Bengaluru crime: 2 ವಾರಗಳ ಹಿಂದೆ ಬಿಡುಗಡೆ ಆಗಿ ಮನೆಗೆ ಕನ್ನ ಹಾಕಿ ಮತ್ತೆ ಜೈಲು ಸೇರಿದ!

Published : Jul 15, 2023, 05:30 AM IST
Bengaluru crime: 2 ವಾರಗಳ ಹಿಂದೆ ಬಿಡುಗಡೆ ಆಗಿ  ಮನೆಗೆ ಕನ್ನ ಹಾಕಿ ಮತ್ತೆ ಜೈಲು ಸೇರಿದ!

ಸಾರಾಂಶ

ಎರಡು ವಾರಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ವೃತ್ತಿಪರ ಕ್ರಿಮಿನಲ್‌ವೊಬ್ಬ, ಜೆ.ಪಿ.ನಗರ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಪಾನಮತ್ತನಾಗಿ ಮನೆಯೊಂದಕ್ಕೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಚಿನ್ನಾಭರಣ ದೋಚಿ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

ಬೆಂಗಳೂರು (ಜು.15) : ಎರಡು ವಾರಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ವೃತ್ತಿಪರ ಕ್ರಿಮಿನಲ್‌ವೊಬ್ಬ, ಜೆ.ಪಿ.ನಗರ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಪಾನಮತ್ತನಾಗಿ ಮನೆಯೊಂದಕ್ಕೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಚಿನ್ನಾಭರಣ ದೋಚಿ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

ಬನಶಂಕರಿ 2ನೇ ಹಂತದ ಸರಬಂಡೇಪಾಳ್ಯ ನಿವಾಸಿ ಮೊಹಮ್ಮದ್‌ ದಸ್ತಗಿರಿ ಬಂಧಿತನಾಗಿದ್ದು, ಆರೋಪಿಯಿಂದ 3 ಚಿನ್ನದ ಸರಗಳು, ಓಲೆ ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಶಾಖಂಬರಿ ನಗರದ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿ ಶಿಕ್ಷಕಿ ಹಾಗೂ ಎಂಬಿಎ ವಿದ್ಯಾರ್ಥಿನಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ, ಬಳಿಕ ಅವರಿಂದ ಚಿನ್ನ ಹಾಗೂ ಓಲೆ ಪಡೆದಿದ್ದಾನೆ. ಈ ಹಂತದಲ್ಲಿ ಪ್ರತಿರೋಧ ತೋರಿದ ಎಂಬಿಎ ವಿದ್ಯಾರ್ಥಿನಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಆರೋಪಿ ಪರಾರಿಯಾಗಿದ್ದ. ಇದಾದ ಬಳಿಕ ಜಯನಗರ ಬಳಿ ್ಲ ಮತ್ತೊಬ್ಬ ಮಹಿಳೆಯಿಂದ ಸರ ಅಪಹರಿಸಿ ಆತ ಪರಾರಿಯಾಗಿದ್ದ. ಈ ಕೃತ್ಯಗಳ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ರಾಧಾಕೃಷ್ಣ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಸೌಮ್ಯ ನೇತೃತ್ವದ ತಂಡವು, ಎರಡು ದಿನಗಳ ಹಿಂದೆ ಜೆ.ಪಿ.ನಗರ ಬಳಿ ಮತ್ತೆ ಸುಲಿಗೆ ಕೃತ್ಯ ನಡೆಸಲು ಆರೋಪಿ ಸಜ್ಜಾಗಿದ್ದಾಗ ಮಾಹಿತಿ ಪಡೆದು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಂಶಿಕಾ ಹೆಸರಲ್ಲಿ ವಂಚಿಸಿದವಳು ಅರೆಸ್ಟ್, 14 ದಿನಗಳು ನ್ಯಾಯಾಂಗ ಬಂಧನ

ದಸ್ತಗಿರಿ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಆತನ ಮೇಲೆ ಕುಮಾರಸ್ವಾಮಿ ಲೇಔಟ್‌, ಜಯನಗರ ಹಾಗೂ ಕಬ್ಬನ್‌ ಪಾರ್ಕ್ ಸೇರಿ ನಗರದ ವಿವಿಧ ಠಾಣೆಗಳಲ್ಲಿ ಕೊಲೆ ಯತ್ನ, ಸರಗಳ್ಳತನ ಹಾಗೂ ಸುಲಿಗೆ ಹೀಗೆ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕುಮಾರಸ್ವಾಮಿ ಲೇಔಟ್‌ ಠಾಣಾ ವ್ಯಾಪ್ತಿಯ ಕೊಲೆ ಯತ್ನ ಪ್ರಕರಣದಲ್ಲಿ ಆತನಿಗೆ 7 ವರ್ಷಗಳು ಸಜಾ ಶಿಕ್ಷೆಯಾಗಿತ್ತು. ಎರಡು ವಾರಗಳ ಹಿಂದಷ್ಟೇ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಶಿಕ್ಷೆ ಮುಗಿಸಿ ಹೊರ ಬಂದಿದ್ದ ದಸ್ತಗಿರಿ ಮತ್ತೆ ತನ್ನ ದುಷ್ಕ ೃತ್ಯ ಮುಂದುವರೆಸಿದ್ದ. ವಿಪರೀತ ಮದ್ಯ ವ್ಯಸನಿಯಾಗಿದ್ದ ಆತ, ಸುಲಿಗೆ ಹಾಗೂ ಸರಗಳ್ಳತನ ಕೃತ್ಯಗಳಿಂದ ಸಂಪಾದಿಸಿದ ಹಣದಲ್ಲಿ ಮೋಜು ಮಸ್ತಿ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಶಾಖಂಬರಿ ನಗರದ ಸುಲಿಗೆ ಕೃತ್ಯ ಸಂಬಂಧ ಘಟನಾ ಸ್ಥಳದ ವ್ಯಾಪ್ತಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ದಸ್ತಗಿರಿ ಚಹರೆ ಪತ್ತೆಯಾಯಿತು. ಈ ಸುಳಿವು ಆಧರಿಸಿ ಪೊಲೀಸರು ಬೆನ್ನಹತ್ತಿದ್ದ ಜೆ.ಪಿ.ನಗರ ಬಳಿ ಆತ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಗಳು ವಿವರಿಸಿದ್ದಾರೆ.

ಪೊಲೀಸರ ಸೋಗಿನಲ್ಲಿ ಕಿಡಿಗೇಡಿಗಳಿಂದ ದರೋಡೆ: ಇಬ್ಬರ ಬಂಧನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು