ಕುಡಿದ ಮತ್ತಲ್ಲಿ ಮೂವರ ಮೇಲೆ ಹಲ್ಲೆ; ಬುದ್ಧಿ ಹೇಳಿದ್ದಕ್ಕೆ ಚಾಕು ಇರಿತ..!

By Ravi Janekal  |  First Published Dec 3, 2022, 9:51 AM IST

ಕುಡಿದ ಮತ್ತಲ್ಲಿ ಐವರ ಪುಂಡರ ಗುಂಪು ಚೂರಿಯಿಂದ ಇರಿದು ಹಲ್ಲೆ ನಡೆಸಿ ಮೂವರನ್ನು ಗಂಭೀರ ಗಾಯಗೊಳಿಸಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದ್ದು. ಪುಂಡರ ಹಾವಳಿಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಸುತ್ತಮುತ್ತ ಮದ್ಯದಂಗಡಿಗಳು ವಿಪರೀತವಾಗಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ. 


ಗದಗ (ಡಿ.3) : ನಗರದ ಜೋಡ ಮಾರುತಿ ದೇವಸ್ಥಾನದ ಬಳಿ ಯುವಕರ ಗುಂಪು ಕುಡಿದ ಮತ್ತಿನಲ್ಲಿ ಮೂವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಊಟ ಮಾಡಿ‌ ರಸ್ತೆ ಪಕ್ಕನಿಂತಿದ್ದ ವಸಂತ ಬಾಕಳೆ, ಗೋಪಾಲ ಖೋಡೆ, ಮಾಧು ಸಾ ಬದಿ ಎಂಬುವವರಿಗೆ ಐವರು ಪುಂಡರು ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂವರು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ರಾತ್ರಿ ರಂಗನವಾಡಿ ಬಡಾವಣೆಯ ಸಾದೀಕ್ ಅಲ್ಲೊಳ್ಳಿ, ವಿನೇಶ್ ಶಿರಹಟ್ಟಿ, ಸೆಟಲ್ಮೆಂಟ್ ಏರಿಯಾದ ಶಿವಾನಂದ ಸೇರಿದಂತೆ ಐವರು ಕುಡಿದು ಬೈಕ್ ಮೇಲೆ ಬರುತ್ತಿದ್ರು. ಗದ್ದಲ ಗಲಾಟೆ ಮಾಡ್ತಿದ್ದ ಪುಂಡರಿಗೆ ವಸಂತ, ಗೋಪಾಲ್ ಬುದ್ಧಿ ಹೇಳೋದಕ್ಕೆ ಮುಂದಾಗಿದ್ರಂತೆ. ಇದ್ರಿಂದ ಕೋಪಗೊಂಡಿರುವ ಪುಂಡರು ಏಕಾಏಕಿ ಬೈಕ್ ನಿಲ್ಲಿಸಿ ದಾಳಿ ಮಾಡಿದ್ದಾರೆ. ಈ ವೇಳೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.. ವಸಂತ, ಗೋಪಾ, ಮಾಧು ಅವರಿಗೆ ಭುಜ, ಬೆನ್ನು ಎದೆ ಭಾಗಕ್ಕೆ ಚಾಕು‌ ಇರಿತದಿಂದ ಗಂಭೀರ ಗಾಯಗೊಂಡಿದ್ದಾರೆ. 

Tap to resize

Latest Videos

undefined

ಬೈಕ್ ತಾಗಿದ್ದಕ್ಕೆ ಹಿಂದೂ ಯುವಕರಿಬ್ಬರಿಗೆ ಹಲ್ಲೆ

ರಾತ್ರಿ ಕುಡಿದಿದ್ದ ಪುಂಡರ ಗುಂಪು, ಮುಳಗುಂದ ನಾಕಾ ಬಳಿಯೇ ಗಲಾಟೆ ಮಾಡಿಕೊಂಡು ಬಂದಿದ್ದಾರೆ. ಮಾರುತಿ ಮಂದಿರದ ಬಳಿ ಬರ್ತಿದ್ದಂತೆ ಮತ್ತೆ ಗಲಾಟೆ ಮಾಡಿಕೊಂಡು ಹಲ್ಲೆ ನಡೆಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಶಹರ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

click me!