
ಪುಣೆ(ಆ. 09) ಇದೊಂದು ವಿಚಿತ್ರ ಪ್ರಕರಣ. ಲಾಕ್ಡೌನ್ ಅವಧಿಯಲ್ಲಿ ಅಜ್ಜಿಯ ಮನೆಗೆ ಬಂದಿದ್ದ 16 ವರ್ಷದ ಬಾಲಕಿಗೆ ನೀಲಿಚಿತ್ರಗಳನ್ನು ತೋರಿಸಿ ಆಕೆಯ ಸೋದರತ್ತೆಯೇ ಕಿರುಕುಳ ನೀಡಿದ್ದಾರೆ. ಈ ನೀಲಿ ಚಿತ್ರ ವೀಕ್ಷಣೆಗೆ ಸೋದರತ್ತೆಯ ಬಾಯ್ ಫ್ರೆಂಡ್ ಸಹಕಾರ ನೀಡಿದ್ದು ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತ ಪ್ರೇಮಿಗಳಿಗೆ ಕೊರೋನಾ ಇರುವುದು ದೃಢವಾಗಿದೆ. ಏಪ್ರಿಲ್ನ ಲಾಕ್ಡೌನ್ ಅವಧಿಯಲ್ಲಿ ಮಗಳು ಸುರಕ್ಷಿತವಾಗಿದ್ದರೆ ಉತ್ತಮ ಎಂದು 16 ವರ್ಷದ ಪುತ್ರಿ ಸೇರಿ ನನ್ನ ನಾಲ್ಕು ಮಕ್ಕಳನ್ನು ಉಂಡ್ರಿಯಲ್ಲಿರುವ ನನ್ನ ಅತ್ತೆ ಮನೆಗೆ ಕಳುಹಿಸಿದ್ದೆ. ಮಕ್ಕಳ ಸೋದರತ್ತೆ ಭೇಟಿಯಾಗಲು ಆಕೆಯ ಬಾಯ್ಫ್ರೆಂಡ್ ಮನೆಗೆ ಬಂದು ಹೋಗುತ್ತಿದ್ದ. ಆ ಸಂದರ್ಭದಲ್ಲಿ ನನ್ನ ಪುತ್ರಿಗೆ ಅವರಿಬ್ಬರೂ ಪೋರ್ನ್ ದೃಶ್ಯಗಳನ್ನು ತೋರಿಸಿ ಕಿರುಕುಳ ಕೊಟ್ಟಿದ್ದಾರೆ ಎಂದು ಖೊಂಡ್ವಾ ಪೊಲೀಸ್ ಠಾಣೆಯಲ್ಲಿ 30 ವರ್ಷದ ಮಹಿಳೆ ದೂರು ನೀಡಿದ್ದಾಳೆ.
ಫೇಸ್ ಬುಕ್ ನಲ್ಲಿ ಪೋರ್ನ್ ವಿಡಿಯೋ ಪೋಸ್ಟ್ ಮಾಡಿದ ಬಿಜೆಪಿ ಮುಖಂಡ
ಪ್ರಕರಣ ದಾಖಲಿಸಿಕೊಂಡ ಪೊಲೀಶರು ಸೋದರತ್ತೆ ಮತ್ತು ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಶ್ ಅಧಿಕಾರಿ ವಿನಾಯಕ್ ಗಾಯಕ್ವಾಡ್ ತಿಳಿಸಿದ್ದಾರೆ.
ಬಾಲಕಿಯ ಮನಸಿಗೆ ವಿರುದ್ಧವಾಗಿ ಆಕೆಗೆ ಚಿಕ್ಕ ಮಕ್ಕಳ ಪೋರ್ನ್ ದೃಶ್ಯ ವೀಕ್ಷಣೆ ಮಾಡಲು ಒತ್ತಾಯ ಹೇರಲಾಗಿದೆ. ಲಾಕ್ ಡೌನ್ ಸಡಿಲವಾದ ಮೇಲೆ ಮನೆಗೆ ಬಂದ ಬಾಲಕಿ ವಿಚಾರವನ್ನು ಅಮ್ಮನ ಬಳಿ ಹೇಳಿಕೊಂಡಿದ್ದು ದೂರು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