ಬೆಂಗಳೂರಿನಲ್ಲಿ ಸಕ್ರಿಯವಾಗಿದೆಯಾ ಲಿಂಗ ಪರಿವರ್ತನೆ ಮಾಡೋ ಜಾಲ? ಹಳ್ಳಿಯಲ್ಲಿ ಕೆಲಸವಿಲ್ಲದ ಪರದಾಡ್ತಿರೋ ಹುಡುಗರನ್ನು ಟಾರ್ಗೆಟ್ ಮಾಡಿಕೊಂಡು ಕೆಲಸ ಕೊಡಿಸೋ ನೆಪದಲ್ಲಿ ಲಿಂಗ ಪರಿವರ್ತನೆ ಮಾಡ್ತಾರಂತೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ (ಏ.02): ಬೆಂಗಳೂರಿನಲ್ಲಿ (Bengaluru) ಸಕ್ರಿಯವಾಗಿದೆಯಾ ಲಿಂಗ ಪರಿವರ್ತನೆ ಮಾಡೋ ಜಾಲ? ಹಳ್ಳಿಯಲ್ಲಿ ಕೆಲಸವಿಲ್ಲದ ಪರದಾಡ್ತಿರೋ ಹುಡುಗರನ್ನು (Youths) ಟಾರ್ಗೆಟ್ ಮಾಡಿಕೊಂಡು ಕೆಲಸ ಕೊಡಿಸೋ ನೆಪದಲ್ಲಿ ಲಿಂಗ ಪರಿವರ್ತನೆ ಮಾಡ್ತಾರಂತೆ. ಇಷ್ಟಕ್ಕೆ ಸುಮ್ಮನಾಗದೇ ಇಂತಹವರನ್ನು ಮಂಗಳಮುಖಿಯರನ್ನಾಗಿ ಮಾಡಿ ಭಿಕ್ಷೆ ಬೇಡಲು ಹಚ್ಚುತ್ತಾರಂತೆ. ಇಂತಾಹದ್ದೊಂದು ಅನುಮಾನಕ್ಕೆ ಹಡಗಲಿ ತಾಲೂಕಿನ ಹಳ್ಳಿಯ ಹುಡುಗ ಸಾಕ್ಷಿಯಾಗಿದ್ದಾನೆ. ಹೌದು! ಮಂಗಳಮುಖಿಯರ (Transgenders) ಹುಚ್ಚಾಟಕ್ಕೆ ಹಡಗಲಿ ತಾಲೂಕಿನ ಗ್ರಾಮವೊಂದರ ಯುವಕ ಹೈರಾಣಾಗಿ ಅವರಿಂದ ತಪ್ಪಿಸಿಕೊಂಡು ಬಂದಿದ್ದಾನೆ.
undefined
ಮಂಗಳ ಮುಖಿಯರ ಕರಾಮತ್ತು ಯುವಕರೇ ಟಾರ್ಗೇಟ್: ಹೌದು, ಹಳ್ಳಿಯಲ್ಲಿ ಕೆಲಸಕ್ಕಾಗಿ ಪರದಾಡೋ ಹುಡುಗರನ್ನು ಟಾರ್ಗೆಟ್ ಮಾಡೋ ಮಂಗಳ ಮುಖಿಯರ ಈ ಗ್ಯಾಂಗ್, ಕೆಲಸ ಕೊಡಿಸೋದಾಗಿ ಕರೆದುಕೊಂಡು ಹೋಗ್ತಾರಂತೆ ನಯವಾದ ಅವರ ಮಾತಿನಿಂದ ನಿಧಾನವಾಗಿ ಯುವಕರ ಮನವೊಲೈಕೆ ಮಾಡೋ ಮೂಲಕ ಲಿಂಗಪರಿವರ್ತನೆ ಮಾಡಿ ಭಿಕ್ಷಾಟನೆಗೆ ಕಳುಹಿಸುತ್ತಾರಂತೆ. ಇದೇ ರೀತಿ ಕೆಲಸ ಕೊಡಿಸೋದಾಗಿ 19 ವರ್ಷದ ಹಡಗಲಿ ತಾಲೂಕಿನ ಗ್ರಾಮವೊಂದರ ಯುವಕನನ್ನು ಕರೆದುಕೊಂಡು ಹೋಗಿದ್ದಾರೆ.
