ವೆಲ್ಡಿಂಗ್ ಶಾಪ್‌ನವರ ಮನೆ ಹಾಳು ಕೆಲ್ಸಕ್ಕೆ 8 ವರ್ಷದ ಯುವರಾಜ್ ಬಲಿ

By Suvarna News  |  First Published Jan 4, 2020, 9:02 PM IST

ವೆಲ್ಡಿಂಗ್ ಶಾಪ್ ಮಾಲೀಕರ ಕಾರ್ಯಕ್ಕೆ ಒಂದು ಅಮಾಯಕ ಮಗುವಿನ ಜೀವ ಹೋಗಿದೆ. ರಸ್ತೆಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಮಗುವಿನ ಮೇಲೆ ಕಬ್ಬಿಣದ ಗ್ರಿಲ್ ಬಿದ್ದಿದೆ.


ಶಿವಮೊಗ್ಗ, [ಜ.04]: ಕಬ್ಬಿಣದ ಗ್ರಿಲ್ ಬಿದ್ದು 8 ವರ್ಷದ ಮಗು ಮೃತಪಟ್ಟ ಘಟನೆ ಶನಿವಾರ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ಲಕ್ಷ್ಮೀ ಚಲನಚಿತ್ರ ಮಂದಿರದ ಎದುರಿನ ಹೊಸಮನೆ ಚಾನಲ್ ರಸ್ತೆಯಲ್ಲಿ ಆಟವಾಡುತ್ತಿರುವ ಬಾಲಕನ ಮೇಲೆ ದೊಡ್ಡದಾದ ಕಬ್ಬಿಣದ ಗ್ರಿಲ್ ಬಿದ್ದಿದೆ. ಪರಿಣಾಮ ಯುವರಾಜ್ (8 ) ಎಂಬ ಬಾಲಕ ಸಾವನ್ನಪ್ಪಿದ್ದಾನೆ.

Tap to resize

Latest Videos

 ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ಅಂಬಿಕ ಇದೀಗ ಪುತ್ರನನ್ನು ಕಳೆದುಕೊಂಡು ಕಂಗಾಲಾಗಿದ್ದಾಳೆ.  ರಸ್ತೆಯಲ್ಲೇ ವೆಲ್ಡಿಂಗ್ ಶಾಪ್ ಗಳ ಕೆಲಸಗಳು ನಡೆಯುವುದರಿಂದ ಯುವರಾಜ್ ನ ಮೇಲೆ ಕಬ್ಬಿಣದ ಗ್ರಿಲ್ ಬಿದ್ದಿದೆ ಎಂದು ತಿಳಿದುಬಂದಿದೆ.

 ಶಿವಮೊಗ್ಗದ ವಿನೋಬನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೆಲ್ಡಿಂಗ್ ಶಾಪ್ ನವರ ಮನೆ ಹಾಳು ಕೆಲಸಕ್ಕೆ ಇನ್ನು ಬಾಳಿ ಬದುಕಬೇಕಿದ್ದ ಪುಟ್ಟ ಬಾಲಕ ಬಲಿಯಾಗಿದ್ದು, ಈ ಸಾವಿಗೆ ಹೊಣೆ ಯಾರು..?

click me!