Bengaluru Crime: ಸೆಕ್ಸ್‌ಗೆ ಸಮ್ಮತಿಸಿ, ಬ್ಲ್ಯಾಕ್‌ಮೇಲ್ ಮಾಡಿ ₹43 ಲಕ್ಷ ಪೀಕಿದ ಕೆಲಸದಾಕೆ: ದೂರು

Published : Nov 28, 2022, 07:44 AM IST
Bengaluru Crime: ಸೆಕ್ಸ್‌ಗೆ ಸಮ್ಮತಿಸಿ, ಬ್ಲ್ಯಾಕ್‌ಮೇಲ್ ಮಾಡಿ ₹43 ಲಕ್ಷ ಪೀಕಿದ ಕೆಲಸದಾಕೆ: ದೂರು

ಸಾರಾಂಶ

ಸೆಕ್ಸ್‌ಗೆ ಸಮ್ಮತಿಸಿ, ಬ್ಲ್ಯಾಕ್ಮೇಲ್‌ ಮಾಡಿ 43 ಲಕ್ಷ ಪೀಕಿದ ಕೆಲಸದಾಕೆ: ದೂರು ಕೌಟುಂಬಿಕ ಸಮಸ್ಯೆ ಹೇಳಿ .2 ಲಕ್ಷ ಸಾಲ ಪಡೆದ ಯುವತಿ ಬಳಿಕ ಅಂಗಡಿ ಮಾಲಿಕನೊಂದಿಗೆ ಪ್ರೇಮದಾಟ ಸೆಕ್ಸ್‌ ವಿಚಾರ ಮನೆಯವರಿಗೆ ಹೇಳೋದಾಗಿ ಬೆದರಿಸಿದ ಯುವತಿ, ಆಕೆಯ ಅಣ್ಣ, ಗೆಳೆಯನಿಂದ ಬ್ಲ್ಯಾಕ್‌ಮೇಲ್

ಬೆಂಗಳೂರು (ನ.28) ಒಪ್ಪಿಗೆ ಮೇರೆಗೆ ಯುವತಿ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ ಬಟ್ಟೆಅಂಗಡಿ ಮಾಲಿಕನಿಗೆ ಈ ವಿಚಾರವನ್ನು ಕುಟುಂಬದವರಿಗೆ ಹೇಳಿ ಮರ್ಯಾದೆ ಹಾಳು ಮಾಡುವುದಾಗಿ ಬೆದರಿಸಿ ಬರೋಬ್ಬರಿ .43 ಲಕ್ಷ ಸುಲಿಗೆ ಮಾಡಿದ ಆರೋಪದಡಿ ಯುವತಿ ಸೇರಿ ಮೂವರ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರ್ತಪೇಟೆ ನಿವಾಸಿ ವಿಕ್ರಂ ಪಿ.ಜೈನ್‌(43) ಎಂಬುವವರು ನೀಡಿದ ದೂರಿನ ಮೇರೆಗೆ ಮೈತ್ರಿ(26), ಆಕೆಯ ಸಹೋದರ ಕಿರಣ್‌(31) ಹಾಗೂ ಸ್ನೇಹಿತ ಸಿದ್ದು(30) ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Bengaluru: ಸ್ನೇಹಿತನನ್ನೇ ಬ್ಲ್ಯಾಕ್‌ಮೇಲ್‌ ಮಾಡಿ 16 ಲಕ್ಷ ಸುಲಿಗೆ!

ಪ್ರಕರಣದ ವಿವರ:

ಬಟ್ಟೆವ್ಯಾಪಾರಿಯಾದ ವಿಕ್ರಂ ಪಿ.ಜೈನ್‌ ಎರಡು ವರ್ಷಗಳ ಹಿಂದೆ ಆರೋಪಿ ಮೈತ್ರಿಯನ್ನು ಬಟ್ಟೆಅಂಗಡಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕೆಲ ತಿಂಗಳ ಬಳಿಕ ಮೈತ್ರಿ, ‘ನನ್ನ ಸಹೋದರ ಕಿರಣ್‌ಗೆ ಅಪಘಾತವಾಗಿದ್ದು, ಚಿಕಿತ್ಸೆ ಹಣದ ಅಗತ್ಯವಿದೆ. ಮುಂಗಡವಾಗಿ .2 ಲಕ್ಷ ಕೊಡಿ’ ಎಂದು ವಿಕ್ರಂ ಪಿ.ಜೈನ್‌ ಬಳಿ ಹಣ ಪಡೆದಿದ್ದಾಳೆ. ಹಲವು ತಿಂಗಳು ಕಳೆದರೂ ಮೈತ್ರಿ ಹಣವನ್ನು ವಾಪಾಸ್‌ ನೀಡಿಲ್ಲ. ಹಣ ಕೇಳಿದಾಗ ಏನಾದರೂ ಸಮಜಾಯಿಷಿ ನೀಡುತ್ತಿದ್ದಳು. ಈ ನಡುವೆ ವಿಕ್ರಂ ಮತ್ತು ಮೈತ್ರಿ ನಡುವೆ ಸಲುಗೆ ಬೆಳೆದು ಪ್ರೀತಿಗೆ ತಿರುಗಿದೆ. ಬಳಿಕ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ದೈಹಿಕ ಸಂಪರ್ಕ ಬೆಳೆಸಿದ್ದಾರೆ.

