ಕರೆಂಟ್ ಕಂಬವೇರಿದ್ದ ಎಲೆಕ್ಟ್ರಿಶಿಯನ್‌ ಸಾವು, ರುಂಡ -ಮುಂಡ ಬೇರ್ಪಟ್ಟು ಘೋರ ದುರಂತ: ಕುಟುಂಬಸ್ಥರ ಅಕ್ರಂದನ

By Govindaraj S  |  First Published Aug 31, 2023, 11:21 PM IST

ಆತ ತಾನಾಯ್ತು ತನ್ನ ಕೆಲಸವಾಯ್ತು ಎಂದು ಗ್ರಾಮದಲ್ಲಿ ವ್ಯವಸಾಯದ ಸಣ್ಣಪುಟ್ಟ ಎಲೆಟ್ರೇಷನ್ ( ಎಲೆಕ್ಟ್ರಿಕ್ ವೈರಿಂಗ್)  ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದನು. ಆದರೆ ಇವತ್ತು ಬೆಳ್ಳಂಬೆಳಿಗ್ಗೆ ವಿದ್ಯುತ್ ವೈರ್‌ಲೈನ್ ಚೇಂಜ್ ಮಾಡಲು ಕಂಬ ಏರಿದ್ದೇ ತಪ್ಪಾಯ್ತು.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ಆ.31): ಆತ ತಾನಾಯ್ತು ತನ್ನ ಕೆಲಸವಾಯ್ತು ಎಂದು ಗ್ರಾಮದಲ್ಲಿ ವ್ಯವಸಾಯದ ಸಣ್ಣಪುಟ್ಟ ಎಲೆಟ್ರೇಷನ್ ( ಎಲೆಕ್ಟ್ರಿಕ್ ವೈರಿಂಗ್)  ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದನು. ಆದರೆ ಇವತ್ತು ಬೆಳ್ಳಂಬೆಳಿಗ್ಗೆ ವಿದ್ಯುತ್ ವೈರ್‌ಲೈನ್ ಚೇಂಜ್ ಮಾಡಲು ಕಂಬ ಏರಿದ್ದೇ ತಪ್ಪಾಯ್ತು. ಕರೆಂಟ್ ಅನ್ ಆದ ಪರಿಣಾಮ ಕ್ಷಣಾರ್ಧದಲ್ಲಿ ದೇಹದಲ್ಲಿ ಸುಟ್ಟು ರುಂಡ ಮುಂಡ ಬೇರಾಗಿ ಹೋಗಿರೋ ದಾರುಣ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ.

Tap to resize

Latest Videos

undefined

ಕ್ಷಣಾರ್ಧದಲ್ಲಿ ರುಂಡ ಮುಂಡ ಬೇರೆ ಬೇರೆಯಾಗಿ ಹೋಯ್ತು: ಸುಟ್ಟು ಕರಕಲಾಗಿರೋ ಮೃತದೇಹದ ಕುಟುಂಬಸ್ಥರ ಗೋಳಾಟ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ರೈತರು.ನಿರಂತರವಾಗಿ ವಿದ್ಯುತ್ ಪಡೆಯಲು ಹೋಗಿ ಜೀವ ಕಳೆದುಕೊಂಡ ಎಲೆಟ್ರೇಷನ್.. ಹೌದು, ಬೆಳ್ಳಂಬೆಳಿಗ್ಗೆ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಜನರು ಕಣ್ಣು ಬಿಡುತ್ತಿದ್ದಂತೆ ಕಂಬದ ಮೇಲಿನ ತಂತಿಯ ಮೇಲೆ ಮೃತ ದೇಹವೊಂದು ತೇಲಾಡುತ್ತಿತ್ತು.. ಏನಾಯ್ತೋ ಅನ್ನೋಷ್ಟರಲ್ಲಿ ಪ್ರಾಣ ಪಕ್ಷ ಹಾರಿ ಹೋಗಿತ್ತು.. ಹೀಗೆ ವೈರ ಮೇಲೆ ನೇತಾಡಿಕೊಂಡು ಬಿದ್ದಿರೋ ಈ ವ್ಯಕ್ತಿಯ ಹೆಸರು ಭದ್ರ. 

