Vijayapura: ಅಣ್ಣನ ಹೆಂಡತಿ ಕೊಲೆಗೆ 25 ಲಕ್ಷಕ್ಕೆ ಸುಪಾರಿ ನೀಡಿದ BSF ಯೋಧ: ಐವರ ಬಂಧನ

By Govindaraj S  |  First Published Sep 2, 2022, 3:45 AM IST

ಅಣ್ಣನ ಹೆಂಡತಿಯ ಕೊಲೆಗೆ 25 ಲಕ್ಷಕ್ಕೆ ಬಿಎಸ್‌ಎಫ್ ಯೋಧ ಸುಪಾರಿ ನೀಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಆದರೆ ಸುಪಾರಿ ಹಣ ಸಿಗದೆ ಇದ್ದಾಗ ಹಂತಕರು ಪ್ಲಾನ್ ಬದಲಾಯಿಸಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. 


ವಿಜಯಪುರ (ಸೆ.02): ಅಣ್ಣನ ಹೆಂಡತಿಯ ಕೊಲೆಗೆ 25 ಲಕ್ಷಕ್ಕೆ ಬಿಎಸ್‌ಎಫ್ ಯೋಧ ಸುಪಾರಿ ನೀಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಆದರೆ ಸುಪಾರಿ ಹಣ ಸಿಗದೆ ಇದ್ದಾಗ ಹಂತಕರು ಪ್ಲಾನ್ ಬದಲಾಯಿಸಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಹೌದು! ವಿಜಯಪುರದಲ್ಲೊಂದು ಸಿನಿಮೀಯ ರೀತಿಯ ಕಿಡ್ನಾಫ್ ಸ್ಟೋರಿ ನಡೆದಿದ್ದು, ಅಣ್ಣನ ಹೆಂಡತಿ ಲಕ್ಷ್ಮೀ ಸೊನ್ನ ಹತ್ಯೆಗೆ 25 ಲಕ್ಷಕ್ಕೆ ಸುಪಾರಿ ನೀಡಿದ್ದ ಮೈದುನ ಪಿಎಸ್‌ಎಫ್ ಯೋಧ ರಮೇಶ ಸೊನ್ನ, ಅತ್ತಿಗೆ ಶವ ನೋಡಿಯೇ ಹಂತಕರಿಗೆ ಹಣ ನೀಡ್ತಿನಿ ಎಂದಿದ್ದ. ಆದರೆ ಕಿಡ್ನಾಫ್ ಆಂಡ್ ಸುಪಾರಿ ಮರ್ಡರ್ ಸ್ಟೋರಿ ಇದೀಗ ಪ್ಲಾಪ್ ಆಗಿ ಐವರು ಸುಪಾರಿ ಹಂತಕರು ತಗಲಾಕಿಕೊಂಡಿದ್ದಾರೆ.

ವಿಜಯಪುರ ನಗರದ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸಿನಿಮೀಯ ಸುಪಾರಿ ಕಥೆ ಸ್ಟೋರಿಯಲ್ಲಿ, ಸರ್ಕಾರಿ ನೌಕರನಾಗಿದ್ದ ಲಕ್ಷ್ಮೀ ಪತಿ 2008ರಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದ. ಅದೇ ಸರ್ಕಾರಿ ನೌಕರಿ ಲಕ್ಷ್ಮೀಗೆ ಸಿಕ್ಕಿತ್ತು, ಇದೆ ವಿಚಾರವಾಗಿ ಮೈದುನ ರಮೇಶ್ ಹಾಗೂ ಲಕ್ಷ್ಮಿ ನಡುವೆ ವೈಷಮ್ಯ ಬೆಳೆದಿತ್ತು. ಅತ್ತಿಗೆ ಲಕ್ಷ್ಮೀ ಮುಗಿಸಲು 25 ಲಕ್ಷ ರೂಪಾಯಿಗೆ ವಿಜಯಪುರ ನಗರದ ಶಿವಾಜಿ ಉಪ್ಪಾರ್, ಸಾಗರ್ ಜುಮ್ಮನಗೋಳ, ಆದರ್ಶ, ಆಕಾಶ್ ಎಂಬ ಹಂತಕರಿಗೆ ಬಿಎಸ್‌ಎಫ್ ಯೋಧ ರಮೇಶ್‌ ಸುಪಾರಿ ನೀಡಿದ್ದ. ಇತ್ತ ಹಂತಕರು ವಿಜಯಪುರ ನಗರದ ಗಾಂಧಿ ವೃತ್ತದಲ್ಲಿ ಆಟೋದಲ್ಲಿ ಲಕ್ಷ್ಮೀಯನ್ನ ಕಿಡ್ನಾಪ್ ಮಾಡಿ, ಭುರಣಾಪುರ ವಿಮಾನ ನಿಲ್ದಾಣ ಬಳಿ‌ ಕತ್ತು ಕತ್ತರಿಸಿ ಕೊಲೆ ಮಾಡಲು ಕರೆದೊಯ್ದಿದ್ದರು. 

Latest Videos

undefined

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಯುವತಿ ಅನುಮಾನಾಸ್ಪದ ಸಾವು!

