ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನಲ್ಲಿ ನೀರು ತುಂಬಿದ ಬಕೆಟ್‌ನೊಳಗೆ ಬಿದ್ದು 10 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಘಟನೆ ಪೂರ್ಣ ವಿವರ ಇಲ್ಲಿದೆ ನೋಡಿ.
ವರದಿ : ವರದರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ದಾವಣಗೆರೆ (ಡಿ.11): ಚಿಕ್ಕಮಕ್ಕಳನ್ನು ಹೊಂದಿರುವ ಪೋಷಕರೇ ಎಚ್ಚರ. ಮಕ್ಕಳ ಬಗ್ಗೆ ಎಷ್ಟೇ ನಿಗಾವಹಿಸಿದರೂ ಕಡಿಮೆಯೇ. ಸ್ವಲ್ಪ ಮೈಮರೆತರು ಮಕ್ಕಳ ಜೀವಕ್ಕೆ ಆಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಾಗಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನಲ್ಲಿ ನೀರು ತುಂಬಿದ ಬಕೆಟ್‌ನೊಳಗೆ ಬಿದ್ದು 10 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
undefined
ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿಯಲ್ಲಿ ಮನೆ ಮುಂದೆ ಆಟವಾಡುತಿದ್ದ ಮಗು ನೀರು ತುಂಬಿದ ಬಕೆಟ್ ನಲ್ಲಿ ಬಿದ್ದು ಮಗು ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಗ್ರಾಮದ ಮಂಜುನಾಥ್ ಹಾಗೂ ತಾರ ಎಂಬುವರ ದಂಪತಿಗಳ ಪುತ್ರಿ 10 ತಿಂಗಳ ಅನುಸಾವ್ಯ ಮೃತ ಮಗು ಎನ್ನಲಾಗಿದೆ. ಎಂದಿನಂತೆ ಸಂಜೆ ಮಗು ಮನೆಯ ಮುಂದೆ ಆಟವಾಡುತ್ತಿತ್ತು. ಅಲ್ಲಿಯೇ ಸಮೀಪದಲ್ಲಿ ನೀರು ತುಂಬಿದ ಬಕೆಟ್ ಬಳಿ ಹೋಗಿದೆ. ಅದನ್ನು ನೋಡುವ ಕುತೂಹಲದಲ್ಲಿ ಮಗು ಬಕೆಟ್‌ನೊಳಗೆ ಮಕಾಡೆ ಬಿದ್ದಿದೆ. ಮಗು ಉಸಿರುಕಟ್ಟಿ ಸಾವು ಬದುಕಿನ ಮಧ್ಯೆ ಹೋರಾಡುವಾಗ ಪೋಷಕರು ಗಾಬರಿಗೊಂಡು ಮಗುವನ್ನು ಎತ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಗು ಉಸಿರು ನಿಂತಿದೆ. ಪೋಷಕರು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಕರೆತರುವಾಗ ರಸ್ತೆ ಮಾರ್ಗ ಮಧ್ಯೆ ಅಸುನೀಗಿದೆ.
Chikkamagaluru; ನೀರಿನ ತೊಟ್ಟಿಯಲ್ಲಿ ಬಿದ್ದು 11 ತಿಂಗಳ ಮಗು ಸಾವು
ಕೇವಲ ಹತ್ತು ತಿಂಗಳ ಮುದ್ದಾದ ಹೆಣ್ಣು ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಲ್ಲಿ ಪೋಷಕರ ಅಜಾಗರೂಕತೆಯೇ ಮಗುವಿನ ಸಾವಿಗೆ ಕಾರಣ ಎಂದು ಹೇಳಬಹುದಾಗಿದೆ. ಆದರೆ, ಪ್ರಪಂಚ ಜ್ಞಾನವೇ ಇಲ್ಲದ ಮಗು ಈಗ ಧಾರುಣವಾಗಿ ಸಾವನ್ನಪ್ಪಿದ ಘಟನೆ ಇಡೀ ಗ್ರಾಮದ ಜನರನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿತ್ತು. ಈ ಘಟನೆಯ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳಿರುವ ಮನೆಯಲ್ಲಿ ಪೋಷಕರೇ ಎಚ್ಚರ : ಮನೆಯಲ್ಲಿ ನೀರಿನ ತೊಟ್ಟಿ, ನೀರು ಕಾಯಿಸುವಾಗ ಕಾಯಿಲ್ ಬಳಕೆ, ಬಕೇಟ್ ನಲ್ಲಿ ನೀರು ತುಂಬಿಸಿಟ್ಟಾಗ, ಮನೆ ಅಕ್ಕ ಪಕ್ಕ ರಾಜಕಾಲುವೆ, ನೀರಿನ ಹೊಂಡ ಅಥವಾ ಕೆರೆಗಳಿದ್ದಾಗ ನಿಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕಾದ ಅನಿವಾರ್ಯ ತೆ ಇದೆ. ಇನ್ನು ಈಜಾಡಲು ಹೋದವರು ಅಥವಾ ಫಾಲ್ಸ್‌ಗಳ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪುವ ಘಟನೆಗಳು ಸಾಕಷ್ಟು ವರದಿ ಆಗುತ್ತಿವೆ. ಇಂತಹದ್ದರಲ್ಲಿ ಈಗ ಮಗು ಬಕೆಟ್‌ನೊಳಗೆ ಬಿದ್ದು ಉಸಿರುಗಟ್ಟು ಸಾವನ್ನಪ್ಪಿದ ಘಟನೆ ಕುಟುಂಬಕ್ಕೆ ಆಘಾತ ತಂದೊಡ್ಡಿದೆ.