ಗದಗ ಒಂದೇ ಕುಟುಂಬ ನಾಲ್ವರನ್ನು ಭೀಕರ ಹತ್ಯೆಗೈದ ಫಯಾಜ್ ಗ್ಯಾಂಗ್; ಹಿರಿ ಮಗನಿಂದಲೇ ಕುಟುಂಬದ ಕೊಲೆಗೆ ಸುಪಾರಿ!

By Suvarna News  |  First Published Apr 22, 2024, 11:55 AM IST

ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ  ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಈಗ ರೋಚಕ ತಿರುವು ಸಿಕ್ಕಿದೆ. ಹಿರಿಯ ಮಗನೇ ಕೊಲೆಗೆ ಸುಪಾರಿ ನೀಡಿದ್ದು ಬಹಿರಂಗವಾಗಿದೆ.


ಗದಗ (ಏ.22): ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ  ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಈಗ ರೋಚಕ ತಿರುವು ಸಿಕ್ಕಿದೆ. ಗದಗ ನಗರದ ದಾಸರ ಓಣಿಯಲ್ಲಿ ನಡೆದಿದ್ದ ನಾಲ್ವರ ಭೀಕರ ಹತ್ಯೆಗೆ ಸ್ವಂತ ಮಗನೇ ಸುಪಾರಿ ನೀಡಿದ್ದ ಎಂಬ ಅಂಶ ಬಯಲಾಗಿದೆ. 

ಗದಗ ನಗರದ ದಾಸರ ಓಣಿಯಲ್ಲಿ  ನಗರಸಭೆ ಉಪಾಧ್ಯಕ್ಷೆ ಕಿರಿಯ ಮಗ ಕಾರ್ತಿಕ್ ಬಾಕಳೆ  (28), ಪರಶುರಾಮ ಹಾದಿಮನಿ (55), ಪತ್ನಿ ಲಕ್ಷ್ಮೀ ಹಾದಿಮನಿ (45), ಪುತ್ರಿ ಆಕಾಂಕ್ಷಾ ಹಾದಿಮನಿ (16) ಕೊಲೆಯಾಗಿತ್ತು. ಇದೀಗ ಪ್ರಕಾಶ್ ಬಾಕಳೆ ಅವರ ಹಿರಿಯ ಮಗ ವಿನಾಯಕ್ ಬಾಕಳೆ ಕೊಲೆಗೆ ಸುಪಾರಿ ನೀಡಿದ್ದು ಬಹಿರಂಗವಾಗಿದೆ.

Tap to resize

Latest Videos

undefined

ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಬೆಂಗಳೂರು ಉದ್ಯಮಿ ಜೊತೆಗೆ 1.5ಕೋಟಿ ಡೀಲ್‌ ಮಾಡಿದ್ದ ಗ್ಯಾಂಗ್ ಅರೆಸ್ಟ್!

ಕುಟುಂಬ ಮುಗಿಸಲು ಪ್ರಕಾಶ್ ಬಾಕಳೆ ಅವರ ಹಿರಿಯ ಮಗ ವಿನಾಯಕ್ ಬಾಕಳೆ ಮಹರಾಷ್ಟ್ರ ಮೂಲದ ಫಯಾಜ್ ಆ್ಯಂಡ್ ಗ್ಯಾಂಗ್ ಗೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾನೆ. ಕೊಲೆ ಹಿಂದೆ ಆಸ್ತಿ ಹಂಚಿಕೆ ವಿಷಯ ಇರುವ ಬಗ್ಗೆ ಅನುಮಾನ ಮೂಡಿದೆ. ಆರೋಪಿಯನ್ನ ವಶಕ್ಕೆ ಪಡೆದು  ಗದಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

ಶುಕ್ರವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಕೊಲೆ ನಡೆದಿತ್ತು. ಮನೆಗೆ ನುಗ್ಗಿ ಈ ಹತ್ಯೆ ನಡೆದಿತ್ತು. ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್ ಬಾಕಳೆ, ಹಾಲಿ ಉಪಾಧ್ಯಕ್ಷೆ ಸುನಂದಾ ಬಾಕಳೆ ಟಾರ್ಗೆಟ್ ಮಾಡಿ ಈ ಭೀಕರ ಕೃತ್ಯ ನಡೆದಿತ್ತು.

Gadag: ನಗರಸಭೆ ಮಾಜಿ‌ ಉಪಾಧ್ಯಕ್ಷೆ ಮನೆಯಲ್ಲಿ ಮರ್ಡರ್: ಚಾಕುವಿನಿಂದ ಇರಿದು ಮಲಗಿದ್ದ ನಾಲ್ವರ ಹತ್ಯೆ!

ರಾತ್ರಿ ಮನೆಗೆ ನುಗ್ಗಿ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದ ಪರಶುರಾಮ್ ಕುಟುಂಬದ ಹತ್ಯೆಗೈಯಲಾಗಿದ್ದು, ನಂತರ ನೆಲಮಹಡಿಯಲ್ಲಿ ಮಲಗಿದ್ದ ಕಾರ್ತಿಕ್ ಹತ್ಯೆ ಮಾಡಲಾಗಿತ್ತು. ಕಾರ್ತಿಕ್ ಮದುವೆ ನಿಶ್ಚಯ ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರ ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿ ಮೂರು ಚಾಕುಗಳನ್ನ ದುಷ್ಕರ್ಮಿಗಳು ಹಿತ್ತಲಲ್ಲಿ ಎಸೆದುಹೋಗಿದ್ದರು. ಮೃತರಾದ ಪರಶುರಾಮ,  ಲಕ್ಷ್ಮೀ ಹಾದಿಮನಿ, ಪುತ್ರಿ ಆಕಾಂಕ್ಷಾ ಈ ಮೂವರು ಕೊಪ್ಪಳ ಮೂಲದವರಾಗಿದ್ದಾರೆ. ಇವರೆಲ್ಲ ಏಪ್ರಿಲ್‌ 17 ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ ನ ಮದುವೆ  ಕಾರ್ಯಕ್ರಮಕ್ಕಾಗಿ ಬಂದಿದ್ದರು.

click me!