ಕಣಬರ್ಗಿಯ ಗೋಕಾಕ ರಸ್ತೆಯ ನಿವಾಸಿ ಸಿದ್ದರಾಯ ಅಡಿವೆಪ್ಪ ಶಿಗೀಹಳ್ಳಿ ಆತ್ಮಹತ್ಯೆಗೆ ಶರಣಾದ ಯುವಕ. ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು, ಭಾನುವಾರ ರಾತ್ರಿ ಪಾರ್ಟಿ ಮಾಡಲೆಂದು ಮನೆಯಲ್ಲಿ ₹10000 ಹಣ ಕೇಳಿದ್ದಾನೆ. ರೈತ ಕುಟುಂಬವಾಗಿದ್ದರಿಂದ ಅಷ್ಟೊಂದು ಹಣ ಕೊಡಲು ಆಗುವುದಿಲ್ಲ ಎಂದು ಮನೆಯವರು ಆತನಿಗೆ ತಿಳಿಸಿದ್ದಾರೆ. ಇಷ್ಟಕ್ಕೇ ಮನನೊಂದ ಆತ ನೇಣಿಗೆ ಶರಣಾಗಿದ್ದಾನೆ.
ಬೆಳಗಾವಿ(ಜ.02): ಹೊಸ ವರ್ಷದ ಹಿನ್ನೆಲೆಯಲ್ಲಿ ಪಾರ್ಟಿ ಮಾಡಲು ಮನೆಯಲ್ಲಿ ಹಣ ನೀಡಲು ನಿರಾಕರಿಸಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಕಣಬರ್ಗಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಕಣಬರ್ಗಿಯ ಗೋಕಾಕ ರಸ್ತೆಯ ನಿವಾಸಿ ಸಿದ್ದರಾಯ ಅಡಿವೆಪ್ಪ ಶಿಗೀಹಳ್ಳಿ (25) ಆತ್ಮಹತ್ಯೆಗೆ ಶರಣಾದ ಯುವಕ. ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು, ಭಾನುವಾರ ರಾತ್ರಿ ಪಾರ್ಟಿ ಮಾಡಲೆಂದು ಮನೆಯಲ್ಲಿ ₹10000 ಹಣ ಕೇಳಿದ್ದಾನೆ. ರೈತ ಕುಟುಂಬವಾಗಿದ್ದರಿಂದ ಅಷ್ಟೊಂದು ಹಣ ಕೊಡಲು ಆಗುವುದಿಲ್ಲ ಎಂದು ಮನೆಯವರು ಆತನಿಗೆ ತಿಳಿಸಿದ್ದಾರೆ. ಇಷ್ಟಕ್ಕೇ ಮನನೊಂದ ಆತ ನೇಣಿಗೆ ಶರಣಾಗಿದ್ದಾನೆ.
ಹಾಸನ: ಹೃದಯ ವಿದ್ರಾವಕ ಘಟನೆ; ಮಕ್ಕಳಿಗೆ ವಿಷವುಣಿಸಿ ತಾಯಿನೂ ಆತ್ಮಹತ್ಯೆ!
ಜಮೀನಿಗೆ ಹೋಗಿ ಬರುವುದಾಗಿ ಹೇಳಿ ತರಾತುರಿಯಲ್ಲಿ ತೆರಳಿದ್ದಾನೆ. ಈತನ ವ್ಯತಿರಿಕ್ತ ನಡೆಯಿಂದ ಅನುಮಾನಗೊಂಡ ಕುಟುಂಬಸ್ಥರೂ ಹೊಲಕ್ಕೆ ತೆರಳಿದ್ದಾರೆ. ಅಷ್ಟರಲ್ಲಾಗಲೇ ಹೊಲದಲ್ಲೇ ಇದ್ದ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದ ಎನ್ನಲಾಗಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.