ಈ ವೇಳೆ ಲಕ್ಷ್ಮಿ ಕೊಲೆ ಮಾಡಿ ಪೋಟೋ ವಾಟ್ಸ್ ಅಪ್ ಮಾಡಿದ್ರೆ ಮಾತ್ರ ಹಣ ಹಾಕ್ತೀನಿ ಎಂದು ಸುಪಾರಿ ಹಂತಕರಿಗೆ ರಮೇಶ್‌ ಹೇಳಿದ್ದ. ಹಾಗಾಗಿ ಹಂತಕರು ಅಡ್ವಾನ್ ಹಣ ನೀಡುವಂತೆ ಕೇಳಿದರು. ಇತ್ತ ಹಣ ಸಿಗದೆ ಕೊನೆಗೆ 5 ಲಕ್ಷ ಕೊಟ್ಟರೆ ಬಿಟ್ಟು ಕಳಿಸೋದಾಗಿ ಸ್ವತಃ ಲಕ್ಷ್ಮೀ ಬಳಿ ಹಂತಕರು ಡೀಲ್ ಕುದುರಿಸಿದ್ದರು. ಆಗ ಲಕ್ಷ್ಮೀ 5 ಲಕ್ಷ ಕೊಡಿಸೋದಾಗಿ ಹೇಳಿ ಹಂತಕರ ಮೊಬೈಲ್‌ನಿಂದಲೇ ಮನೆಯವರಿಗೆ ಕರೆ ಮಾಡಿದ್ದರು. ಅನಂತರ ವಿಷಯವನ್ನ ಪೊಲೀಸರಿಗೆ ತಿಳಿಸಿ ಹಂತಕರನ್ನ ಲಕ್ಷ್ಮಿ ಮನೆಯವರು ಅರೆಸ್ಟ್ ಮಾಡಿಸಿದರು. ಸದ್ಯ  ಮಹಿಳಾ ಠಾಣೆ ಅಧಿಕಾರಿಗಳಿಂದ ಯಶಸ್ವಿ ಕಾರ್ಯಾಚರಣೆ ಮಾಡಿ ಐವರು ಹಂತಕರ ಬಂಧಿಸಿ, ಸುಪಾರಿ ನೀಡಿದ ಮೈದುನ ಬಿಎಸ್‌ಎಫ್ ಯೋಧನ ಮೇಲು ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಗಂಡನ ಹತ್ಯೆಗೆ ಸುಪಾರಿ, ಪ್ರಿಯಕರ ಆತ್ಮಹತ್ಯೆ: ಮನೆಗೆ ಬರುತ್ತಿದ್ದ ಪತಿಯ ಸ್ನೇಹಿತನ ಮೇಲೆ ಆಕೆಗೆ ಪ್ರೇಮವಾಯಿತು. ತನ್ನ ಪ್ರೀತಿಗೆ ಅಡ್ಡವಾಗಿದ್ದ ಪತಿಯನ್ನು ಕೊಲ್ಲಲು ಪ್ರಿಯಕರನ ಜೊತೆ ಸೇರಿ 1.5 ಲಕ್ಷ ರು.ಗಳಿಗೆ ಸುಪಾರಿ ಕೊಟ್ಟಳು. ಸುಪಾರಿ ಪಡೆದ ಹಂತಕರು ಹತ್ಯೆ ಮಾಡದೆ ಬಟ್ಟೆಮೇಲೆ ಟೊಮೊಟಾ ಸಾಸ್‌ ಹಾಕಿ ಹತ್ಯೆಯಾಗಿದೆ ಎಂದು ಪೋಟೋ ಕಳುಹಿಸಿದರು. ಪೋಟೋ ನೋಡಿದ ಪ್ರಿಯಕರ, ಪೊಲೀಸರ ಭೀತಿಯಿಂದ ಆತ್ಮಹತ್ಯೆಗೆ ಶರಣಾದ. ಬದುಕುಳಿದ ಪತಿಗೆ ತನ್ನ ಪತ್ನಿ ಲಂಪಟನ ಗೊತ್ತಾಯಿತು. ಕೊನೆಗೆ ಇತ್ತ ಪ್ರಿಯಕರನೂ ಇಲ್ಲ ಪತಿಯೂ ಇಲ್ಲದೆ ತನ್ನ ತಾಯಿ ಹಾಗೂ ಸುಪಾರಿ ಹಂತಕರ ಜೊತೆ ಮಹಿಳೆ ಪರಪ್ಪನ ಅಗ್ರಹಾರ ಸೇರಿದ್ದಾಳೆ..!

Mangaluru: ಸುಳ್ಯದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ: 9 ವಿದ್ಯಾರ್ಥಿಗಳ ಬಂಧನ

ಇದೂ ಯಾವುದೋ ಕ್ರೈಂ ಥ್ರಿಲ್ಲರ್‌ ಚಲನಚಿತ್ರ ಅಲ್ಲ. ನಗರದ ಪೀಣ್ಯದಲ್ಲಿ ನಡೆದ ಘಟನೆ. ತುಮಕೂರು ರಸ್ತೆ ದೊಡ್ಡಬಿದರಕಲ್ಲು ನಿವಾಸಿ ಅನುಪಲ್ಲವಿ, ಆಕೆಯ ತಾಯಿ ಅಮ್ಮಾಜಮ್ಮ, ಸುಪಾರಿ ಹಂತಕರಾದ ಹರೀಶ್‌, ನಾಗರಾಜ್‌ ಹಾಗೂ ಮುಗಿಲನ್‌ ಬಂಧಿತರಾಗಿದ್ದು, ಕೆಲ ದಿನಗಳ ಹಿಂದೆ ಬಾಗಲಕುಂಟೆಯ ಅನುಪಲ್ಲವಿ ಪ್ರಿಯಕರ ಹಿಮವಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರೀತಿಗೆ ಅಡ್ಡವಾಗಿದ್ದ ಎಂಬ ಕಾರಣಕ್ಕೆ ತಮ್ಮ ಪತಿ ನವೀನ್‌ ಕುಮಾರ್‌ ಹತ್ಯೆಗೆ ಅನುಪಲ್ಲವಿ ಸುಪಾರಿ ಕೊಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

click me!