ಬೆಂಗಳೂರಲ್ಲಿ ಸರಗಳ್ಳತನ: ಮಿಸ್ಟರ್ ಆಂಧ್ರಪ್ರದೇಶ ಕಾಂಪಿಟೇಶನ್‌ನಲ್ಲಿ 3ನೇ ಸ್ಥಾನ ಪಡೆದವ ಅರೆಸ್ಟ್‌

By Girish Goudar  |  First Published Apr 25, 2023, 10:40 AM IST

ಐಷಾರಾಮಿ ಜೀವನ ನಡೆಸಲು ಸರಗಳ್ಳತನಕ್ಕೆ ಇಳಿದಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನ ಬಂಧಿಸಿದ ಗಿರಿನಗರ ಪೊಲೀಸರು. 


ಬೆಂಗಳೂರು(ಏ.25):  ಮಿಸ್ಟರ್ ಆಂಧ್ರಪ್ರದೇಶ ಕಾಂಪಿಟೇಶನ್‌ನಲ್ಲಿ ಮೂರನೇ ಸ್ಥಾನ ಪಡೆದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹೌದು, ಐಷಾರಾಮಿ ಜೀವನ ನಡೆಸಲು ಸರಗಳ್ಳತನಕ್ಕೆ ಇಳಿದಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. 

ಆಂಧ್ರ ಮೂಲದ ಸೈಯದ್ ಬಾಷ, ಶೇಖ್ ಅಯೂಬ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಸೈಯದ್ ಬಾಷಾ ದೇಹದಾರ್ಡ್ಯ ಪಟುವಾಗಿದ್ದ, ನಂತರ ಶೇಖ್ ಅಯೂಬ್ ಜೊತೆ ಸೇರಿ ಕಳ್ಳತನದ ಹಾದಿ ಹಿಡಿದಿದ್ದ‌ ಅಂತ ಪೊಲಿಸರ ತನಿಖೆಯಿಂದ ತಿಳಿದು ಬಂದಿದೆ. 

Tap to resize

Latest Videos

ಮಹಿಳೆಗೆ ಅಶ್ಲೀಲ ವೀಡಿಯೋ ತೋರಿಸಿ ಅನೈತಿಕ ಸಂಬಂಧಕ್ಕೆ ಒತ್ತಾಯ: ರೂಮಿಗೆ ಕರೆಸಿ ಕೊಲೆ

ಬಂಧಿತರ ಮೇಲೆ ಆಂಧ್ರದಲ್ಲಿ 32 ಪ್ರಕರಣಗಳು ದಾಖಲಾಗಿವೆ. ಆಂಧ್ರ ಪೊಲೀಸರಿಂದ ಅರೆಸ್ಟ್ ಆಗಿ ಕಂಬಿ ಎಣಿಸಿ ಬೇಲ್ ಮೇಲೆ ಹೊರ ಬಂದು ಬೆಂಗಳೂರಿನಲ್ಲಿ ಕಳ್ಳತನದ ಹಾದಿ ಹಿಡಿದಿದ್ದರು.  ಐಷಾರಾಮಿ ಜೀವನ ನಡೆಸಲು ಈ ಖದೀಮರು ಸರಗಳ್ಳತನಕ್ಕೆ ಇಳಿದಿದ್ದರು. ಬೈಕಲ್ಲಿ ಬಂದು ಸರ ಎಗರಿಸಿ ಪರಾರಿಯಾಗುತ್ತಿದ್ದರು. ಕಳೆದ ತಿಂಗಳು ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಚಿನ್ನದ ಸರ ಎಗರಿಸಿದ್ದರು. ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಗಳ್ಳತನ‌ ಮಾಡಿದ್ದರು. 

ಸದ್ಯ ಆರೋಪಿಗಳಿಂದ 6 ಲಕ್ಷ ಮೌಲ್ಯದ ಚಿನ್ನದ ಸರಗಳು, ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ. ಗಿರಿನಗರ ಠಾಣೆಯ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. 

click me!