ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ದಲಿತ ಬಾಲಕಿಯರ ಶವ ಪತ್ತೆಯಾಗಿದೆ. ಇವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶದ ಲಖೀಂಪುರ ಖೇರಿ (Lakhimpur Kheri) ಜಿಲ್ಲೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆಯಾಗಿದೆ. ಈ ಇಬ್ಬರು ದಲಿತ (Schedule Caste) ಬಾಲಕಿಯರಿಗೆ ಸುಮಾರು 15 ರಿಂದ 17 ವರ್ಷವಾಗಿದೆ ಎಂದು ತಿಳಿದುಬಂದಿದ್ದು, ನಿಘಾಸನ್ (Nighasan) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದೆ. ಇನ್ನು, ಈ ಬಾಲಕಿಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಈ ಘಟನೆ ಸಂಬಂಧ 6 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು, ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಗ್ರಾಮಸ್ಥರು ಸಹ ಗ್ರಾಮದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ನಿಘಾಸನ್ ಕ್ರಾಸಿಂಗ್‌ನಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು.
ಇನ್ನು, ಲಖನೌ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್ (ಐಜಿ) ಲಕ್ಕ್ಷ್ಮೀ ಸಿಂಗ್ ಮತ್ತು ಲಖಿಂಪುರ ಖೇರಿ ಪೊಲೀಸ್ ವರಿಷ್ಠಾಧಿಕಾರಿ (Superintendent of Police) (ಎಸ್‌ಪಿ) ಸಂಜೀವ್ ಸುಮನ್ ಅವರು ಬುಧವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಪೊಲೀಸರು ಶೀಘ್ರವಾಗಿ ಪ್ರಕರಣವನ್ನು ಬಗೆಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಗ್ರಾಮಸ್ಥರು ತಮ್ಮ ರಸ್ತೆ ತಡೆಯನ್ನು ಕೈಬಿಟ್ಟು ಮರಣೋತ್ತರ ಪರೀಕ್ಷೆಗೆ ಸಹಕರಿಸುವಂತೆ ಒತ್ತಾಯಿಸಿದರು. ಇಬ್ಬರು ಬಾಲಕಿಯರ ಶವಗಳು ಸ್ಕಾರ್ಫ್‌ನೊಂದಿಗೆ ಕಬ್ಬಿನ ಗದ್ದೆಯಲ್ಲಿ ತಮೋಲಿಯಾಪುರವಾ ಗ್ರಾಮದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Crime News: ಪ್ಲಂಬರ್‌ನಿಂದ ಅತ್ಯಾಚಾರ: ಮಗುವಿಗೆ ಜನ್ಮವಿತ್ತ ಅಪ್ರಾಪ್ತೆ
Uttar Pradesh | Dead bodies of two girls were found hanging from a tree in a field outside a village in Lakhimpur Kheri. No injuries were found on the bodies. Other things to be ascertained after post-mortem. We'll try to expedite the probe: Laxmi Singh, IG, Lucknow Range (14.09) pic.twitter.com/Uj9O5m9ldU
— ANI UP/Uttarakhand (@ANINewsUP)ಬಾಲಕಿಯರ ತಾಯಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ತನ್ನ ಹೆಣ್ಣು ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಇಬ್ಬರು ಸಹೋದರಿಯರು ಮೇವು ಕಡಿಯುತ್ತಿದ್ದಾಗ ಅಕ್ಕಪಕ್ಕದ ಗ್ರಾಮದ 3 ಯುವಕರು ಇಬ್ಬರು ಬಾಲಕಿಯರನ್ನು ಗುಡಿಸಲಿನ ಬಳಿಯಿಂದ ಅಪಹರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. "ನಾನು ಗುಡಿಸಲಿನೊಳಗೆ ಸ್ನಾನ ಮಾಡುತ್ತಿದ್ದೆ, ಆಗ ಪಕ್ಕದ ಹಳ್ಳಿಯ ಮೂವರು ಯುವಕರು ಆಗಮಿಸಿದರು, ಒಬ್ಬರು ಹಳದಿ ಟಿ-ಶರ್ಟ್, ಇನ್ನೊಬ್ಬರು ಬಿಳಿ ಮತ್ತು ಮೂರನೆಯವರು ನೀಲಿ ಟಿ-ಶರ್ಟ್ ಧರಿಸಿದ್ದರು’’ ಎಂದೂ ಹೇಳಿದರು.
