ಮಾಜಿ ಸಚಿವ, ಶಾಸಕ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಡೆತ್ ನೋಟ್‌ನಲ್ಲಿ ಹೆಸರು ಫೋನ್ ನಂಬರ್ ಬರೆದಿರುವುದರಿಂದ ಅರವಿಂದ ಲಿಂಬಾವಳಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಮನಗರ (ಜ.2) : ವ್ಯವಹಾರದಲ್ಲಿ ಮೋಸ ಮಾಡಿದರೆಂಬ ಕಾರಣಕ್ಕೆ ರಾಜಕಾರಣಿಯೊಬ್ಬರ ಹೆಸರು ಸೇರಿದಂತೆ ಪ್ರಭಾವಿಗಳ ಹೆಸರು ಉಲ್ಲೇಖಿಸಿ ಡೆತ್‌ನೋಟ್(Death note) ಬರೆದಿಟ್ಟು ವ್ಯಕ್ತಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ(Ramanagara) ತಾಲೂಕಿನ ನೆಟ್ಟಿಗೆರೆ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್(HSR Layout) ಬಳಿಯ ಅಮಲೀಪುರದ ನಿವಾಸಿ ಪ್ರದೀಪ್(47) ಆತ್ಮಹತ್ಯೆ(Suicidee )ಗೆ ಶರಣಾದವರು. ಆತ್ಮಹತ್ಯೆಗೂ ಮುನ್ನ ಮಾಜಿ ಸಚಿವ ಅರವಿಂದ ಲಿಂಬಾವಳಿ(Arvind), ಉದ್ಯಮಿಗಳಾದ ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ, ಡಾ ಜಯರಾಮರೆಡ್ಡಿ, ರಾಘವ ಭಟ್ ಅವರ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಹೊಸ ವರ್ಷಾಚರಣೆ ಸಲುವಾಗಿ ಪ್ರದೀಪ್ ಕುಟುಂಬ ಸಮೇತ ರಾಮನಗರದ ಕಗ್ಗಲೀಪುರ ಸಮೀಪವಿರುವ ನೆಟ್ಟಗೆರೆ ಬಳಿ ಇರುವ ರೆಸಾರ್ಟ್ ಗೆ ಆಗಮಿಸಿದ್ದರು. ರಾತ್ರಿ ಪಾರ್ಟಿ ಮಾಡಿರುವ ಪ್ರದೀಪ್ ಬೆಳಗ್ಗೆ ಶಿರಾಗೆ ಹೋಗಬೇಕೆಂದು ಹೇಳಿರೆಸಾರ್ಟ್ ನಿಂದ ಭಾನುವಾರ ಬೆಳಗ್ಗೆ ಒಬ್ಬರೇ ಬೆಂಗಳೂರಿನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿ ಡೆತ್‌ನೋಟ್ ಬರೆದಿದ್ದಾರೆ. ಆನಂತರ ರೆಸಾರ್ಚ್‌ಗೆ ವಾಪಸ್ಸಾದ ಪ್ರದೀಪ್, ಕಾರಿನಲ್ಲಿ ಮತ್ತೊಂದು ಡೆತ್‌ನೋಟ್ ಬರೆದಿದ್ದಾರೆ. ಈ ವೇಳೆ ಕುಟುಂಬದವರು ಹೊರಟ್ಟಿದ್ದ ಕಾರನ್ನು ಓವರ್ ಟೇಕ್ ಮಾಡಿ, ತಾನು ಚಲಾಯಿಸುತ್ತಿದ್ದ ಕಾರಿನಲ್ಲಿಯೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Mandya: ಧನದಾಹಿ ಪತಿಯ ವರದಕ್ಷಿಣೆ ಕಿರುಕುಳಕ್ಕೆ ಗರ್ಭಿಣಿ ಪತ್ನಿ ಬಲಿ?..! ಕೊಲೆ ಶಂಕೆ
ಪಾಲುದಾರಿಕೆ ಹೆಸರಲ್ಲಿ ಮೋಸ
