Crime News ಸಾಲ ಕೊಡದಿದ್ದಕ್ಕೆ ಬ್ಯಾಂಕಿಗೆ ಬೆಂಕಿ ಹಚ್ಚಿದ ಭೂಪ!

By Suvarna News  |  First Published Jan 9, 2022, 8:23 PM IST

* ಸಾಲ ಕೊಡದಿದ್ದಕ್ಕೆ ಬ್ಯಾಂಕಿಗೆ ಬೆಂಕಿ ಹಚ್ಚಿದ ಭೂಪ
* ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ನಡೆದ ಘಟನೆ
* ಪೋಲಿಸರು ವಿಚಾರಣೆ ವೇಳೆ ಬಾಯ್ಬಿಟ್ಟಿ ಆರೋಪಿ 


ಹಾವೇರಿ, (ಜ.09): ಬ್ಯಾಂಕ್ ನಿಂದ ಸಾಲ(Bank Loan) ಸಿಗುತ್ತಿಲ್ಲವೆಂದು ಬೇಸರಗೊಂಡ ವ್ಯಕ್ತಿಯೊಬ್ಬ ಕೆನರಾ ಬ್ಯಾಂಕ್ ಶಾಖೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಹಾವೇರಿ(Haveri) ಜಿಲ್ಲೆ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ನಡೆದಿದೆ.

ರಟ್ಟಿಹಳ್ಳಿ ನಿವಾಸಿ ವಸೀಮ್ ಮುಲ್ಲಾ (33) ಬ್ಯಾಂಕ್ ಗೆ ಬೆಂಕಿಯಿಟ್ಟ ಆರೋಪಿ.ಬೆಂಕಿ ಕೆನ್ನಾಲಿಗೆಗೆ ಬ್ಯಾಂಕ್ ನ ಬಹುತೇಕ ಭಾಗ ಸುಟ್ಟು ಕರಕಲಾಗಿದ್ದು, ಕಾಗದ ಪತ್ರಗಳು ಬೆಂಕಿಗಾಹುತಿಯಾಗಿವೆ.

Latest Videos

undefined

ಪೊಲೀಸ್‌ ವಾಹನದಿಂದ ಹಾರಿ ಎಸ್ಕೇಪ್‌ ಆದ ಕೈದಿ ... ವಿಡಿಯೋ ವೈರಲ್‌

ಬ್ಯಾಂಕಿಗೆ(Bank) ಬೆಂಕಿ(Fire) ಹಚ್ಚಿ ಪರಾರಿಯಾಗುತ್ತಿದ್ದ ಆರೋಪಿಗೆ ಧರ್ಮದೇಟು ನೀಡಿದ ಗ್ರಾಮಸ್ಥರು, ಪೊಲೀಸರಿಗೆ ಒಪ್ಪಿಸಿದ್ದಾರೆ.ಬ್ಯಾಂಕ್‌ನಲ್ಲಿದ್ದ ಕಾಗದ ಪತ್ರಗಳು, ಕಂಪ್ಯೂಟರ್ ಸುಟ್ಡಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಸ್ಥಳಕ್ಕೆ ಕಾಗಿನೆಲೆ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದರು.

ಬ್ಯಾಂಕ್ ಮ್ಯಾನೇಜರ್ ತನಗೆ ಲೋನ್ ನೀಡಲು ನಿರಾಕರಿಸಿದ್ದರು. ಇದರಿಂದ ಬೇಸತ್ತು ಬ್ಯಾಂಕ್ ಗ್ಲಾಸ್ ಗಳನ್ನು ಒಡೆದು ಒಳನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ.

ನಿಧಿಗಾಗಿ ಮನೆಯನ್ನೆಲ್ಲಾ ಅಗೆದ ಯುವಕ
ಕೊಡಗು : ಸಂಪತ್ತಿನ ಆಸೆಯನ್ನು (Treasure Hunt) ಅವನ ತಲೆಗೆ ತುಂಬಿದರೋ ಗೊತ್ತಿಲ್ಲ. ತನ್ನ ಮನೆಯನ್ನೇ ಅಗೆಸಲು ಆರಂಭಿಸಿ ಇದೀಗ ಪೊಲೀಸರ (POLICE) ಅತಿಥಿಯಾಗಿದ್ದಾನೆ.

ಇಂತಹ ವಿಚಿತ್ರ ಘಟನೆ ನಡೆದಿರೋದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಚನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳಮಾಳ ಕೋಟೆ ಪೈಸಾರಿಯಲ್ಲಿ. ಹೊಳಮಾಳ ಕೋಟೆ ಪೈಸಾರಿಯ 23 ವರ್ಷದ ಯುವಕ ಗಣೇಶ್ ಎಂಬಾತ ನಿಧಿ ಆಸೆಗಾಗಿ ತನ್ನ ಮನೆಯನ್ನು ನಿಗೂಢವಾಗಿ ಅಗೆಸಲು ಆರಂಭಿಸಿದ್ದ. ಮನೆಯಲ್ಲಿ ನಿಧಿ ಇದೆ ಎಂದು ಹೇಳಿದ್ದ ಕೇರಳದ ಮಾಂತ್ರಿಕರ ಮಾತು ಕೇಳಿದ್ದ ಗಣೇಶ್ ನಿಧಿ ಆಸೆಗಾಗಿ ತನ್ನ ಮನೆಯನ್ನೇ ಅಗೆಸಿದ್ದಾನೆ.

ವಾರದ ಹಿಂದೆ ಕೇರಳದಿಂದ ಇಬ್ಬರು ಮಾಂತ್ರಿಕರನ್ನು ಕರೆತಂದಿದ್ದ ಗಣೇಶ್ ಮಾಂತ್ರಿಕರಿಂದ ಮನೆಯಲ್ಲೇ ವಿವಿಧ ಪೂಜೆಗಳನ್ನು ನೆರವೇರಿಸಿ ಕೋಳಿ ಬಲಿ ನೀಡಿದ್ದ. ನಂತರ ಮನೆ ಬಾಗಿಲು ಹಾಕಿಕೊಂಡು ಯಾರಿಗೂ ಗೊತ್ತಾಗದಂತೆ ಮನೆಯ ಒಂದು ಕೋಣೆಯನ್ನು ಅಗೆಸಿದ್ದ. ಬರೋಬ್ಬರಿ 15 ಅಡಿಗೂ ಹೆಚ್ಚು ಆಳದವರೆಗೆ ಗುಂಡಿ ತೋಡಿಸಿದ್ದ. ಗುಂಡಿಯಲ್ಲಿ ನಿಧಿ ಬದಲು ನೀರು ಬರಲು ಆರಂಭಿಸಿತ್ತು. ಅಷ್ಟು ಆಳದ ಗುಂಡಿ ತೆಗೆದರೂ ಏನೂ ದೊರೆತ್ತಿರಲಿಲ್ಲ. ಹೀಗಾಗಿ ಮತ್ತೊಂದು ದೊಡ್ಡ ಬಲಿಯನ್ನು ಕೊಡಲು ಸಿದ್ಧವಾಗಿದ್ದರು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ತೆಗೆದ ಮಣ್ಣನ್ನು ಮನೆಯ ಮತ್ತೊಂದು ಕೊಠಡಿಯಲ್ಲಿ ಶೇಖರಿಸಿ ಇಡುತ್ತಿದ್ದ. ಮನೆಯೊಳಗೆ ಅಷ್ಟು ದೊಡ್ಡ ಗುಂಡಿ ತೆಗೆದಿದ್ದ ಪರಿಣಾಮ ಮನೆ ಬೀಳುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ.

click me!