
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ನ.06): ಆಧುನಿಕ ಪ್ರಪಂಚದಲ್ಲಿದ್ದರೂ ಸಹ ಈಗಲೂ ಗಂಡು ಹೆಣ್ಣು ಅನ್ನೋ ಲಿಂಗ ತಾರತಮ್ಯ ದೂರವಾಗಿಲ್ಲ ಅನ್ನೋದಕ್ಕೆ ಕೋಲಾರ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಉತ್ತಮ ಉದಾಹರಣೆ. ಹೌದು, ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ ಮನನೊಂದು ಇಲ್ಲೊಬ್ಬ ತಂದೆ ಮನೆಯ ಫ್ಯಾನಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಲೋಕೇಶ್(34) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ಲೋಕೇಶ್ ದಂಪತಿಗೆ ಈ ಹಿಂದೆಯೇ ಮೂವರು ಹೆಣ್ಣು ಮಕ್ಕಳಿದ್ದರು, ಗಂಡು ಮಗುವಿನ ಆಸೆಗೆ ನಾಲ್ಕನೇ ಮಗು ಮಾಡಿಕೊಂಡಿದ್ದಾನೆ. ಆದ್ರೆ ಅವನ ನಿರೀಕ್ಷೆ ಫಲಿಸದೆ ನಾಲ್ಕನೇ ಮಗುವೂ ಸಹ ಹೆಣ್ಣು ಆಗಿರುವ ಕಾರಣ ಮನನೊಂದ ಲೋಕೇಶ್ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಯಲ್ಲಿ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪತ್ನಿ ಸಾವು... ಐದು ವರ್ಷದ ಕಂದನನ್ನು ಕೊಂದು ನೇಣಿಗೆ ಶರಣಾದ ತಂದೆ
ಇನ್ನು ಮೃತ ಲೋಕೇಶ್ ಈ ಹಿಂದೆ ಮೂರನೇ ಮಗು ಜನನವಾದಾಗಲೇ ಆತ್ಮಹತ್ಯೆಗೆ ಯತ್ನ ಮಾಡಿದ್ದನಂತೆ. ಆದ್ರೆ ಅದೃಷ್ಟವಶಾತ್ ಮನೆಯವರಿಗೆ ವಿಚಾರ ತಿಳಿದು ಲೋಕೇಶ್‌ನನ್ನು ಬದುಕಿಸಿದ್ದಾರೆ. ಆದ್ರೆ ಈ ಬಾರಿ ಪತ್ನಿ ಹಾಗೂ ತನ್ನ ನಾಲ್ಕು ಜನ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೆ ನೇಣಿಗೆ ಶರಣಾಗಿ ಕುಟುಂಬಕ್ಕೆ ಆಘಾತ ನೀಡಿದ್ದಾನೆ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