ಕುಡುಕ ಗಂಡನ ಕಾಟ ತಾಳಲಾರದೇ ತವರು ಮನೆ ಸೇರಿದ್ದ ಪತ್ನಿಯನ್ನು ಪತಿಯೇ ಕೊಲೆ ಮಾಡಲು ಯತ್ನಿಸಿದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲೋನಿಯಲ್ಲಿ ನಡೆದಿದೆ.
ಬಳ್ಳಾರಿ (ಮಾ.30): ಕುಡುಕ ಗಂಡನ ಕಾಟ ತಾಳಲಾರದೇ ತವರು ಮನೆ ಸೇರಿದ್ದ ಪತ್ನಿಯನ್ನು ಪತಿಯೇ ಕೊಲೆ ಮಾಡಲು ಯತ್ನಿಸಿದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲೋನಿಯಲ್ಲಿ ನಡೆದಿದೆ.
ರಮೇಶ ಪತ್ನಿಯನ್ನು ಕೊಲೆ ಮಾಡಲು ಮುಂದಾಗಿದ್ದ ಭೂಪ. ಹೊಸಪೇಟೆ ಮೂಲದ ರಮೇಶ್ ಕಳೆದ 8 ವರ್ಷಗಳ ಹಿಂದೆ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲೋನಿಯ ಆಶಾ ವನಜಾ ಅವರನ್ನು ಮದುವೆಯಾಗಿದ್ದನು. ಗಂಡ ರಮೇಶನ ಅತಿಯಾದ ಮದ್ಯ ಸೇವನೆ ಹೆಚ್ಚಿದ ಹಿನ್ನೆಲೆಯಲ್ಲಿ ಬೇಸತ್ತ ಪತ್ನಿ ಆಶಾ ವನಜಾ, ಗಂಡನ ಜೊತೆ ಸಂಸಾರ ಮಾಡಲು ನಿರಾಕರಿಸಿ, ತವರು ಮನೆ ಸೇರಿದ್ದರು.
undefined
ಸಾಕಷ್ಟು ಬಾರಿ ಕರೆದರೂ ಪತಿಯ ವರ್ತನೆಯಿಂದ ಬೇಸತ್ತ ಗಂಡನ ಮನೆಗೆ ಬರೋದಿಲ್ಲ ಎನ್ನುತ್ತಿದ್ದಳಂತೆ ಪತ್ನಿ. ವರ್ಷವಾದ್ರೂ ಬಾರದ ಪತ್ನಿಯನ್ನು ಕೊಲ್ಲಲು ಮಚ್ಚು ತಂದ ಭೂಪ!
ಒಂದು ವರ್ಷದಿಂದ ಗಂಡನ ಮನೆಗೆ ಬಾರದೆ, ಗಂಡನೊಂದಿಗೆ ಸಂಸಾರ ಮಾಡಲು ಒಲ್ಲೆ ಎಂದ ಪತ್ನಿಯ ವಿಚಾರವಾಗಿ ರಮೇಶ್ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದನು. ಹೀಗಾಗಿ ಕುಪಿತಗೊಂಡ ಪತಿ ರಮೇಶ್, ಮಚ್ಚು ಹಿಡಿದು ತವರು ಮನೆಗೆ ಬಂದು ಕೊಲೆಮಾಡಲು ಮುಂದಾಗಿದ್ದಾನೆ.
ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಥಳೀಯರು, ಮಚ್ಚು ಕಸಿದುಕೊಂಡು ಮಹಿಳೆಯನ್ನು ರಕ್ಷಿಸಿದ್ದಾರೆ. ಗಂಡ ರಮೇಶನನ್ನು ಮಚ್ಚು ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ.
Bengaluru Crime: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನ ಕೊಲೆ: ಮಕ್ಕಳಿಂದಲೇ ಜೈಲು ಸೇರಿದ ತಾಯಿ