ಆನ್‌ಲೈನ್ ವಂಚನೆ ನಗರದಲ್ಲಿ ಬೇರು ಬಿಟ್ಟಿದ್ದು ಸಾರ್ವಜನಿಕರು ಒಂದಲ್ಲ ಒಂದು ರೀತಿಯಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇಂಥಹ ಪ್ರಕರಣಗಳಲ್ಲಿ ಹಣ ರಿಕವರಿ ಆಗುವುದು ಬಹಳ ಕಷ್ಟ.
ಬೆಂಗಳೂರು (ಆ.10): ಆನ್‌ಲೈನ್ ವಂಚನೆ ನಗರದಲ್ಲಿ ಬೇರು ಬಿಟ್ಟಿದ್ದು ಸಾರ್ವಜನಿಕರು ಒಂದಲ್ಲ ಒಂದು ರೀತಿಯಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇಂಥಹ ಪ್ರಕರಣಗಳಲ್ಲಿ ಹಣ ರಿಕವರಿ ಆಗುವುದು ಬಹಳ ಕಷ್ಟ. ಆದರೆ ಇಲ್ಲೊಂದು ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹೆಚ್ಚಿನ ಹಣವನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಟೆಕ್ಕಿ ದಂಪತಿ ಆನ್‌ಲೈನ್ ವಂಚನೆಯೊಂದನ್ನ ನಂಬಿ 2.66 ಕೋಟಿ ರೂ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದರು. ಮೋಸ ಹೋಗಿರೋದು ಗೊತ್ತಾಗುತ್ತಿದ್ದಂತೆ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.
ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಬೆನ್ನುಬಿದ್ದಿದ್ರು.. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಹಣವನ್ನು ಅಂದರೆ 1.10ಕೋಟಿ ರೂ ಹಣ ಹಾಗೂ ವಿವಿಧ ಬ್ಯಾಂಕ್ ಗಳಿಂದ ಅಕೌಂಟ್ ಗಳಲ್ಲಿ 40 ಲಕ್ಷ ಹಣ ಫ್ರೀಸ್ ಮಾಡಿ ಮಾಡಿದ್ದಾರೆ.. ಬೆಂಗಳೂರಿನ ಬಾಣಸವಾಡಿಯಲ್ಲಿ ವಾಸಿಸುತ್ತಿರುವ ದಂಪತಿಗೆ ವಂಚಕನೊಬ್ಬ ಹೆಚ್ಚಿನ ಲಾಭದ ಆಸೆ ತೋರಿಸಿದ್ದ. ಇದನ್ನು ನಂಬಿ ದಂಪತಿ ಈತನ ವಂಚನೆ ಜಾಲಕ್ಕೆ ಬಿದ್ದಿದ್ದರು. ವಿದೇಶದಲ್ಲಿ ಕುಳಿತೇ ಈ ವಂಚನೆ ಜಾಲವನ್ನು ನಡೆಸುತ್ತಿದ್ದ ಪ್ರಾರಂಭದಲ್ಲಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ಲಾಭದ ಆಸೆ ತೋರಿಸಿದ್ದ ನಂತರ 2.66 ಕೋಟಿ ಹಣ ಹೂಡಿಕೆ ಮಾಡಿಸಿಕೊಂಡಿದ್ದ.
ಈತ ಹಣ ಸ್ವೀಕರಿಸಲು ಉತ್ತರ ಭಾರತೀಯರ ಒಂದಿಷ್ಟು ಖಾತೆಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಹೂಡಿಕೆ ನಿಜ ಎಂದು ಬಿಂಬಿಸಲು ಈತ ನಕಲಿ ವೆಬ್‌ಸೈಟ್ ಒಂದು ತೆರೆದು, ಇದರ ಆಕ್ಸೆಸ್ ಕೂಡ ನೀಡಿದ್ದ. ಇದರಲ್ಲಿ ತಮ್ಮ ಹೂಡಿಕೆ ಬೆಳೆಯುತ್ತಿರುವುದನ್ನು ಕಂಡು ದಂಪತಿ ಖುಷಿಯಾಗಿದ್ದರು. ಕೆಲವು ತಿಂಗಳ ನಂತರ ಒಂದಿಷ್ಟು ಹಣವನ್ನು ಹಿಂಪಡೆಯಲು ನೋಡಿದರೆ, ಹಣ ತೆಗೆಯಲು ಆಗುತ್ತಿರಲಿಲ್ಲ. ಅಷ್ಟೇ ಅಲ್ಲ ನಕಲಿ ವೆಬ್‌ಸೈಟ್‌ನ ಆಕ್ಸೆಸ್ ಕೂಡ ಹೋಯ್ತು. ಕೊನೆಗೆ ಅವರನ್ನು ಆ ವೆಬ್‌ಸೈಟ್ ಬ್ಲಾಕ್ ಮಾಡಿತು. ಅಷ್ಟೊತ್ತಿಗೆ ತಾವು ವಂಚನೆಗೆ ಸಿಲುಕಿರುವುದು ದಂಪತಿಗೆ ತಿಳಿಯಿತು.
ಯಾವುದೇ ಸಾಕ್ಷಿ ಇಲ್ಲದ ಕೇಸ್‌ನಲ್ಲಿ ಸಿಎಂಗೆ ರಾಜ್ಯಪಾಲರು ನೋಟಿಸ್ ನೀಡೋದು ಎಷ್ಟು ಸರಿ: ಸಚಿವ ಮಹದೇವಪ್ಪ ಪ್ರಶ್ನೆ
ಆಗ ದಂಪತಿ ಹೋಗಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ತನಿಖೆ ಆರಂಭಿಸಿದ್ದಲ್ಲದೆ ಬ್ಯಾಂಕ್ ಅಧಿಕಾರಿಗಳ ಜೊತೆ ಸೇರಿ ಈ ವಂಚನೆ ಜಾಲವನ್ನು ಪತ್ತೆ ಹಚ್ಚಿದರು. ಕೂಡಲೆ ಕೊರ್ಟ್ ಅನುಮತಿ ಪಡೆದು ಈ ಹಗರಣದಲ್ಲಿ ಭಾಗಿಯಾಗಿದ್ದ 50ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್ ಮಾಡಿದರು. ಇದರಲ್ಲಿ 1.10ಕೋಟಿ ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಇನ್ನುಳಿದಂತೆ ಆರೋಪಿ ಯಾರು..? ಆತನ ಮೂಲ ಎಲ್ಲಿ..? ಎಂಬುದರ ಪತ್ತೆಗಿಳಿದಿದ್ದಾರೆ.