ಟೈಲರಿಂಗ್ ಕೆಲಸ ಮಾಡೋ ಯುವಕ ಮಂಗಳ ಮುಖಿಯರ ಮಾತಿಗೆ ಮರುಳಾಗಿ ಅವರ ಹಿಂದೆ ಹೋಗಿದ್ದಾನೆ. ಕಳೆದ ವಾರ ಮೊದಲು ಹೋಗೋದಾಗಿ ಒಪ್ಪಿದ ಯುವಕ ನಂತರ ಬೇಡವೆನ್ನುವ ನಿರ್ಧಾರಕ್ಕೆ ಬಂದ್ರೂ ಬಲವಂತವಾಗಿ ಬಿಡದೇ ಕರೆದುಕೊಂಡು ಹೋಗಿದ್ದಾರೆ. ನಂತರ ಬೆಂಗಳೂರಿನ ಗೌಪ್ಯ ಸ್ಥಳಕ್ಕೆ ಕರೆದುಕೊಂಡು ಹೋಗಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ಆಪರೇಷನ್ ಮೂಲಕ ಲಿಂಗಪರಿವರ್ತನೆ ಕುರಿತು ಮಂಗಳ ಮುಖಿಯರು ಮಾತನಾಡೋ ವೇಳೆ ಯುವಕನಿಗೆ ಗಾಬರಿಯಾಗಿ ತಪ್ಪಿಸಿಕೊಂಡು ಬಂದಿದ್ದಾನೆ..
ಬಿಜೆಪಿ ಕಾರ್ಯಕಾರಣಿ ವೇದಿಕೆಯಲ್ಲಿ ಹಂಪಿ ಕಲಾ ವೈಭವ: ವಿಜಯನಗರದಿಂದಲೇ ಚುನಾವಣಾ ರಣಕಹಳೆ
ತಪ್ಪಿಸಿಕೊಂಡು ಬಂದಿದ್ದೇ ದೊಡ್ಡ ಸಾಹಸ: ಮಂಗಳಮುಖಿಯರ ಹುಚ್ಚಾಟಕ್ಕೆ ಬಲಿಯಾಗಬೇಕಿದ್ದ ಯುವಕ ನಿಧಾನವಾಗಿ ಅವರಂತೆ ಮಾತನಾಡಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಬೆಂಗಳೂರು - ತುಮಕೂರು ಹೈವೇ ತಲುಪಿದ್ದಾನೆ. ಅಲ್ಲಿಂದ ಖಾಸಗಿ ಲಾರಿಯನ್ನು ಹತ್ತಿ ದಾವಣಗೆರೆ ತಲುಪಿ ಅಲ್ಲಿಂದ ಟ್ಯಾಕ್ಸಿ ಮೂಲಕ ಸ್ವ ಗ್ರಾಮಕ್ಕೆ ತಲುಪಿದ್ದಾನೆ. ಟ್ಯಾಕ್ಸಿಯವರಿಗೆ ಊರಿಗೆ ತಲುಪಿದ ಬಳಿಕ ಹಣ ಕೊಡುವೆಯೆಂದು ಹೇಳಿ ಡ್ರೈವರ್ ಮೊಬೈಲ್ ಮೂಲಕ ಮನೆಯವರನ್ನು ಸಂಪರ್ಕಿಸಿ ಊರು ಸೇರಿಕೊಂಡಿದ್ದಾನೆ.
ಹಡಗಲಿ ಠಾಣೆಯಲ್ಲಿ ದೂರು ದಾಖಲು ಮರ್ಯಾದೆಗೆ ಅಂಜಿ ಹೊರಬರುತ್ತಿಲ್ಲ: ಮಂಗಳ ಮುಖಿಯರಿಂದ ತಪ್ಪಿಸಿಕೊಂಡು ಬಂದ ಮೇಲೆ ಹಡಗಲಿಯ ಪೊಲೀಸರಿಗೆ ವಿವರಣೆ ನೀಡಿದ್ರೂ ಯಾವುದೇ ಫಲ ಸಿಕ್ಕಿಲ್ಲ ಎನ್ನಲಾಗ್ತಿದೆ. ಇನ್ನೂ ಪ್ರಕರಣ ಮುಂದುವರೆಸಬೇಕಂದ್ರೇ ಮರ್ಯಾದೆಗೆ ಅಂಜಿದ ಕುಟುಂಬ ಯಾವ ಮಾಹಿತಿ ನೀಡದೇ ಎಲ್ಲವನ್ನೂ ಮುಚ್ಚಿಡುತ್ತಿದೆ. ಇನ್ನೂ ಈ ಬಗ್ಗೆ ವಿಜಯನಗರ ಎಸ್ಪಿ ಅರುಣ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದಲ್ಲಿ ಯಾವುದೇ ರೀತಿಯ ತಪ್ಪು ನಡೆದಿದ್ರು ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ.
