ವಡಮಲ್‌ಪೇಟೆ ಘಾಟ್ ರಸ್ತೆಯ ಬಳಿ ಎಸ್.ವಿ ಪುರಂ ಟೋಲ್ ಪ್ಲಾಜಾ ದಾಟಿದ ಬಳಿಕ ಯು-ಟರ್ನ್ ತಪ್ಪಿಸಲು ತಪ್ಪು ದಿಕ್ಕಿನಲ್ಲಿ ಸಾಗಿದ ವಾಹನ ಚಾಲಕ, ಎದುರಿನಿಂದ ಬರುತ್ತಿದ್ದ ಹಾಲಿನ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದಾರೆ.
ತಿರುಪತಿ (ಜೂನ್ 12, 2023): ತಿರುಪತಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ ಸಮಭವಿಸಿದೆ. ಈ ವೇಳೆ ಐವರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ. ತಿರುಪತಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಗುಂಪೊಂದು ಪುತ್ತೂರು ಸಮೀಪದ ವಡಮಲ್ ಪೇಟೆಯಲ್ಲಿರುವ ಅಂಜೇರಮ್ಮನ ಜಾನಪದ ದೇವಸ್ಥಾನಕ್ಕೆ ಭೇಟಿ ನೀಡಲು ಪ್ರಯಾಣಿಕ ವಾಹನವನ್ನು ಬಾಡಿಗೆಗೆ ಪಡೆದುಕೊಂಡಿತ್ತು ಎಂದು ತಿಳಿದುಬಂದಿದೆ.
ವಡಮಲ್‌ಪೇಟೆ ಘಾಟ್ ರಸ್ತೆಯ ಬಳಿ ಎಸ್.ವಿ ಪುರಂ ಟೋಲ್ ಪ್ಲಾಜಾ ದಾಟಿದ ಬಳಿಕ ಯು-ಟರ್ನ್ ತಪ್ಪಿಸಲು ತಪ್ಪು ದಿಕ್ಕಿನಲ್ಲಿ ಸಾಗಿದ ವಾಹನ ಚಾಲಕ, ಎದುರಿನಿಂದ ಬರುತ್ತಿದ್ದ ಹಾಲಿನ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಹಲವರನ್ನು ಪೊಲೀಸರು ತಕ್ಷಣ ತಿರುಪತಿಯ ಎಸ್‌ವಿಆರ್‌ಆರ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ: Breaking: ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು: ನೂರಾರು ಜನರನ್ನು ಬಲಿ ತೆಗೆದುಕೊಂಡ 3 ದಿನಗಳಲ್ಲಿ ಮತ್ತೊಂದು ಅವಘಡ
ಈ ಅಪಘಾತದಲ್ಲಿ ಗಿರಿಜಮ್ಮ ಮತ್ತು ರೇವಂತ್ ಎಂಬ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟರೆ, ರೇಖಾ, ಅಜಯ್ ಕುಮಾರ್ ಮತ್ತು ಹಾಲಿನ ವ್ಯಾನ್ ಚಾಲಕ ಸುಬ್ರಮಣ್ಯಂ ಸೇರಿದಂತೆ ಮೂವರು ನಂತರ ತಿರುಪತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ ಎಂದು ಪುತ್ತೂರು ಡಿಎಸ್ಪಿ ಕೆ. ಶ್ರೀನಿವಾಸ್ ಸುದ್ದಿಗಾರರಿಗೆ ತಿಳಿಸಿದರು.
ಸ್ಥಳೀಯ ದೇಗುಲಕ್ಕೆ ಪ್ರಯಾಣದ ದೂರವನ್ನು ಕಡಿಮೆ ಮಾಡುವ ಸಲುವಾಗಿ ಯು-ಟರ್ನ್ ತಪ್ಪಿಸಲು ವಾಹನವನ್ನು ರಾಂಗ್ ರೂಟ್‌ನಲ್ಲಿ ತೆಗೆದುಕೊಂಡ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಡಿಎಸ್ಪಿ ಶ್ರೀನಿವಾಸ್ ಹೇಳಿದ್ದಾರೆ.
ಇನ್ನು, ಈ ಸಂಬಂಧ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮೋದಿ ಹಿಂಬದಿ ಮಿರರ್ ಮಾತ್ರ ನೋಡೋದ್ರಿಂದ ಕಾರು ಅಪಘಾತವಾಗಿದೆ: ಒಡಿಶಾ ರೈಲು ದುರಂತದ ಬಗ್ಗೆ ರಾಹುಲ್ ಗಾಂಧಿ ವ್ಯಾಖ್ಯಾನ..
ಚಿತ್ರದುರ್ಗದಲ್ಲೂ ಅಪಘಾತ: ಮೂವರ ಸಾವು
ಇನ್ನೊಂದೆಡೆ, ಚಿತ್ರದುರ್ಗ ತಾಲೂಕಿನ ವಿಜಯಪುರ ಗೊಲ್ಲರಹಟ್ಟಿ ಗ್ರಾಮದ ಬಳಿಯೂ ಅಪಘಾತವಾಗಿದ್ದು, ಮೂವರು ಸಾವಿಗೀಡಾಗಿದ್ದಾರೆ. ವಿಜಯಪುರ ಗೊಲ್ಲರಹಟ್ಟಿ ಬಳಿ ಲಾರಿಗೆ (ಟವೆರಾ)ಕಾರು ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಬೆಂಗಳೂರಿನ ಎಚ್.ಎಸ್. ಆರ್. ಲೇಔಟ್ ನಿವಾಸಿಗಳು ಗೋವಾದಿಂದ ಬೆಂಗಳೂರಿಗೆ ಹಿಂದಿರುಗುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಈ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ, ಜಿಲ್ಲಾಸ್ಪತ್ರೆಯಲ್ಲಿ 3 ತಿಂಗಳ ಕಂದಮ್ಮ ಫಾತಿಮಾ ಬಲಿಯಾಗಿದೆ. ಈ ಅಪಘಾತದಲ್ಲಿ ಮೃತಪಟ್ಟವರನ್ನು 3 ತಿಂಗಳ ಮಗು ಫಾತಿಮಾ, ತಾಯಿ ತಬ್ಸೂಮ್(28), ಸಂಬಂಧಿ ಜಾಕೀರ್ ಅಹ್ಮದ್ (60) ಎಂದು ಗುರುತಿಸಲಾಗಿದೆ. ಇನ್ನುಳಿದ ಐವರು ಸಹ ಈ ಅಪಘಾತದಲ್ಲಿ ಗಾಯಕ್ಕೊಳಗಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ವಿಧ್ವಂಸಕ ಕೃತ್ಯವೋ? ಅಪಘಾತವೋ?: ಒಡಿಶಾ ರೈಲು ದುರಂತದ ಹಿಂದಿನ ಸತ್ಯವೇನು..