₹43 ಲಕ್ಷ ಸುಲಿಗೆ:

ಕೆಲ ದಿನಗಳ ಬಳಿಕ ವಿಕ್ರಂ ಮೊಬೈಲ್‌ಗೆ ಕರೆ ಮಾಡಿರುವ ಮೈತ್ರಿ, ‘ನನ್ನ ಅಣ್ಣ ಕಿರಣ್‌, ನಮ್ಮಿಬ್ಬರ ಬಗ್ಗೆ ನಿಮ್ಮ ಜತೆ ಮಾತನಾಡಲು ಬಯಸಿದ್ದಾನೆ. ಹೀಗಾಗಿ ಕೆ.ಜಿ.ರಸ್ತೆಯ ಬೆಂಗಳೂರು ಗೇಟ್‌ ಹೋಟೆಲ್‌ಗೆ ಬನ್ನಿ’ ಎಂದು ಹೇಳಿದ್ದಾಳೆ. ಇದಕ್ಕೆ ಒಪ್ಪಿದ ವಿಕ್ರಂ, ಹೋಟೆಲ್‌ಗೆ ತೆರಳಿದ್ದಾರೆ. ಈ ವೇಳೆ ಆರೋಪಿಗಳಾದ ಮೈತ್ರಿ, ಕಿರಣ್‌ ಹಾಗೂ ಸಿದ್ದು ಮೂವರು ಇದ್ದರು. ಈ ವೇಳೆ ಮೈತ್ರಿ, ‘ನಮಗೆ .8 ಲಕ್ಷ ಕೊಡು. ಇಲ್ಲವಾದರೆ, ನಮ್ಮಿಬ್ಬರ ನಡುವೆ ದೈಹಿಕ ಸಂಪರ್ಕವಾಗಿರುವ ವಿಚಾರವನ್ನು ನಿನ್ನ ಕುಟುಂಬ, ಸಂಬಂಧಿಕರು ಸೇರಿದಂತೆ ಎಲ್ಲರಿಗೂ ಹೇಳಿ ಮಾನ ಮರ್ಯಾದೆ ಕಳೆಯುತ್ತೇವೆ’ ಎಂದು ಹೆದರಿಸಿದ್ದಾಳೆ. ಇದರಿಂದ ಆತಂಕಗೊಂಡ ವಿಕ್ರಂ, ಆರೋಪಿಗಳಿಗೆ .8 ಲಕ್ಷ ನೀಡಿದ್ದಾರೆ. ಇದಾದ ಬಳಿಕ ಹಲವು ಬಾರಿ ಇದೇ ವಿಚಾರ ಮುಂದಿಟ್ಟು ಆರೋಪಿಗಳು ವಿವಿಧ ಹಂತಗಳಲ್ಲಿ ವಿಕ್ರಂನಿಂದ ಒಟ್ಟು .43 ಲಕ್ಷ ಸುಲಿಗೆ ಮಾಡಿದ್ದಾರೆ.

ನಗ್ನ ವಿಡಿಯೋ ಕಳಿಸಿ 30 ಲಕ್ಷಕ್ಕೆ ಕನ್ನಡ ನಟಿಯನ್ನ ಬ್ಲಾಕ್​ಮೇಲ್​ ಮಾಡ್ತಿದ್ದ ಮೇಕಪ್​ ಮ್ಯಾನ್​!

ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಪದೇ ಪದೇ ವಿಕ್ರಂ ಕರೆ ಮಾಡಿ ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಹಣವಿಲ್ಲ ಎಂದರೂ, ನಿನ್ನ ಕುಟುಂಬ ಹಾಗೂ ಸಂಬಂಧಿಕರಿಗೆ ದೈಹಿಕ ಸಂಪರ್ಕದ ವಿಚಾರ ಹೇಳುವುದಾಗಿ ಬೆದರಿಸಿದ್ದಾರೆ. ಇವರ ಕಾಟದಿಂದ ಬೇಸತ್ತ ವಿಕ್ರಂ ಕೊನೆಗೆ ಪೊಲೀಸ್‌ ಠಾಣೆಗೆ ಬಂದು ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