ಯುವತಿ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಹೋದಾಗ ಹೊರ ಬಿತ್ತು ಕಾಮುಕನ ನೀಚ ಕೃತ್ಯ..!

By Suvarna News  |  First Published Jul 3, 2022, 8:15 PM IST

* ಹೊಟ್ಟೆ ನೋವಿನಿಂದ ಹೊರ ಬಿತ್ತು ಕಾಮುಕನ ನೀಚ ಕೃತ್ಯ..!
* ಐದು ತಿಂಗಳ ಬಳಿಕ ಬಯಲಿಗೆ ಹೀನ ಕೃತ್ಯ
* ಐದು ತಿಂಗಳ ನಂತರ ಕಾಮುಕ ಬಂಧನ..


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ, (ಜುಲೈ.03):
ಬುದ್ದಿಮಾಂದ್ಯ ಯುವತಿ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದು, ಇದೀಗ ಯುವತಿ ಗರ್ಬೀಣಿಯಾಗಿದ್ದಾಳೆ. ಈ ಘಟನೆ ಯಾದಗಿರಿ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿದೆ. 

ಕಾಮುಕ ಯುವತಿಯನ್ನು ಗರ್ಭಾವತಿಯನ್ನಾಗಿ ಮಾಡಿದ ನಂತರ ಬಿಂದಾಸ್ ಆಗಿ ಓಡಾಡಿಕೊಂಡಿದನು. ಇದೀಗ ಆರೋಪಿಯನ್ನು ಸೈದಾಪುರ ಪೊಲೀಸರು ಬಂಧಿಸಿದ್ದು, ಪರಮ ಪಾಪಿ ಐದು ತಿಂಗಳ ನಂತರ ಜೈಲು ಸೇರಿದ್ದಾನೆ.

Tap to resize

Latest Videos

undefined

Belagavi; ಹೆತ್ತ ಮಗಳ ಮೇಲೆ ವೈದ್ಯ ತಂದೆಯಿಂದಲೇ ಪೈಶಾಚಿಕ ಕೃತ್ಯ!

ಯುವತಿ ಹೊಟ್ಟೆ ನೋವಿನಿಂದ ಹೊರಬಿತ್ತು ಕಾಮುಕನ ನೀಚ ಕೃತ್ಯ
ಯುವತಿ ಬುದ್ದಿಮಾಂದ್ಯಳಾಗಿದ್ದು, ಆಕೆಗೆ ತನ್ನ ಬಗ್ಗೆ ಯಾವುದೆಡ ಅರಿವಿರಲಿಲ್ಲ, ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ, ಹೊಟ್ಟೆ ನೋವಿನಿಂದ ಕಾಮುಕನ ನೀಚ ಕೃತ್ಯ ಬೆಳಕಿಗೆ ಬಂದಿದೆ. ಯಾದಗಿರಿ ತಾಲೂಕಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಕಳೆದ ಐದು ತಿಂಗಳ ಹಿಂದೆ ನಡೆದ ಘಟನೆ ಯುವತಿ ಹೊಟ್ಟೆ ನೋವಿನಿಂದ ಆರೋಪಿ ಜೈಲು ಸೇರುವಂತಾಗಿದೆ. ಐದು ತಿಂಗಳ ಹಿಂದೆ ಸಂತ್ರಸ್ತೆ ಗ್ರಾಮದವನಾದ ಆರೋಪಿ ಸಾಬಣ್ಣ ಅದೆ ಗ್ರಾಮದ ಬುದ್ದಿ ಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಐದು ತಿಂಗಳ ಹಿಂದೆ ಸಂತ್ರಸ್ತೆಯು ಜಮೀನಿಗೆ ತೆರಳುವಾಗ ಆರೋಪಿ ಸಾಬಣ್ಣ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಐದು ತಿಂಗಳ ಬಳಿಕ ಬಯಲಿಗೆ ಹೀನ ಕೃತ್ಯ
ಆರೋಪಿ ಸಾಬಣ್ಣ ಅತ್ಯಾಚಾರ ಎಸಗಿ ಊರಲ್ಲಿ ಕೂಲಿ ಕೆಲಸ ಮಾಡಿಕೊಂಡು ನೆಮ್ಮದಿಯಾಗಿದ್ದನು. ಎರಡು ತಿಂಗಳ ಹಿಂದೆ ಆರೋಪಿ ಸಾಬಣ್ಣ ಮದುವೆ ಕೂಡ ಆಗಿದ್ದನು. ಮದುವೆ ನಂತರ ನೆಮ್ಮದಿ ಬದುಕು ಸಾಗಿಸುತ್ತಿದ್ದನು. ಆದರೆ ಐದು ತಿಂಗಳ ಹಿಂದೆ ಮಾಡಿದ್ದ ನೀಚ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಹೊಟ್ಟೆ ನೋವು ಚೆಕ್ ಮಾಡಿಸಿದಾಗ ಯುವತಿ ಗರ್ಭಾವತಿಯಾಗಿದ್ದು ತಿಳಿದು ಬಂದಿದೆ. ಇದರಿಂದಾಗಿ ಯುವತಿಯ ಸಂಬಂಧಿಕರು ಶಾಕ್ ಆಗಿದ್ದಾರೆ. ನಂತರ ಯುವತಿಗೆ ವಿಚಾರ ಮಾಡಿದಾಗ ಸಂತ್ರಸ್ತೆಯು ಸಾಬಣ್ಣ ಅತ್ಯಾಚಾರ ಎಸಗಿದ್ದ ಬಗ್ಗೆ ಮಾಹಿತಿ ನೀಡಿದ್ದಾಳೆ. ನಂತರ ಸಂಬಂಧಿಕರು ದಿಕ್ಕು ತೋಚದಂತಾಗಿದ್ದಾರೆ. ಕೊನೆಗೆ ಈ ಬಗ್ಗೆ ಯುವತಿ ಸಂಬಂಧಿಕರು ಸೈದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸೈದಾಪುರ ಪೊಲೀಸರು ಆರೋಪಿ ಸಾಬಣ್ಣನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಸೂಕ್ತ ತನಿಖೆ ನಡೆಸಿ ಆರೋಪಿಗೆ ತಕ್ಕ ಶಿಕ್ಷೆ: ವೇದಮೂರ್ತಿ
ಈ ಕುರಿತು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಸಂತ್ರಸ್ತೆಗೆ ಆರೋಪಿ ಸಾಬಣ್ಣ ಅತ್ಯಾಚಾರ ವೇಸಗಿದ್ದಾನೆ‌. ಯುವತಿಯು ಗರ್ಭಿಣಿಯಾಗಿದ್ದು, ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿದಾಗ ಅತ್ಯಾಚಾರ ಮಾಡಿದ್ದು ಬೆಳಕಿಗೆ ಬಂದಿದೆ. ಆರೋಪಿ ಸಾಬಣ್ಣನನ್ನು ಸೈದಾಪುರ ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದರು. 

ಇಂತಹ ಹೇಯ ಕೃತ್ಯ ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ
ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆ ಮಾಡಲು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಘಟನೆಯು ನಾಗರಿಕ ಸಮಾಜದಲ್ಲಿ ಕಪ್ಪು ಚುಕ್ಕೆಯಾಗಿದ್ದು, ಆರೋಪಿ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆ ನೀಡುವ ಜೊತೆ ಮತ್ತೆ ಇಂತಹ ಘಟನೆ ನಡೆಯದಂತೆ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕಿದೆ.

click me!