ಅಂಗವಿಕಲ ಮಗನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಕೊಂದ ತಂದೆ ಬಳಿಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಹಳೇ ಮೀನು ಮಾರುಕಟ್ಟೆಸಮೀಪದ ಪೌರ ಕಾರ್ಮಿಕರ ವಸತಿ ಗೃಹದಲ್ಲಿ ನಡೆದಿದೆ.
ಕುಮಟಾ (ಮೇ.21) : ಅಂಗವಿಕಲ ಮಗನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಕೊಂದ ತಂದೆ ಬಳಿಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಹಳೇ ಮೀನು ಮಾರುಕಟ್ಟೆಸಮೀಪದ ಪೌರ ಕಾರ್ಮಿಕರ ವಸತಿ ಗೃಹದಲ್ಲಿ ನಡೆದಿದೆ.
ಪೌರಕಾರ್ಮಿಕ ಶ್ರೀಧರ ಹರಿಜನ (45) ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಹಾಗೂ ಅಂಗವಿಕಲ ಪ್ರೀತಂ ಹರಿಜನ (15) ಶವ ನೀರಿನ ಟ್ಯಾಂಕಿನಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.
undefined
ಉಡುಪಿ: ಅಂಗವಿಕಲ ಮಗನ ಬಾವಿಗೆ ತಳ್ಳಿ ತಂದೆ ನೇಣಿಗೆ ಶರಣು
ಪ್ರೀತಂ ಹರಿಜನ ಜನ್ಮತಃ ಅಂಗವಿಕಲನಾಗಿದ್ದು, ಸಾಕಷ್ಟುಚಿಕಿತ್ಸೆಯ ಬಳಿಕವೂ ಸರಿಹೋಗದ್ದರಿಂದ ಮನನೊಂದ ತಂದೆಯೇ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಊಹಿಸಲಾಗಿದೆ. ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಜಲು ತೆರಳಿದ್ದ ಯುವಕ ಮೃತ್ಯು
ಹೊನ್ನಾವರ:ತಾಲೂಕಿನ ಕಾಸರಕೋಡದ ಬ್ಲೂಫ್ಲ್ಯಾಗ್ ಮಾನ್ಯತೆ ಪಡೆದಿರುವ ಇಕೋ ಬೀಚ್ ಸಮೀಪ ಸಮುದ್ರದಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಘಟನೆ ಶನಿವಾರ ನಡೆದಿದೆ.
ಪಿಕ್ನಿಕ್‌ಗೆ ಹೋಗಿದ್ದೋರು ಮಸಣ ಸೇರಿದ್ರು: ಸಮುದ್ರದಲ್ಲಿ ಮುಳುಗಿ ಒಂದೇ ಕುಟುಂಬದ 6 ಜನರ ದಾರುಣ ಸಾವು
ಚಿಕ್ಕಮಗಳೂರು ಜಿಲ್ಲೆ ಮೂಡಗೇರಿಯ ನಿವಾಸಿ ಮಧ್ವರಾಜ ಟಿ.ಸಿ. (23) ಮೃತ ಯುವಕ. ಮೈಸೂರು ಮಹಾಜನ್ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಮೂವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ರೈಲ್ವೆಯಲ್ಲಿ ಹೊನ್ನಾವರಕ್ಕೆ ಆಗಮಿಸಿದ್ದರು. ನಂತರ ಇಕೋ ಬೀಚ್ ವೀಕ್ಷಿಸಲು ಆಗಮಿಸಿದಾಗ ಈ ಘಟನೆ ನಡೆದಿದೆ. ಯುವಕ ಸಮುದ್ರದಲ್ಲಿ ಮುಳುಗುತ್ತಿದ್ದಾಗ ಇತರ ಸ್ನೇಹಿತರು ಸಹಾಯಯಾಚಿಸುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಲೈಫ್‌ಗಾರ್ಡ್ ಸಿಬ್ಬಂದಿ ಹೋಗುವ ಪೂರ್ವದಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ, ಪೋಲಿಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದಾಗ ಶವ ಅಪ್ಸರಕೊಂಡ ಸಮೀಪ ದೊರೆತಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.