ಮಸೀದಿಯ ನಕಲಿ ದಾಖಲೆಯೊಂದಿಗೆ 3 ಮದ್ವೆ, 2ನೇ ಪತ್ನಿ ಪುತ್ರಿ ಮದುವೆಯಲ್ಲಿ ಸಿಕ್ಕಿಬಿದ್ದ

Published : Dec 12, 2020, 09:49 PM IST
ಮಸೀದಿಯ ನಕಲಿ ದಾಖಲೆಯೊಂದಿಗೆ 3 ಮದ್ವೆ,  2ನೇ ಪತ್ನಿ ಪುತ್ರಿ ಮದುವೆಯಲ್ಲಿ ಸಿಕ್ಕಿಬಿದ್ದ

ಸಾರಾಂಶ

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ. ಆದ್ರೆ, ಇಲ್ಲೋಬ್ಬ ಆಸಾಮಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಮೂರು ಮದುವೆಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಉಡುಪಿ, (ಡಿ.12): ಮಸೀದಿಯ ನಕಲಿ ದಾಖಲೆಗಳನ್ನು ನೀಡಿ 3 ಮದುವೆಯಾಗಿದ್ದ ಕಾಪು ತಾಲೂಕಿನ ಮೂಳೂರು ಗ್ರಾಮದ ಮೊಹಮ್ಮದ್ ರಫೀಕ್ (44) ಎಂಬಾತನನ್ನು ಪೊಲೀಸರು 20 ವರ್ಷಗಳ ನಂತರ ಬಂಧಿಸಿದ್ದಾರೆ.

 ಈತ 2000ರಲ್ಲಿ ಮೂಳೂರಿನ ಮಸೀದಿಯ ನಕಲಿ ಲೆಟರ್ ಹೆಡ್ ಬಳಸಿ 3ನೇ ಮದುವೆಯಾಗಿದ್ದ, ಈ ವಿಷಯ ತಿಳಿದು ಪತ್ನಿಯ ಕಡೆಯವರು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

FIR ಇಲ್ಲ, ಮತಾಂತರ ಇಲ್ಲ.. ಆದರೂ ಲವ್ ಜಿಹಾದ್ ಕೇಸಲ್ಲಿ ಯುವಕನ  ಬಂಧನ!

ಆದರೇ ಆರೋಪಿ ರಫೀಕ್ ಪೊಲೀಸರ ಕೈಗೆ ಸಿಗದೇ ಇದುವರೆಗೆ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಉಲ್ಲಾಳದಲ್ಲಿ ತನ್ನ 2ನೇ ಪತ್ನಿಯ ಮಗಳ ಮದುವೆಗೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾಪು ಎಸೈ ಐ.ಆರ್.ಗಡ್ಡೆಕರ್ ಮತ್ತು ಸಿಬ್ಬಂದಿಗಳು, ಮದುವೆ ಮಗಿದ ಬಳಿಕ  ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Bengaluru: 70 ವರ್ಷದ ಪತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ 67 ವರ್ಷದ ನಿವೃತ್ತ ಪ್ರಾಧ್ಯಾಪಕಿ!
ಜೀವ ವಿಮೆಗಾಗಿ ಜೀವ ತೆಗೆದ: ಲಿಫ್ಟ್ ಕೇಳಿದ್ದೇ ತಪ್ಪಾಯ್ತು: ಹಂತಕ ಸಿಕ್ಕಿಬಿದ್ದಿದ್ದು ಹೇಗೆ?