಗಂಗರಾಜು ಅವರನ್ನು ಕಾಮಗಾರಿಯ ದಾಖಲೆಗಳ ಸಮೇತ ಭೇಟಿಯಾಗುವಂತೆ’ ಸೂಚಿಸಿದ್ದರು. ಅಂತೆಯೇ ಠಾಣೆಗೆ ತೆರಳಿ ಇನ್ಸ್‌ಪೆಕ್ಟರ್‌ ಅವರನ್ನು ಗುತ್ತಿಗೆದಾರರು ಭೇಟಿಯಾಗಿದ್ದರು. ಆಗ ಗಂಗರಾಜು, ಗುತ್ತಿಗೆದಾರನಿಗೆ ಕಾಮಗಾರಿಗಳನ್ನು ಮುಂದುವರೆಸಲು 20 ಸಾವಿರ ಲಂಚದ ಹಣವನ್ನು ನೀಡಬೇಕು.

ಇನ್ನು ಹೆಚ್ಚುವರಿ ಕಾಮಗಾರಿಯನ್ನು ನಿರ್ವಹಿಸಲು 30 ಸಾವಿರ ಒಟ್ಟಾರೆ 50 ಸಾವಿರ ಹಣವನ್ನು ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಹಣ ಕೊಡದ ಹಿನ್ನೆಲೆಯಲ್ಲಿ ಏ.13ರಿಂದ 18ರ ವರೆಗೆ ಕಾಮಗಾರಿ ನಡೆಸಲು ಪೊಲೀಸರು ಅವಕಾಶ ಕೊಟ್ಟರಲಿಲ್ಲ. ಇದರಿಂದ ಬೇಸತ್ತ ಗುತ್ತಿಗೆದಾರ, ಎಸಿಬಿಗೆ ದೂರು ಸಲ್ಲಿಸಿದ್ದರು. ಅಂತೆಯೇ ಬುಧವಾರ .20 ಸಾವಿರ ಲಂಚ ಸ್ವೀಕರಿಸುವ ವೇಳೆ ಠಾಣೆಯಲ್ಲೇ ಇನ್ಸ್‌ಪೆಕ್ಟರ್‌ ಹಂಸವೇಣಿ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್, ಪೊಲೀಸರ ಕೈಸೇರಿದ ಪ್ರಾಥಮಿಕ ವರದಿ

ಮುಖ್ಯಪೇದೆ ಪರಾರಿ: ಈ ಕಾರ್ಯಾಚರಣೆ ವೇಳೆ ಗಂಗರಾಜು ತಪ್ಪಿಸಿಕೊಂಡಿದ್ದಾನೆ. ವಿಚಾರಣೆ ವೇಳೆ ತಾನು ಇನ್ಸ್‌ಪೆಕ್ಟರ್‌ ಸೂಚನೆ ಮೇರೆಗೆ ಗುತ್ತಿಗೆದಾರನನ್ನು ಭೇಟಿಯಾಗಿದ್ದೆ. ನಾನು ತಪ್ಪು ಮಾಡಿಲ್ಲ ಎಂದು ಅಮುಲು ಹೇಳಿಕೆ ನೀಡಿದ್ದಾನೆ. ಈ ಪ್ರಕರಣದಲ್ಲಿ ಆತ ನೇರವಾಗಿ ಪಾಲ್ಗೊಂಡಿದ್ದಾನೆಯೇ ಅಥವಾ ಇನ್ಸ್‌ಪೆಕ್ಟರ್‌ ಸೂಚನೆ ಮೇರೆಗೆ ಕರ್ತವ್ಯನಿರ್ವಹಿಸಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!