ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹುಚ್ಚು ಯುವಕ, ಯುವತಿಯರನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿದೆ ಅಂದ್ರೆ, ಇಲ್ಲೊಂದು ಗ್ರಾಮದಲ್ಲಿ ಅಜ್ಜ, ಅಜ್ಜಿ ಮೊಬೈಲ್ ಕೊಡಸಲಿಲ್ಲ ಎನ್ನುವ ಕಾರಣಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡು ಪ್ರಾಣವನ್ನೇ ಕಳೆದು ಕೊಂಡಿರೋ ದುರ್ಘಟನೆ ನಡೆದಿದೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಅ.20): ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹುಚ್ಚು ಯುವಕ, ಯುವತಿಯರನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿದೆ ಅಂದ್ರೆ, ಇಲ್ಲೊಂದು ಗ್ರಾಮದಲ್ಲಿ ಅಜ್ಜ, ಅಜ್ಜಿ ಮೊಬೈಲ್ ಕೊಡಸಲಿಲ್ಲ ಎನ್ನುವ ಕಾರಣಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡು ಪ್ರಾಣವನ್ನೇ ಕಳೆದು ಕೊಂಡಿರೋ ದುರ್ಘಟನೆ ನಡೆದಿದೆ. ಅಷ್ಟಕ್ಕೂ ಅಸಲಿಗೆ ಅಲ್ಲಿ ಆಗಿರೋದಾದ್ರು ಏನು? ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ. ಹೀಗೆ ಪೋಟೋದಲ್ಲಿ ನೋಡಲು ಮುಂದಾಗಿರೋ ಮೃತ ದುರ್ದೈವಿ ಯುವಕನ ಹೆಸರು ಯಶವಂತ್ (20) ಅಂತ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಕೊಳಾಳ್ ಗ್ರಾಮದ ನಿವಾಸಿ.
ಕಳೆದ ಹದಿನೈದು ವರ್ಷಗಳಿಂದಲೂ ತನ್ನ ಅಜ್ಜ-ಅಜ್ಜಿಯ ಮನೆಯಲ್ಲಿಯೇ ಹುಟ್ಟಿ ಬೆಳೆದಿದ್ದ ಯುವಕ ಯಶವಂತ್, ಕಳೆದ ಒಂದು ವಾರದ ಹಿಂದೆ ಚಿತ್ರದುರ್ಗ ನಗರದಲ್ಲಿ ನಡೆದಿದ್ದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ತನ್ನ ಮೊಬೈಲ್ ಕಳೆದುಕೊಂಡಿದ್ದನು. ಆದ್ರೆ ಕಳೆದ ಒಂದು ವಾರದಿಂದ ಅವರ ಅಜ್ಜಿಯ ಮುಂದೆ ನನಗೆ ಹೊಸ ಮೊಬೈಲ್ ಕೊಡಿಸಿ ಎಂದು ಹಠ ಮಾಡಿದ್ದಾನೆ. ಇದ್ರಿಂದ ಬೇಸರಗೊಂಡ ಅಜ್ಜಿ ಮೊದಲೇ ಒಳ್ಳೆ ಬೆಳೆ ಸಿಗದೇ ನಾವು ಕಂಗಾಲಾಗಿದ್ದೀವಿ, ನಿಮ್ಮ ತಾತ ಬಳಿ ಕೇಳು ಎಂದು ಹೇಳಿದ್ದಾರೆ. ಅಲ್ಲದೇ ಇರುವ ಶೇಂಗಾ ಬೆಳೆ ಬಂದ ಮೇಲೆ ಹೊಸ ಮೊಬೈಲ್ ತೆಗೆದುಕೊಳ್ಳಬಹುದು ಬಿಡು ಎಂದು ಬುದ್ದಿ ಮಾತು ಹೇಳಿದ್ದಾರೆ.