ಈ ಘಟನೆಯು 2014 ರಲ್ಲಿ ಹಳ್ಳಿಯೊಂದರಲ್ಲಿ ಇಬ್ಬರು ದಲಿತ ಸಹೋದರಿಯರ ಮೃತದೇಹಗಳು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬದೌನ್ ಘಟನೆಯ ಕಠೋರ ಜ್ಞಾಪನೆಯಾಗಿದೆ. ಆ ವೇಳೆ, ಇಬ್ಬರು ಹದಿಹರೆಯದ ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಆರೋಪಗಳನ್ನು ಕೇಂದ್ರೀಯ ತನಿಖಾ ದಳವು ತನಿಖೆ ನಡೆಸಿತ್ತು. ಇನ್ನೊಂದೆಡೆ, ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯಲ್ಲಿ ಈ ಹಿಂದೆಯೂ ಇದೇ ರೀತಿಯ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದಿವೆ. ಆಗಸ್ಟ್ 14 ಮತ್ತು ಸೆಪ್ಟೆಂಬರ್ 3, 2020 ರ ನಡುವೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ.
ಜೂನ್ 2011 ರಲ್ಲಿ, ಜಿಲ್ಲೆಯ ನಿಘಾಸನ್ ಪೊಲೀಸ್ ಠಾಣೆಯ ಕಾಂಪೌಂಡ್‌ನಲ್ಲಿ ಹದಿಹರೆಯದ ಹುಡುಗಿಯ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಂತರ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ 11 ಪೊಲೀಸರನ್ನು ಅಮಾನತುಗೊಳಿಸಲಾಯಿತು. ನಂತರ, ಫೆಬ್ರವರಿ 28, 2020 ರಂದು ಸಿಬಿಐ ನ್ಯಾಯಾಲಯವು 14 ವರ್ಷದ ಬಾಲಕಿಯನ್ನು ಕೊಂದು ಆತ್ಮಹತ್ಯೆ ಪ್ರಕರಣವೆಂದು ತೋರಿಸಲು ಆಕೆಯ ದೇಹವನ್ನು ನೇಣು ಹಾಕಿದ್ದಕ್ಕಾಗಿ ಕಾನ್‌ಸ್ಟೆಬಲ್ ಅತೀಕ್ ಅಹ್ಮದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತು. ಘಟನೆಯ ಸಮಯದಲ್ಲಿ ನಿಘಾಸನ್‌ನ ವೃತ್ತ ಅಧಿಕಾರಿಯಾಗಿ ನಿಯೋಜಿಸಲ್ಪಟ್ಟ ನಿವೃತ್ತ ಉಪ ಎಸ್‌ಪಿ ಇನಾಯತ್-ಉಲ್ಲಾ ಖಾನ್‌ಗೆ ನ್ಯಾಯಾಲಯವು 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ನಿವೃತ್ತ ಡೆಪ್ಯುಟಿ ಎಸ್ಪಿ ಅಪರಾಧಕ್ಕೆ ಸಂಬಂಧಿಸಿದ ಸಾಕ್ಷ್ಯವನ್ನು ಮರೆಮಾಚುವ ಮತ್ತು ಕಾನ್‌ಸ್ಟೆಬಲ್‌ಗೆ ರಕ್ಷಣೆ ನೀಡಿದ ಆರೋಪ ಸಾಬೀತಾಗಿತ್ತು.
Bengaluru Crime: ಮಗನನ್ನು ಕೊಂದು ತಾಯಿಯೂ ಆತ್ಮಹತ್ಯೆ, ಕಾರಣ ನಿಗೂಢ