ಚಿಕ್ಕಮಗಳೂರು: ಗಾಂಜಾ ಮತ್ತಿನಲ್ಲಿ ಪೊಲೀಸರ ಮೇಲೆಯೇ ಪುಂಡನಿಂದ ಹಲ್ಲೆ!

By Ravi Janekal  |  First Published Aug 6, 2024, 5:57 PM IST

ಗಾಂಜಾ ಮತ್ತಿನಲ್ಲಿ ಪುಂಡನೋರ್ವ ಕರ್ತವ್ಯನಿರತ ಪೊಲೀಸರ ಮೇಲೆಯೇ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಬೇಲೂರು -ಹಿರೇಮಗಳೂರು ರಸ್ತೆಯಲ್ಲಿ ಘಟನೆ ನಡೆದಿದೆ.


ಚಿಕ್ಕಮಗಳೂರು (ಆ.6): ಗಾಂಜಾ ಮತ್ತಿನಲ್ಲಿ ಪುಂಡನೋರ್ವ ಕರ್ತವ್ಯನಿರತ ಪೊಲೀಸರ ಮೇಲೆಯೇ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಬೇಲೂರು -ಹಿರೇಮಗಳೂರು ರಸ್ತೆಯಲ್ಲಿ ಘಟನೆ ನಡೆದಿದೆ.

ಸಗನೀಪುರದ ಕೌಶಿಕ್ ಎಂಬುವವನಿಂದ ಪುಂಡಾಟ. ಎಣ್ಣೆ-ಗಾಂಜಾ ದಾಸನಾಗಿದ್ದ ವ್ಯಕ್ತಿ. ಗಾಂಜಾ ಸೇವಿಸಿ ಮತ್ತಿನಲ್ಲಿ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ರಾಡು ಡ್ರ್ಯಾಗರ್‌ನಿಂದ ಇರಿದು ಹಲ್ಲೆ ಮಾಡುತ್ತಿದ್ದ ಪಾತಕಿ. ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ ರಸ್ತೆಯಲ್ಲಿ ಆತಂಕ ಸೃಷ್ಟಿಸಿದ ಪುಂಡ. 

Tap to resize

Latest Videos

undefined

ಪಿಎಸ್‌ಐ ಪರಶುರಾಮ ಸಾವು ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಪೊಲೀಸರ ಕೊರಳಪಟ್ಟಿ ಹಿಡಿದು ಚೂರಿ ಇರಿಯಲು ಮುಂದಾದ ಆಸಾಮಿ. ಪುಂಡನ ಹುಚ್ಚಾಟಕ್ಕೆ ಪೊಲೀಸರೇ ಅಸಹಾಯಕರಾಗಿ ನಿಲ್ಲುವಂತಾಯಿತು. ಹರಸಾಹಸ  ಪಟ್ಟು ಕೊನೆಗೂ ಪುಂಡನನ್ನ ವಶಕ್ಕೆ ಪಡೆದು ಕರೆದೊಯ್ದ ಪೊಲೀಸರು. ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿದ್ದರಾಮಯ್ಯನವರೇ ಆರೋಪಿ ನಂಬರ್ 1- ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ!

ಜಿಲ್ಲೆಯಲ್ಲಿ ಅಕ್ರಮವಾಗಿ ಎಣ್ಣೆ, ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಯುವಕರು ಹಗಲಿನಲ್ಲಿ ಗಾಂಜಾ ಸೇವನೆ ಮಾಡಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಹಿಂದೆ ಹಲವು ಪ್ರಕರಣಗಳು ನಡೆದಿದ್ದರೂ ಇನ್ನು ಹೆಚ್ಚೆತ್ತು ಕೊಳ್ಳದ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಸಾರ್ವಜನಿಕರು ಟೀಕೆಗೆ ಗುರಿಯಾಗಿದೆ.

click me!