ಸಿಎಂ ಇಬ್ರಾಹಿಂ ಯಾವ ಸಭೆಯಲ್ಲೂ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರಲಿಲ್ಲ: ಶಾಸಕ ಎ.ಮಂಜು
ಇದಕ್ಕೆಲ್ಲಾ ಒಪ್ಪದ ಮೊಮ್ಮಗ ಇಲ್ಲ ನನಗೆ ಮೊಬೈಲ್ ಬೇಕೇ ಬೇಕು ಎಂದು ಸುಮಾರು ಬಾರಿ ಅಜ್ಜ-ಅಜ್ಜಿ ಬಳಿ ಹಠ ಮಾಡಿದ್ದಾನೆ. ಇದಕ್ಕೆ ಬೇಸರಗೊಂಡ ವೃದ್ದ ದಂಪತಿ ಯುವಕನಿಗೆ ಸಿಟ್ಟಲ್ಲಿ ಬೈದಿದ್ದಾರೆ. ಅಷ್ಟಕ್ಕೇ ಬೇಸರಗೊಂಡು ಮೊಬೈಲ್ ಸಿಗ್ತಿಲ್ಲ ಎಂದು ಯುವಕ ಮನೆಯೊಳಗೆ ಹೋಗಿ ರಾಸಾಯನಿಕ ಔಷಧಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಂಬಂಧಿಕರು ನೋವು ತೋಡಿಕೊಂಡರು. ಇನ್ನೂ ಈ ವಿಚಾರವಾಗಿ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಘಟನೆಗೆ ನಿಖರ ಕಾರಣ, ಯುವಕನಿಗೆ ಮೊದಲಿನಿಂದಲೂ ಮೊಬೈಲ್ ಗೀಳು ಹೆಚ್ಚಾಗಿ ಇದ್ದಿದ್ದರಿಂದ, ಮೊಬೈಲ್ ಕಳೆದುಕೊಂಡು ದಿಗ್ಭ್ರಮೆಗೊಂಡಿದ್ದನು.
ರೇಣುಕಾಚಾರ್ಯ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರ ಖಂಡನೆ: ಉಚ್ಚಾಟನೆಗೆ ವರಿಷ್ಠರಿಗೆ ಮನವಿ
ಹಾಗಾಗಿಯೇ ಮೊಬೈಲ್ ಸಿಗ್ತಿಲ್ವಲ್ಲ ಎಂದು ಬೇಸರದಿಂದ ತನ್ನ ಅಜ್ಜ-ಅಜ್ಜಿ ಜೊತೆ ಮೊಬೈಲ್ ಕೊಡಿಸುವಂತೆ ಪೀಡಿಸುತ್ತಿದ್ದನು ಎನ್ನಲಾಗ್ತಿದೆ. ಕೇವಲ ಮೊಬೈಲ್ ಕೊಡಿಸಲಿಲ್ಲವಲ್ಲ ಎನ್ನುವ ಒಂದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಿಖೆ ಹಂತದಲ್ಲಿದೆ ಎಂದು ಎಸ್ಪಿ ತಿಳಿಸಿದರು. ಒಟ್ಟಾರೆಯಾಗಿ ಇತ್ತೀಚಿನ ಮಕ್ಕಳು ನಿದ್ದೆಯಿಂದ ಎದ್ರೆ ಸಾಕು ಮೊಬೈಲ್ ಕೈಯಲ್ಲಿ ಇಡ್ಕೊಳ್ಳೋದು ಕೆಟ್ಟ ರೋಗವಾಗಿದೆ. ಆದ್ರೆ ಕೇವಲ ಮೊಬೈಲ್ ಕಾರಣಕ್ಕೆ ಓರ್ವ ಎದೆ ಮಟ್ಟಕ್ಕೆ ಬಂದಿರೋ ಯುವಕ ಸಾವನ್ನಪ್ಪಿರೋದ ನಿಜಕ್ಕೂ ಘೋರ ದುರಂತ. ಇನ್ನಾದ್ರು ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಿ, ಮೊಬೈಲ್ ಗೀಳಿನಿಂದ ಸ್ವಲ್ಪ ಅಂತರ ಕಾಪಾಡಿಸಬೇಕಿದೆ.