ಮಂಗಳಮುಖಿ ಎಂದು ಬಾಲಕನ ಅಣಕ, ನೊಂದವ ನೇಣಿಗೆ ಶರಣಾದ

By Suvarna News  |  First Published Jun 18, 2020, 3:42 PM IST

ನೀನು ಮಂಗಳಮುಖಿಯಂತೆ ಕಾಣುತ್ತಿಯಾ/ ಬಾಲಕನ ಅಣಕಿಸಿದ ಸಂಬಂಧಿಕರು, ಸ್ನೇಹಿತರು/ ಮನನೊಂದು ಆತ್ಮಹತ್ಯೆ/ ನೊಂದು ನೇಣಿಗೆ ಶರಣಾದ 16  ರ ಹುಡುಗ


ಬರೇಲಿ(ಜೂ. 18) 'ಅಪ್ಪಾ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ, ನಾನು ಒಳ್ಳೆಯ ಮಗ ಆಗಲಿಲ್ಲ. ನಾನು ನಿಮ್ಮಷ್ಟು ಗಳಿಕೆ ಮಾಡಲು ಸಾಧ್ಯವಿಲ್ಲ. ನಾನು ಹುಡುಗಿಯಂತೆ ತೋರುತ್ತಿದ್ದೇನೆ, ನನ್ನ ಮುಖ ಸಹ ಹಾಗೇ ಇದೆ, ಜನ ನನ್ನ ನೋಡಿ ನಗುತ್ತಿದ್ದಾರೆ, ನಾನೊಬ್ಬ ಮಂಗಳಮುಖಿ ಎಂದು ಭ್ರಮಿಸುವಂತಾಗಿದೆ' ಹೀಗೆ ತನ್ನ ನೋವನ್ನೆಲ್ಲ ಬರೆದಿಟ್ಟ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಯವಿಟ್ಟು ನನ್ನ ಕ್ಷಮಿಸಿಬಿಡಿ, ಮತ್ತೆ ಕುಟುಂಬದಲ್ಲಿ ಹುಡುಗಿಯಾಗಿ ಜನ್ಮ ತಾಳುತ್ತೇನೆ ಎಂದು ಬರೆದಿರುವ ಸುಸೈಡ್ ನೋಟ್ ಪೊಲೀಸರರ ಕಣ್ಣಲ್ಲೂ ನೀರು ತಂದಿದೆ.

Tap to resize

Latest Videos

ಸುಶಾಂತ್ ಸಾವಿನ ನಂತರ ಮಾಜಿ ಗೆಳತಿ ಆಡಿದ ಮಾತುಗಳು

ಆತ್ಮಹತ್ಯೆ ಮಾಡಿಕೊಂಡ  16  ವರ್ಷದ ಬಾಲಕನ ಕತೆ ಇದು.  ಪೊಲೀಸರಿಗೆ ಹೇಳಿಕೆ ನೀಡಿದ ಬಾಲಕನ ಅಣ್ಣ, ಸುಶಾಂತ್ ಸಿಂಗ್ ಅವರಂತೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದ ಎಂಬ ಆತಂಕಕಾರಿ ಮಾಹಿತಿಯನ್ನು ತಿಳಿಸುತ್ತಾರೆ.

ನನ್ನ ಮಗ ಎಲ್ಲರಂತೆಯೇ ಇದ್ದ, ನನ್ನ ಸಂಬಂಧಿಕರು ಸೇರಿದಂತೆ ಹಲವರು ಅವನಿಗೆ ಸಲ್ಲದ ರೀತಿ ಕಾಟ ಕೊಡುತ್ತಿದ್ದರು, ನೀನು ಹುಡುಗಿಯಂತೆ ಇದ್ದಿಯಾ, ನೀನು ಮಂಗಳಮುಖಿ ಎಂದೆಲ್ಲಾ ಕಾಡಿಸುತ್ತಿದ್ದರು ಎಂದು ತಂದೆ ನೋವಿನಲ್ಲಿಯೇ ವಿಚಾರ ಹೇಳುತ್ತಾರೆ.

ತಂದೆ ಇಲ್ಲದ ವೇಳೆ ಬಾಲಕ ಮೇಕ್ ಅಪ್ ಮಾಡಿಕೊಳ್ಳುವುದು, ಹಾಡು  ಹಾಕಿಕೊಂಡು ನೃತ್ಯ ಮಾಡುವುದನ್ನು ಮಾಡುತ್ತರಿದ್ದ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಒಟ್ಟಿನಲ್ಲಿ ಯಾರದ್ದೋ ಟೀಕೆಯ ಕಾರಣಕ್ಕೆ ಮುಗ್ಧ ಜೀವವೊಂದು ನೇಣಿಗೆ ಶರಣಾಗಿದೆ.

 

 

click me!