ಬಳ್ಳಾರಿಯಲ್ಲಿಯೂ ನಡೆದಿತ್ತು: ಈ ಹಿಂದೆ ಏಳೆಂಟು ವರ್ಷಗಳ ಕೆಳಗೆ ಅನಂತಪುರ ರಸ್ತೆಯಲ್ಲಿ ಇರೋ ಬಡ ಕುಟುಂಬದ ಹದಿನೈದು ವರ್ಷದ ಬಾಲಕನನ್ನು ಕೆಲಸ ಕೊಡಿಸೋದಾಗಿ ಹೇಳಿ ಮನೆಯವರಿಗೆ ಐವತ್ತು ಸಾವಿರ ಹಣ ನೀಡಿ ಬಾಲಕನನ್ನು ಮುಂಬೈಗೆ ಕರೆದುಕೊಂಡು ಹೋಗಿದ್ರು. ಮುಂಬೈನಲ್ಲಿ ಮಂಗಳ ಮುಖಿಯರ ಸ್ಥಿತಿಗತಿ ಕಂಡು ಮತ್ತು ಅವರ ಲೈಂಗಿಕ ಚಟುವಟಿಕೆಯಿಂದ ಗಾಬರಿಯಾದ ಯುವಕ ಬಳ್ಳಾರಿಗೆ ಓಡಿ ಬಂದಿದ್ದ ಆದ್ರೇ ಮುಂಬೈ ಮತ್ತು ಆಂಧ್ರದಿಂದ ಬಂದ ಕೆಲ ಮಂಗಳಮುಖಿಯರ ಬಾಲಕನ ಜೊತೆಗೆ ಪೋಷಕ ರನ್ನು ಹೊಡೆದು ಬಾಲಕನನ್ನು ಕರೆದುಕೊಂಡು ಹೋಗೋ ಪ್ರಯತ್ನ ಮಾಡಿದ್ರು ದೊಡ್ಡ ಗಲಾಟೆ ಬಳಿಕ ಪೊಲೀಸರು ಬಂದು ಬಾಕನನ್ನು ಸಂರಕ್ಷಣೆ ಮಾಡಿದ್ರು. ಮಂಗಳಮುಖಿಯರ ವಿರುದ್ಧ ದೂರು ದಾಖಲಾದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ.
Hosapete: ಆನಂದ ಸಿಂಗ್ ನಡೆಗೆ ರಾಜಕೀಯ ಅಸ್ತಿತ್ವವನ್ನೇ ಕಳೆದುಕೊಂಡ ಬಿಜೆಪಿ ನಾಯಕ..!
ಮಂಗಳ ಮುಖಿಯರ ವಿರುದ್ಧ ದೂರು ದಾಖಲಿಸಲು ಮತ್ತು ಕ್ರಮಕ್ಕೆ ಮುಂದಾಗಲು ಪೊಲೀಸರ ಹಿಂದೇಟು: ಹೌದು, ಇದೊಂದು ಪ್ರಕರಣವಲ್ಲ ಹೈವೇ ಮೇಲೆ ಬಲವಂತವಾಗಿ ಹಣ ಕೇಳಲು ವಾಹನಕ್ಕೆ ಅಡ್ಡ ಬರೋದು, ಮಂಗಳವಾರ ಮತ್ತು ಶುಕ್ರವಾರ ಅಂಗಡಿಗಳ ಮುಂದೆ ಬಂದು ಹಣಕ್ಕಾಗಿ ಪೀಡಿಸೋದು ಕೊಡೋದೇ ಇದ್ರೇ ಅವಾಚ್ಯ ಶಬ್ದದಿಂದ ಬಯ್ಯೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಗಲಾಟೆಯಾದಾಗ ಪೊಲೀಸರು ಬಂದು ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸುತ್ತರೆ ಹೊರತು ಶಾಶ್ವತ ಪರಿಹಾರ ದೊರಕಿಸಿಕೊಡ್ತಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳದ ಹಿನ್ನೆಲೆ ಇವರ ಆಟಕ್ಕೆ ಕಡಿವಾಣ ಬೀಳುತ್ತಿಲ್ಲ ಎನ್ನಲಾಗ್ತಿದೆ.