‘ಎಚ್‌ಎಸ್‌ಆರ್ ಲೇಔಟ್ ಬಳಿ ರೆಸಾರ್ಟ್ ತೆರೆಯಲು ಐದು ಮಂದಿ ನನ್ನ ಬಳಿ ಮಾತುಕತೆ ನಡೆಸಿದ್ದರು. ಆದರಂತೆ ಒಂದೂವರೆ ಕೋಟಿ ಹಣ ಪಡೆದುಕೊಂಡಿದ್ದರು. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಮನೆ ಮಾರುವುದರ ಜೊತೆಗೆ ಸಾಕಷ್ಟುಸಾಲ ಮಾಡಿಕೊಂಡಿದ್ದೆ. ಆದರೆ, ಪಾಲುದಾರಿಕೆ ಹೆಸರಿನಲ್ಲಿ ಪಾಲುದಾರರೇ ನನಗೆ ಮೋಸ ಮಾಡಿದ್ದಾರೆ. ನನಗೆ ಒಟ್ಟು ಎರಡೂವರೆ ಕೋಟಿ ಹಣ ಬರಬೇಕಿತ್ತು. ಈ ಮಧ್ಯೆ ಮಾಜಿ ಸಚಿವ ಅರವಿಂದ ಲಿಂಬಾವಳಿ ರಾಜಿ ಮಾಡುವ ಪ್ರಯತ್ನ ಮಾಡಿ ತಿಂಗಳಿಗೆ ಒಂದು ಲಕ್ಷದಂತೆ ಒಂಬತ್ತು ತಿಂಗಳು ಹಣ ನೀಡುವಂತೆ ಮಾತುಕತೆ ನಡೆಸಿ ಒಪ್ಪಿಸಿದ್ದರು. ಅದರಂತೆ ಕೇವಲ 9 ಲಕ್ಷ ಹಣವಷ್ಟೆವಾಪಸ್ ಬಂದಿದೆ. ಆನಂತರ ಲಿಂಬಾವಳಿ ಅವರು ಸಹ ನನಗೆ ಸಹಾಯ ಮಾಡಿಲ್ಲ’ ಎಂದು ಡೆತ್‌ನೋಟ್‌ನಲ್ಲಿ ಪ್ರದೀಪ್ ಬರೆದಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬದವರ ಕ್ಷಮೆ: ಪ್ರದೀಪ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ನೋಟನಲ್ಲಿ ಕುಟುಂಬದವರ ಕ್ಷಮೆ ಕೇಳಿದ್ದಾನೆ. 'ನನಗೆ ಒಳ್ಳೆಯ ಗಂಡನಾಗಲು ಸಾಧ್ಯವಾಗಲಿಲ್ಲ. ಒಳ್ಳೆಯ ಈ ಕಡೆ ತಂದೆಯೂ ಆಗಲಿಲ್ಲ. ತಂದೆ-ತಾಯಿಗೆ ಒಳ್ಳೆಯ ಮಗನೂ ಆಗಲಿಲ್ಲ. ನನ್ನ ಸಹೋದರನಿಗೂ ಸಾರಿ ಹೇಳುತ್ತಿದ್ದು, ಆತನಿಗೂ ಒಳ್ಳೆಯ ಸಹೋದರನಾಗಲಿಲ್ಲ" ಎಂದು ಡೆತ್‌ನೋಟ್‌ನಲ್ಲಿ ಪ್ರದೀಪ್ ಬರೆದಿದ್ದಾರೆಂದು ಮೂಲಗಳು ತಿಳಿಸಿವೆ.
ಪತ್ನಿಯೊಂದಿಗೆ ಜಗಳ ಆಡುತ್ತಿದ್ದ ಪ್ರದೀಪ್:
ಡೆತ್‌ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪ್ರದೀಪ್ ವಿರುದ್ಧ ಆತನ ಪತ್ನಿ ನಮೀತಾ ಹಿಂದೆ ದೂರು ನೀಡಿದ್ದಳು. ಪತಿ ವಿವಾಹ ಆದಾಗಿನಿಂದಲೂ ಜಗಳ ಮಾಡುತ್ತಿದ್ದ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ನೀನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಗಲಾಟೆ ಮಾಡುತ್ತಿದ್ದ ಪ್ರದೀಪ್. ಪಿಸ್ತೂಲ್ ಹಣೆಗೆ ಇಟ್ಟು ಸಾಯಿಸಿ ಬಿಡುವುದಾಗಿಯೂ ಹೆದರಿಸಿದ್ದಾಗಿ ಪತ್ನಿ ಬೆಳ್ಳಂದೂರು ಠಾಣೆಯಲ್ಲಿ 7-05-22 ರಲ್ಲೇ ದೂರು ನೀಡಿದ್ದ ಪತ್ನಿ ನಮೀತಾ.
ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹ ಹಸ್ತಾಂತರ :
ಇಂದು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಪ್ರದೀಪ್ ಮರಣೋತ್ತರ ಪರೀಕ್ಷೆ ನಡೆಸಲಿರುವ ವೈದ್ಯರು. ಬಳಿಕ ಎಫ್ ಎಸ್ ಎಲ್ ಟೀಂ ಪರಿಶೀಲನೆ ನಡೆಸಲಿದ್ದಾರೆ. ಕಳೆದ ರಾತ್ರಿ ಮೃತ ದೇಹ ರವಾನಿಸಿರುವ ಪೊಲೀಸರು. ಡೆತ್ ನೋಟ್ ಪ್ರಭಾವಿ ರಾಜಕಾರಣಿ ಹೆಸರು ಬರೆದಿರುವ ಹಿನ್ನೆಲೆ ಕಾನೂನು ಸಲಹೆ ಪಡೆಯಲು ಮುಂದಾದ ಕಗ್ಗಲಿಪುರ ಪೊಲೀಸರು.ಪೊಲೀಸರು. ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳನ್ನ ಕರೆಸಬೇಕೋ ಬೇಡ್ವೋ ಎನ್ನುವ ಬಗ್ಗೆ ಕಾನೂನು ಸಲಹೆ ಈಗಾಗಲೇ ಕಗ್ಗಲಿಪುರ ಪೊಲೀಸರಿಗೆ ವರದಿಕೊಟ್ಟ ಮೊಬೈಲ್ ಫಾರೆನ್ಸಿಕ್ ಟೀಮ್ ವರದಿ ಆಧರಿಸಿ ತನಿಖೆಗಿಳಿದ ಕಗ್ಗಲಿಪುರ ಪೊಲೀಸರು. ಕಾರು ಚಲಿಸುತ್ತಿರುವಾಗಲೇ ಪ್ರದೀಪ್ ಗುಂಡು ಹಾರಿಸಿಕೊಂಡ್ನಾ ಎನ್ನುವ ಬಗ್ಗೆ ಅನುಮಾನ ಕಾರು ರಸ್ತೆಯಿಂದ ಪಕ್ಕಕೆ ಹೋಗಿ ಹಿಂಬದಿ ಧರೆಗೆ ಗುದ್ದಿದೆ. ಹಾಗಾಗಿ ಚಲಿಸುತ್ತಿರುವಾಗ್ಲೇ ಗಂಡುಹಾರಿಸಿ ಕೊಂಡಿರುವ ಬಗ್ಗೆ ಅನುಮಾನ ಮೂಡಿದೆ.
ಪ್ರದೀಪ್ ಮತ್ತು ಅವರ ಅತನ ಪತ್ನಿ ನಡುವೆ ನಡೆದ ಜಗಳ ರಾಜಿ ಸಂಧಾನದ ಮೂಲಕ ಬಗೆಹರಿದಿತ್ತು ಕೌಟಂಬಿಕ ವಿಚಾರದ ಬಗ್ಗೆಯೂ ತನಿಖೆ ನಡೆಸಲಿರುವ ಕಗ್ಗಲಿಪುರ ಪೊಲೀಸರು. ಗನ್ ಯಾಕಾಗಿ ಇಟ್ಟುಕೊಂಡಿದ್ರೂ, ಅದಕ್ಕೆ ಲೈಸೆನ್ಸ್ ಇದಿಯಾ ಎನ್ನುವ ಬಗ್ಗೆಯು ಮಾಹಿತಿ ಪಡೆಯಲಿರುವ ಪೊಲೀಸರು