
ಬೆಂಗಳೂರು(ಜೂ.14): ಮನೆಯಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಕೋಪಗೊಂಡು ತನ್ನ ಅಣ್ಣನಿಗೆ ಚಾಕುವಿನಿಂದ ಇರಿದು ತಮ್ಮನೇ ಕೊಂದಿರುವ ಘಟನೆ ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ದೊಡ್ಡಗುಂಟೆ ನಿವಾಸಿ ಕಾರ್ತಿಕ್ (30) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿದ್ದ ಮೃತನ ಸೋದರ ವಿಜಯ್‌ನನ್ನು ಪುಲಕೇಶಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಅತ್ತಿಗೆ ಕರೆ ಮೇರೆಗೆ ಅಣ್ಣನ ಮನೆಗೆ ವಿಜಯ್ ಹೋಗಿದ್ದ. ಆಗ ಸೋದರರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಾಡಿನ ವಿಷ್ಯಕ್ಕೆ ಶುರುವಾದ ಗಲಾಟೆ: ದುಡ್ಡು ಹಾಕಿ ಸಮಾರಂಭ ಆಯೋಜಿಸಿದ್ದವನೇ ಕೊಲೆಯಾದ ..!
ದೊಡ್ಡಗುಂಟೆಯಲ್ಲಿ ತನ್ನ ಪತ್ನಿ ಸಂಧ್ಯಾ ಜತೆ ಕಾರ್ತಿಕ್ ನೆಲೆಸಿದ್ದರೆ, ವಿಜಯ್ ಪ್ರತ್ಯೇಕವಾಗಿ ವಾಸವಾಗಿದ್ದ. ಸಣ್ಣಪುಟ್ಟಕೆಲಸ ಮಾಡಿಕೊಂಡು ಸೋದರರು ಜೀವನ ಸಾಗಿಸುತ್ತಿದ್ದರು. ಆದರೆ ವಿಪರೀತ ಮದ್ಯ ವ್ಯಸನಿಯಾದ ಕಾರ್ತಿಕ್, ಪ್ರತಿ ಮದ್ಯ ಸೇವಿಸಿ ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಈ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪ ಬೆಳೆದಿತ್ತು. ಪತಿ ಕಾಟ ಸಹಿಸಲಾರದೆ ಮೈದುನ ವಿಜಯ್‌ಗೆ ಕಾಲ್ ಮಾಡಿ ಸಂಧ್ಯಾ ಗೋಳು ತೋಡಿಕೊಂಡಿದ್ದಳು.
ಮನೆಗೆ ಬಂದು ನಿಮ್ಮ ಅಣ್ಣನಿಗೆ ಬುದ್ಧಿ ಮಾತು ಹೇಳುವಂತೆ ಆಕೆ ಮನವಿ ಮಾಡಿದ್ದಳು. ಅಂತೆಯೇ ಮಂಗಳವಾರ ಮಧ್ಯಾಹ್ನ ತನ್ನ ಅಣ್ಣನ ಮನೆಗೆ ವಿಜಯ್ ತೆರಳಿದ್ದ. ಆಗ ಸೋದರರ ಮಧ್ಯೆ ಜಗಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