ಲೋಕಸಭೆಗೆ ಶ್ರೀರಾಮುಲು ಸ್ಪರ್ಧಿಸುವುದು ಸೂಕ್ತ: ಸೋಮಶೇಖರ ರೆಡ್ಡಿ

ದಮ್ಮೂರು ಗ್ರಾಮದಲ್ಲಿ ವ್ಯವಸಾಯದ ಜೊತೆಗೆ ಎಲೆಟ್ರೇಷನ್ ಕೆಲಸವನ್ನು ಮಾಡಿಕೊಂಡಿದ್ದನು.  ಕೃಷಿ ಚಟುವಟಿಕೆಗೆ ಕೇವಲ ಒಂಭತ್ತು ತಾಸು ಮಾತ್ರ ಸರ್ಕಾರ ವಿದ್ಯುತ್ ನೀಡುತ್ತದೆ. ನಂತರ ಆ ಲೈನ್ ಬಂದಾಗ್ತದೆ. ಇನ್ನೊಂದು ಲೈನ್ ನಲ್ಲಿ ಗ್ರಾಮಕ್ಕೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗ್ತದೆ. ಕೆಲವು ರೈತರು ಹೊಲಗಳಿಗೆ ನೀರು ಹರಿಸಲು ನಿರಂತರವಾಗಿ ಕರೆಂಟ್ ಇರೋ ಲೈನಿನ ವೈರ್‌ಗೆ ಕನೆಕ್ಷನ್ ಕೊಡಲು ಭದ್ರನಿಗೆ ಹೇಳಿದ್ದಾರೆ. ಆ ಕೆಲಸ ಮಾಡಲು ಭದ್ರ ಕಂಬವೇರೆದ್ದನು. ಆದ್ರೇ ದಿಡಿರನೇ ಬಂದಾಗಿದ್ದ ಲೈನ್‌ನಲ್ಲಿ ವಿದ್ಯುತ್ ಹರಿದಿದೆ ಪರಿಣಾಮ ಭದ್ರ ಸ್ಥಳದಲ್ಲಿ ಸುಟ್ಟು ಕರಕಲಾಗಿದ್ದಾನೆ. ಜೊತೆಗೆ ಆತನ ರುಂಡ ಕತ್ತರಿಸಿ ಕೆಳಗೆ ಬಂದಿದೆ.

ಮುಗಿಲು ಮಟ್ಟಿದ ಕುಟುಂಬಸ್ಥರ ಅಕ್ರಂದನ: ಇನ್ನೂ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುರುಗೋಡು ಪೊಲೀಸರು ತೆರಳಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮೇಲ್ನೋಟಕ್ಕೆ ಹೆಚ್ಚುವರಿ ವಿದ್ಯುತ್ ಗಾಗಿ ಲೈನ್ ಬದಲಾಣೆ ಮಾಡಲು ಹೋಗಿರೋದೇ ಘಟನೆಗೆ ಕಾರಣ ಎನ್ನಲಾಗ್ತಿದೆ. ಆದರೆ ಮೃತ 33 ವರ್ಷ ಭದ್ರನಿಗೆ ಓರ್ವ ಪತ್ನಿ ಸೇರಿದಂತೆ ಮೂವರು ಮಕ್ಕಳಿದ್ದಾರೆ. ಇವರಿಗೆ ಯಾರು ದಿಕ್ಕು ಅನ್ನೋ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ ಎಂದು ಸಂಬಂಧಿಕರಾದ ಲಕ್ಷ್ಮೀ, ರತ್ನಮ್ಮ ಮತ್ತು ತಿರುಮಲ ಕಣ್ಣಿರಿಟ್ಟರು

ಛಾಯಾಗ್ರಾಹಕರಿಗೆ ಹಂಪಿ ನೆಚ್ಚಿನ ತಾಣ: ಪವರ್‌ ಸ್ಟಾರ್‌ ಪುನೀತ್‌ಗೂ ಇಷ್ಟದ ಸ್ಥಳ

ಘಟನೆಯಲ್ಲಿ ಯಾರದ್ದು ತಪ್ಪು: ಇಲ್ಲಿ ಅನಧಿಕೃತವಾಗಿ ಕಂಬ ಹತ್ರಿರೋದು ಭದ್ರ ಅವರ ತಪ್ಪೇ ಅಥವಾ ಅವರನ್ನು ಕಂಬಕ್ಕೆ ಹತ್ತುವಂತೆ ಮಾಡಿದವರ ತಪ್ಪೋ ಗೊತ್ತಿಲ್ಲ. ಬೆಳಿಗ್ಗೆ ಅರು ಗಂಟೆಗೆ ಗ್ರಾಮದಲ್ಲಿ ದುರಂತವೊಂದು ನಡೆದು ಹೋಗಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಕುರುಗೋಡು ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.

click me!