
ಚಿಕ್ಕೋಡಿ (ನ.9): ಗಂಡ-ಹೆಂಡತಿ ನಡುವಿನ ಜಗಳದಲ್ಲಿ ಹಸುಗೂಸು ಬಲಿಯಾದ ದುರಂತ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಗಾರ ಖುರ್ದ್ ಪಟ್ಟಣದ ಪರೀದಖಾನವಾಡಿಯ ತೋಟದ ಮನೆಯಲ್ಲಿ ನಡೆದಿದೆ.
ಸಾತ್ವಿಕ್ ರಾಹುಲ್ ಕಟಗೇರಿ ಮೃತ ಬಾಲಕ, ಭಾಗ್ಯಶ್ರಿ ಕೊಲೆಗೈದ ತಾಯಿ. ಕಳೆದ 7 ವರ್ಷಗಳ ಹಿಂದೆ ರಾಹುಲ್ ಕಟಗೇರಿ ಎಂಬಾತನೊಂದಿಗೆ ಮದುವೆಯಾಗಿದ್ದ ಭಾಗ್ಯಶ್ರಿ. ಮದುವೆಯಾದ ನಂತರವೂ ಸುಖವಾಗಿಲ್ಲ. ಗಂಡನೊಂದಿಗೆ ದಿನನಿತ್ಯ ಜಗಳ. ಜಗಳಕ್ಕೆ ಬೇಸತ್ತು ತವರುಮನೆಗೆ ಹೋಗಿದ್ದ ಭಾಗ್ಯಶ್ರಿ. ಗಂಡ ರಾಹುಲ್ ಊರಿಗೆ ಹೋಗಿ ಮನೆಯ ಹಿರಿಯರೊಟ್ಟಿಗೆ ಮಾತಾಡಿ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದ ಪತಿ.
ಬೆಂಗಳೂರು: ಚಾಕುವಿನಿಂದ ಇರಿದು ತಾಯಿಯನ್ನೇ ಕೊಂದ ಮಾನಸಿಕ ಅಸ್ವಸ್ಥ
ಆದರೆ ಇಂದು ಇಂದು ಬೆಳ್ಳಂಬೆಳಗ್ಗೆ ಮತ್ತೆ ಪತಿ-ಪತ್ನಿ ನಡುವೆ ಜಗಳ ಮಾಡಿಕೊಂಡಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಸಂಶಯ ಪಡುತ್ತೀಯಾ, ನಿನ್ನ ವಂಶದ ಕುಡಿಯನ್ನು ಉಳಿಸಲಾರೆ ಎಂದವಳೇ ಮಗುವಿನ ಮೇಲೆ ಚಾಕುವಿನಿಂದ ತಿವಿದು ತೀವ್ರ ಗಾಯಗೊಳಿಸಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ. ಭೀಕರ ಘಟನೆಯಲ್ಲಿ ಸ್ಥಳದಲ್ಲೇ ಅಸುನೀಗಿದ ಮಗು.
ಸದ್ಯ ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