ಕೆರೆಯಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರು ಪಾಲಾಗಿರುವ ಘಟನೆ ನಗರದ ಹೊರವಲಯದ ಕೋಟೆ ಕೆರೆಯಲ್ಲಿ ನಡೆದಿದೆ. ಮೃತ ಬಾಲಕನನ್ನ ಹದಿಮೂರು ವರ್ಷದ ಶಶಾಂಕ್ ಎಂದು ಗುರುತಿಸಲಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.27): ಕೆರೆಯಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರು ಪಾಲಾಗಿರುವ ಘಟನೆ ನಗರದ ಹೊರವಲಯದ ಕೋಟೆ ಕೆರೆಯಲ್ಲಿ ನಡೆದಿದೆ. ಮೃತ ಬಾಲಕನನ್ನ ಹದಿಮೂರು ವರ್ಷದ ಶಶಾಂಕ್ ಎಂದು ಗುರುತಿಸಲಾಗಿದೆ. ಮೃತ ಬಾಲಕ ಶಾಲೆಗೆ ರಜೆ ಇದ್ದ ಕಾರಣ ತನ್ನ ಮೂವರು ಸ್ನೇಹಿತರ ಜೊತೆ ಕೋಟೆ ಕೆರೆಯಲ್ಲಿ ಈಜು ಕಲಿಯಲು ಹೋಗಿದ್ದರು. ಕೆರೆಯಲ್ಲಿ ಊಳು ತುಂಬಿದ್ದ ಕಾರಣ ಬಾಲಕನ ಕಾಲು ಊಳಿನಲ್ಲಿ ಸಿಕ್ಕಿಕೊಂಡು ಬಾಲಕ ಮೇಲೆ ಸಾಧ್ಯವಾಗದೆ ಸಾವನ್ನಪ್ಪಿದ್ದಾನೆ.
undefined
ಕುಟುಂಬಸ್ಥರ ಆಕ್ರಂದನ: ಮೃತ ಬಾಲಕ ಶಶಾಂಕ್ ಜೊತೆಗಿದ್ದ ಇನ್ನುಳಿದ ಮೂವರು ಯುವಕರು ಅಪಾಯದಿಂದ ಪಾರಾಗಿದ್ದಾರೆ. ಮೃತ ಶಾಶಂಕ್ ತಾಯಿ ಸ್ಕೂಲ್ ಟೀಚರ್ ಆಗಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬಾಲಕನ ಮೃತ ದೇಹವನ್ನು ಕೆರೆಯಿಂದ ಮೇಲೆ ತೆಗೆದಿದ್ದಾರೆ.
ಬೈಕ್ ಸವಾರ ಸ್ಥಳದಲ್ಲಿ ಸಾವು: ಇನ್ನು ಚಿಕ್ಕಮಗಳೂರು ನಗರದ ಹೊರವಲಯದ ಮೂಗ್ತಿಹಳ್ಳಿ ಸಮೀಪ ಟ್ಯಾಂಕರ್ ಹಾಗೂ ಬೈಕ್ ಮುಖಾಂತರ ಡಿಕ್ಕಿ ಆದ ಪರಿಣಾಮ ಬೈಕ್ ಸವಾರ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಬೈಕ್ ಸವಾರ ನನ್ನ 26 ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ. ಬೈಕಿನ ಹಿಂದೆ ಕೂತಿದ್ದ ಯುವತಿಗೆ ಗಂಭೀರ ಗಾಯವಾಗಿತ್ತು ಆಕೆಯ ನಾಲಿಗೆ ಕಟ್ ಆಗಿದೆ ಎಂದು ತಿಳಿದು ಬಂದಿದೆ.
ಪಾರಂಪರಿಕ ಔಷಧ ಪದ್ಧತಿ-ಹೆಚ್ಚಿನ ಸಂಶೋಧನೆಗೆ ಉಪ ರಾಷ್ಟ್ರಪತಿ ಜಗದೀಪ್ ಧನಕರ ಕರೆ
ಮೃತ ಶಿವರಾಜ್ ಹಾಗು ಬೈಕಿನ ಹಿಂದೆ ಕೂತಿದ್ದ ಯುವತಿ ಲಾವಣ್ಯ ಇಬ್ಬರು ಕೂಡ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಂದೂರು ಗ್ರಾಮದವರು. ಇಲ್ಲಿಗೆ ಏಕೆ ಬಂದಿದ್ದರು, ಎಲ್ಲಿಗೆ ಹೋಗುತ್ತಿದ್ದರು ಎಂಬುದು ತಿಳಿದು ಬಂದಿಲ್ಲ. ಆದರೆ, ಗಾಯಾಳು ಲಾವಣ್ಯ ಚಿಕ್ಕಮಗಳೂರು ತಾಲೂಕಿನ ಸೂರನಹಳ್ಳಿ ಬಳಿ ಇರುವ ವಿದ್ಯಾರ್ಥಿ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದಳು ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.