ಬೆಂಗಳೂರು: ಸಹಪಾಠಿಗಳ ಜತೆ ಆಟವಾಡಿದ್ದಕ್ಕೆ ಕೋಲಿನಿಂದ ಹೊಡೆದ ಶಿಕ್ಷಕಿ, ವಿದ್ಯಾರ್ಥಿಯ ಹಲ್ಲು ಮುರಿತ!

By Kannadaprabha News  |  First Published Nov 9, 2024, 12:09 PM IST

6ನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದಾನೆ. ಈ ಸಂಬಂಧ ವಿದ್ಯಾರ್ಥಿಯ ತಂದೆ ಅನಿಲ್ ಕುಮಾರ್ ವಿ.ಪೈ ಅವರು ನೀಡಿದ ದೂರಿನ ಮೇರೆಗೆ ಹಿಂದಿ ಶಿಕ್ಷಕಿ ಅಜ್ಜತ್ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅಧಿಕಾರಿಗಳು 
 


ಬೆಂಗಳೂರು(ನ.09):  ತರಗತಿಯಲ್ಲಿ ಸಹಪಾಠಿಗಳ ಜತೆಗೆ ನೀರು ಚೆಲ್ಲಿಕೊಂಡು ಆಟವಾಡುವಾಗ ಹಿಂದಿ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಮುಖಕ್ಕೆ ಕೋಲಿನಿಂದ ಹೊಡೆದು ಹಲ್ಲು ಮುರಿದಿರುವ ಆರೋಪ ಕೇಳಿ ಬಂದಿದೆ. ಜಯನಗರ 4ನೇ ಬ್ಲಾಕ್ ನ ಹೋಲಿ ಶಾಲೆಯಲ್ಲಿ ನ.7ರಂದು ಈ ಘಟನೆ ನಡೆದಿದೆ. 

6ನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದಾನೆ. ಈ ಸಂಬಂಧ ವಿದ್ಯಾರ್ಥಿಯ ತಂದೆ ಅನಿಲ್ ಕುಮಾರ್ ವಿ.ಪೈ ಅವರು ನೀಡಿದ ದೂರಿನ ಮೇರೆಗೆ ಹಿಂದಿ ಶಿಕ್ಷಕಿ ಅಜ್ಜತ್ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tap to resize

Latest Videos

undefined

ಬೆಂಗಳೂರು: ಚಾಕುವಿನಿಂದ ಇರಿದು ತಾಯಿಯನ್ನೇ ಕೊಂದ ಮಾನಸಿಕ ಅಸ್ವಸ್ಥ

ಏನಿದು ಪ್ರಕರಣ?: 

ಜಯನಗರ 4ನೇ ಬ್ಲಾಕ್ ನಿವಾಸಿ ಅನಿಲ್ ಕುಮಾರ್‌ ವಿ.ಪೈ ಅವರ 11 ವರ್ಷದ ಪುತ್ರ ಹೋಲಿ ಕ್ರೈಸ್ತ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ನ.7ರಂದು ಮಧ್ಯಾಹ್ನ ಸುಮಾರು 12.30ಕ್ಕೆ ದೂರುದಾರರ ಪುತ್ರ ತನ್ನ ಸಹಪಾಠಿಗಳೊಂದಿಗೆ ತರಗತಿಯಲ್ಲಿ ನೀರು ಚೆಲ್ಲುತ್ತಾ ಆಡುವಾಡುತ್ತಿದ್ದ. ಈ ವಿಚಾರ ತಿಳಿದು ಹಿಂದಿ ಶಿಕ್ಷಕಿ ಅಜ್ಜತ್ ಕೋಲಿನಿಂದ ವಿದ್ಯಾರ್ಥಿ ಮುಖಕ್ಕೆ ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿ ಮುಖಕ್ಕೆ ಗಾಯವಾಗಿದ್ದು, ಹಲ್ಲೊಂದು ಮುರಿದಿದೆ. ಪುತ್ರನ ಮೇಲಿನ ಹಲ್ಲೆ ವಿಚಾರ ತಿಳಿದ ಅನಿಲ್ ಕುಮಾರ್, ಪುತ್ರನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ಹಲ್ಲೆ ಘಟನೆ ಸಂಬಂಧ ಹಿಂದಿ ಶಿಕ್ಷಕಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!