
ಬೆಂಗಳೂರು ಗ್ರಾಮಾಂತರ (ನ.18): ಹೆಸರು ಬದಲಾವಣೆ ಮಾಡಿಕೊಂಡು ಅಕ್ರಮವಾಗಿ ಭಾರತದಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಮಾಡಿಸಿಕೊಂಡು ಇಂಡಿಯನ್ ಪಾಸ್ ಪೋರ್ಟ್ ಮಾಡಿಸಿದ ನೇಪಾಳ ಪ್ರಜೆಯನ್ನ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ನರೇಶ್ ಕುಮಾರ್ (Naresh Kumar) ಎಂಬಾತ ನ.12 ರಂದು ಭಾರತೀಯ ಪಾಸ್ ಪೋರ್ಟ್ (Indian Passport) ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳದ (Nepal)ಕಠ್ಮಂಡುಗೆ ಪ್ರಯಾಣ ಬೆಳಸಿದ್ದನು. ಈತನ ಚಲನವಲನಗಳನ್ನು ಗಮನಿಸಿ ಡಿಪಾರ್ಚರ್ ಇಮಿಗ್ರೇಷನ್ ಏರ್ ಕೌಂಟರ್ (Air Counter) ಬಳಿ ವಿಮಾನ ನಿಲ್ದಾಣದ ಸಿಬ್ಬಂದಿ ಈತನನ್ನ ವಿಚಾರಣೆ ನಡೆಸಿದಾಗ ನೇಪಾಳಿ ನ್ಯಾಷನಲ್ ಸಿಟಿಜನ್ ಶಿಫ್ ಕಾರ್ಡ್ (Nepal citizenship Card) ತೋರಿಸಿದ್ದಾನೆ. ಈತ ನೇಪಾಳ ದೇಶದ ಪ್ರಜೆಯಾಗಿದ್ದು, ಇವನ ನಿಜವಾದ ಹೆಸರು ಅಶ್ವಿನ್ ದಮೈ (Ashwin Damai) ಆಗಿರುತ್ತದೆ. 2005ರಲ್ಲಿ ಭಾರತಕ್ಕೆ ಬಂದಿದ್ದ ಈತ ತಮಿಳುನಾಡುನಾಡಿನಲ್ಲಿ ವಾಸವಾಗಿದ್ದನು.
ಸ್ಥಳೀಯರ ಹೆಸರಿನಲ್ಲಿ ನಕಲಿ ದಾಖಲೆ: ನಂತರ ನರೇಶ್ ಕುಮಾರ್ ಹೆಸರಿನಲ್ಲಿ ಆಧಾರ್ ಕಾರ್ಡ್ (Adhar Card) ಮತ್ತು ಪಾನ್ ಕಾರ್ಡ್ (PAN Card) ಮಾಡಿಸಿಕೊಂಡು ಬಳಿಕ ಅಕ್ರಮವಾಗಿ ಇಂಡಿಯನ್ ಪಾಸ್ ಪೋರ್ಟ್ ಮಾಡಿಸಿಕೊಂಡು ಹಲವು ವರ್ಷ ಅಲ್ಲಿಯೇ ವಾಸವಾಗಿದ್ದನು. ಈಗ ನೇಪಾಳ ದೇಶದವನು ಎಂದು ಪತ್ತೆಯಾಧ ಬಳಿಕ ಈತನ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಫಾರಿನರ್‍ಸ ಆಕ್ಟ್ (Foreigners act) 1946, ಪಾಸ್ ಪೋರ್ಟ್ ಆಕ್ಟ್ 1967ರ ಆಡಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