Ganja chocolates seized in Kolar: ಗಾಂಜಾ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಆರೋಪಿಯಿಂದ 17.195 ಕೆ.ಜಿ ಯ ಗಾಂಜಾ ಚಾಕೊಲೇಟ್ ವಶಪಡಿಸಿಕೊಳ್ಳಲಾಗಿದೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಜು. 09): ಕೋಲಾರ (Kolar) ವಿಭಾಗದ ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ಗಾಂಜಾ ಚಾಕೊಲೇಟ್ (Ganja Chocolates) ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ವಲಯದಲ್ಲಿ ಗಾಂಜಾ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಆರೋಪಿಯಿಂದ 17.195 ಕೆ.ಜಿ ಯ ಗಾಂಜಾ ಚಾಕೊಲೇಟ್ ವಶಪಡಿಸಿಕೊಂಡಿದ್ದಾರೆ.
ಗಾಂಜಾ ಚಾಕೊಲೇಟ್ನನ್ನು ನಗರದ ಹಲವೆಡೆ ಚಿಲ್ಲರೆ ಅಂಗಡಿಗಳಿಗೆ ಮಾರಾಟ ಮಾಡಲು ತರುತ್ತಿದ್ದ ಎನ್ನಲಾಗಿದೆ. ಮಹಾಕಾಲ ಎಂಬ ಹೆಸರಿನ ಈ ಚಾಕೊಲೇಟಿನಲ್ಲಿ ಗಾಂಜಾವನ್ನು ಸೇರಿಸಿ ಅದನ್ನು ಮಾರಾಟ ಮಾಡಲಾಗುತ್ತಿದ್ದ ಜಾಲ ಪೊಲೀಸರು ಭೇದಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಶುಭಂ ಬಂಧಿತ ಆರೋಪಿ, ಬಂಧಿತ ವ್ಯಕ್ತಿಯಿಂದ ಸುಮಾರು 4.65 ಲಕ್ಷ ಮೌಲ್ಯದ ಗಾಂಜಾ ಚಾಕೋಲೇಟ್ ವಶ ಪಡಿಸಿಕೊಳ್ಳಲಾಗಿದೆ. ಈ ಗಾಂಜಾ ಚಾಕೊಲೇಟನ್ನು ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳಿಗೆ (College Students) ಮಾರಾಟ ಮಾಡಲು ತರಲಾಗುತ್ತಿತ್ತು ಎನ್ನಲಾಗಿದ್ದು ಅರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿ ಮುಂದಿನ ತನಿಖೆ ನಡೆಸುವುದಾಗಿ ಅಬಕಾರಿ ಉಪಆಯುಕ್ತ ರಮೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳೇ ಡ್ರಗ್ ಪೆಡ್ಲರ್ಸ್: 12 ಮಂದಿ ಬಂಧನ