ಬೆಂಗಳೂರಿನಲ್ಲಿ ವಿವಾಹಿತ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಅಳಿಯನ ವಿರುದ್ಧ ಕೊಲೆ ಆರೋಪ

By Govindaraj S  |  First Published Apr 1, 2023, 4:20 AM IST

ಮನೆಯಲ್ಲಿ ವಿವಾಹಿತ ಮಹಿಳೆಯೊಬ್ಬರ ಶವ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಳ ಪೋಷಕರು ಅಳಿಯನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಸುಬ್ರಹ್ಮಣ್ಯಪುರ ಸಮೀಪದ ಪೂರ್ಣಪ್ರಜ್ಞ ಲೇಔಟ್‌ ನಿವಾಸಿ ರಶ್ಮಿ(30) ಮೃತರು. 


ಬೆಂಗಳೂರು (ಏ.01): ಮನೆಯಲ್ಲಿ ವಿವಾಹಿತ ಮಹಿಳೆಯೊಬ್ಬರ ಶವ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಳ ಪೋಷಕರು ಅಳಿಯನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಸುಬ್ರಹ್ಮಣ್ಯಪುರ ಸಮೀಪದ ಪೂರ್ಣಪ್ರಜ್ಞ ಲೇಔಟ್‌ ನಿವಾಸಿ ರಶ್ಮಿ(30) ಮೃತರು. ಶುಕ್ರವಾರ ಬೆಳಗ್ಗೆ ರೂಮ್‌ನ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪತಿ ಅರವಿಂದ್‌ ಬಾಗಿಲು ಒಡೆದು ನೋಡಿದಾಗ ರಶ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತಳ ಪೋಷಕರು ಅಳಿಯ ಅರವಿಂದ್‌ ವಿರುದ್ಧ ಕೊಲೆ ಆರೋಪದಡಿ ದೂರು ನೀಡಿದ್ದಾರೆ. 

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮದ್ದೂರು ಮೂಲದ ರಶ್ಮಿ ಮತ್ತು ಶ್ರೀರಂಗಪಟ್ಟಣ ಮೂಲದ ಅರವಿಂದ್‌ಗೆ ಹತ್ತು ವರ್ಷದ ಹಿಂದೆ ವಿವಾಹವಾಗಿದೆ. ದಂಪತಿಗೆ ಐದು ವರ್ಷದ ಒಂದು ಗುಂಡು ಮಗುವಿದೆ. ಅರವಿಂದ್‌ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ರಶ್ಮಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ದಂಪತಿ ಕೆಲ ವರ್ಷಗಳಿಂದ ಪೂರ್ಣಪ್ರಜ್ಞ ಲೇಔಟ್‌ನಲ್ಲಿ ನೆಲೆಸಿದ್ದರು.

Tap to resize

Latest Videos

ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು: ಸಂಸದ ಬಿ.ವೈ.ರಾಘವೇಂದ್ರ

ಗುರುವಾರ ರಾತ್ರಿ 8.30ರ ಸುಮಾರಿಗೆ ಅರವಿಂದ್‌ ಹಾಗೂ ರಶ್ಮಿ ಜಗಳವಾಡಿದ್ದರು. ಬಳಿಕ ರಶ್ಮಿ ರೂಮ್‌ಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಳು. ಶುಕ್ರವಾರ ಬೆಳಗ್ಗೆ ಎಷ್ಟು ಹೊತ್ತಾದರೂ ರೂಮ್‌ ಬಾಗಿಲು ತೆರೆದಿಲ್ಲ. ಹಲವು ಬಾರಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ಬಾಗಿಲು ಒಡೆದು ನೋಡಿದಾಗ ರಶ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿ, ಸಾವು: ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿಯಾಗಿ ಬೀಗರು ಸಾವನ್ನಪ್ಪಿರುವ ದಾರುಣ ಘಟನೆ ಯಲಹಂಕ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೂಡಿ ನಿವಾಸಿ ಗುಡದ್‌ರಾಮ್‌ (52) ಹಾಗೂ ರಾಜಸ್ಥಾನ ರಾಜ್ಯದ ರಾಜ್‌ ಪ್ರಜಾಪತ್‌ (48) ಮೃತ ದುರ್ದೈವಿಗಳು. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜಸ್ಥಾನದಿಂದ ಬಂದಿದ್ದ ಬೀಗರನ್ನು ಮನೆಗೆ ಕರೆತರಲು ಗುಡದ್‌ರಾಮ್‌ ಬೈಕ್‌ನಲ್ಲಿ ತೆರಳಿದ್ದರು. ಬೆಳಗ್ಗೆ 9ಕ್ಕೆ ಇಬ್ಬರು ಮಾತನಾಡಿಕೊಂಡು ಬೈಕ್‌ನಲ್ಲಿ ಮರಳುವಾಗ ಮಾರ್ಗ ಮಧ್ಯೆ ಯಲಹಂಕದ ಬಿಬಿ ರಸ್ತೆಯ ಕಾಫಿ ಡೇ ಬಳಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಕೊಡಿ: ಅಣ್ಣಾಮಲೈ

ರಾಜಸ್ಥಾನ ಮೂಲದ ಗುಡದ್‌ ರಾಮ್‌ ಹೂಡಿಯಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿದ್ದು, ಹಾರ್ಡ್‌ವೇರ್‌ ಅಂಗಡಿಯನ್ನು ಅವರು ನಡೆಸುತ್ತಿದ್ದರು. ಗುಡದ್‌ ರಾಮ್‌ ಅವರ ಪುತ್ರನ ಜತೆ ರಾಜ್‌ ಪ್ರಜಾಪತ್‌ ಮಗಳು ವಿವಾಹವಾಗಿದ್ದರು. ಹೀಗಾಗಿ ಮಗಳನ್ನು ನೋಡಿಕೊಂಡು ಹೋಗಲು ತಂದೆ ನಗರಕ್ಕೆ ಬಂದಿದ್ದರು. ಬೆಳಗ್ಗೆ ವಿಮಾನದಲ್ಲಿ ಬಂದ ಬೀಗರನ್ನು ಬುಲೆಟ್‌ನಲ್ಲಿ ಕರೆದುಕೊಂಡು ಬರುತ್ತಿದ್ದರು. ಆಗ ಬಿ.ಬಿ.ರಸ್ತೆಯ ಕಾಫಿ ಡೇ ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಬೈಕನ್ನು ಅವರು ಗುದ್ದಿಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಗುಡದ್‌ ರಾಮ್‌ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ರಾಜ್‌ ಪ್ರಜಾಪತ್‌ ಅವರನ್ನು ಸಾರ್ವಜನಿಕರು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!