ಹೃದಯಾಘಾತದಿಂದ ವಿದ್ಯಾರ್ಥಿನಿಯೊಬ್ಬಳು ಮಲಗಿದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನೆಕ್ಕಿಲಾಡಿ ಕುರ್ವೇಲು ಗ್ರಾಮದಲ್ಲಿ ನಡೆದಿದೆ.
ಮಂಗಳೂರು(ಫೆ.16): ಹೃದಯಾಘಾತದಿಂದ ವಿದ್ಯಾರ್ಥಿನಿಯೊಬ್ಬಳು ಮಲಗಿದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನೆಕ್ಕಿಲಾಡಿ ಕುರ್ವೇಲು ಗ್ರಾಮದಲ್ಲಿ ಇಂದು(ಶುಕ್ರವಾರ) ನಡೆದಿದೆ. ವಿದ್ಯಾರ್ಥಿನಿ ಹಫೀಜಾ(17) ಮೃತ ದುರ್ದೈವಿಯಾಗಿದ್ದಾಳೆ.
ಮೃತ ಹಫೀಜಾ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ರಕ್ತ ಪರೀಕ್ಷೆಯಿಂದಲೇ 6 ತಿಂಗಳೊಳಗೆ ಸಂಭವಿಸಲಿರುವ ಹೃದಯಾಘಾತ ಪತ್ತೆ ಸಾಧ್ಯ: ಅಧ್ಯಯನ
ಮೃತ ಹಫೀಜಾ ಉಪ್ಪಿನಂಗಡಿ ನಿವಾಸಿ ಉದ್ಯಮಿ ದಾವೂದ್ ಎಂಬುವರ ಪುತ್ರಿಯಾಗಿದ್ದಾಳೆ. ಉಪ್ಪಿನಂಗಡಿಯ ನೆಕ್ಕಿಲಾಡಿ ಕುರ್ವೇಲುನ ಮನೆಯಲ್ಲಿ ಮಲಗಿದಲ್ಲೇ ಹಫೀಜಾ ಮೃತಪಟ್ಟಿದ್ದಾಳೆ. ತಡರಾತ್ರಿವರೆಗೂ ವಿದ್ಯಾಭ್ಯಾಸ ಮಾಡುತ್ತಿದ್ದ ಹಫೀಜಾ ಮಲಗಿದ್ದ ಸ್ಥಿತಿಯಲ್ಲೇ ಮೃತದೇಹ ಪತ್ತೆಯಾಗಿದೆ.