ಸ್ನೇಹಿತರ ಜೊತೆ ಚಾರಣಕ್ಕೆ ಬಂದು ದಾರಿ ತಪ್ಪಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಗಗನ್ ದೀಪಕ್ ಸಿಂಗ್ ಮೃತ ದುರ್ದೈವಿ. ಉತ್ತರಪ್ರದೇಶ ಮೂಲದ ಮೃತ ಯುವಕ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಲೆಸಿದ್ದ ಯುವಕ.
ಬೆಂಗಳೂರು (ಡಿ.28): ಸ್ನೇಹಿತರ ಜೊತೆ ಚಾರಣಕ್ಕೆ ಬಂದು ದಾರಿ ತಪ್ಪಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಗಗನ್ ದೀಪಕ್ ಸಿಂಗ್ ಮೃತ ದುರ್ದೈವಿ. ಉತ್ತರಪ್ರದೇಶ ಮೂಲದ ಮೃತ ಯುವಕ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಲೆಸಿದ್ದ ಯುವಕ.
ಕಳೆದ ಭಾನುವಾರ ಗೆಳೆಯರೊಂದಿಗೆ ಸಾವನದುರ್ಗ ಏಕಶಿಲಾ ಬೆಟ್ಟಕ್ಕೆ ಚಾರಣ ಬಂದಿದ್ದ ಯುವಕ. ಸ್ನೇಹಿತನ ಜೊತೆ ಚಾರಣಕ್ಕೆ ಬಂದ ವೇಳೆ ದಾರಿ ತಪ್ಪಿ ಕಾಣೆಯಾಗಿದ್ದ. ಘಟನೆ ಮಾಹಿತಿ ತಿಳಿದು ಕಳೆದ ನಾಲ್ಕು ದಿನಗಳಿಂದ ಯುವಕನಿಗಾಗಿ ಹುಡುಕಾಟ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು. ಆದರೂ ಪತ್ತೆಯಾಗಿರಲಿಲ್ಲ. ಬಳಿಕ ಥರ್ಮಲ್ ಡ್ರೋನ್, ಶ್ವಾನದಳ ಸೇರಿ SDRF ತಂಡದಿಂದ ಶೋಧಕಾರ್ಯ ಮುಂದುವರಿಸಿದ್ದರು. ಸತತ 100 ಗಂಟೆಗಳ ಕಾರ್ಯಾಚರಣೆ ಬಳಿಕ ಯುವಕನ ಶವ ಪತ್ತೆಯಾಗಿದೆ. ಮೃತದೇಹ ಹೊರತೆಗೆಯುತ್ತಿರುವ ಪೊಲೀಸರು. ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
undefined
ಅಕಾಲಿಕ ಸಾವು ಎಂದರೇನು…. ಗರುಡ ಪುರಾಣದಲ್ಲಿ ಇದಕ್ಕೆ ಪರಿಹಾರವಿದೆಯಂತೆ !
ಶಬರಿಮಲೆ ಯಾತ್ರೆಗೆ ತೆರಳಿದ್ದ ವೇಳೆ ಕಾರು ಅಪಘಾತ
ಕುಶಾಲನಗರ: ಶಬರಿಮಲೆ ಯಾತ್ರೆಗೆ ತೆರಳಿದ ಯಾತ್ರಿಗಳ ಕಾರು ಶಬರಿಮಲೆಯ ಸಮೀಪ ಅಪಘಾತಕ್ಕೀಡಾಗಿ ಕುಶಾಲನಗರ ಸಮೀಪದ ಚಿಕ್ಕತೂರು ಗ್ರಾಮದ ನಿವಾಸಿ ಚಾಲಕ ಚಂದ್ರ ಎಂಬವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಅಪಘಾತದಲ್ಲಿ ಮೂರು ಮಂದಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿರುವುದಾಗಿ ತಿಳಿದು ಬಂದಿದೆ.
ತುಮಕೂರು ಬಳಿ ಸಚಿವ ಮಧು ಬಂಗಾರಪ್ಪ ಅವರಿದ್ದ ಕಾರು ಅಪಘಾತ
ಶಬರಿಮಲೆಗೆ ತೆರಳಿ ಹಿಂತಿರುಗುವ ಸಂದರ್ಭ ಕಾರು ಮರಕ್ಕೆ ಡಿಕ್ಕಿಯಾಗಿ ಘಟನೆ ಸಂಭವಿಸಿದೆ. ಸಿದ್ದಯ್ಯ ಬಡಾವಣೆಯ ನಿವಾಸಿಗಳಾದ ಲಿಂಗಂ, ಹಾಗೂ ಅವರ ಪುತ್ರ ಸಂತೋಷ್ ಮತ್ತು ಹರೀಶ್ ಗಂಭೀರ ಗಾಯಗೊಂಡು ಕೇರಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.