* ಬಾಲಕಿ ಸಾವಿಗೆ ಶಿವು ಹನುಮಂತಪ್ಪ ಖಂಡರಹಳ್ಳಿ ಎಂಬಾತ ಕಾರಣ
* ಮೃತ ಬಾಲಕಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಆರೋಪಿ
* ಎಂಟೆಕ್ ಚಿನ್ನದ ಪದಕ ವಿಜೇತ ಗೃಹಿಣಿ ಆತ್ಮಹತ್ಯೆ
ರಾಣಿಬೆನ್ನೂರು(ಅ.10): ವ್ಯಕ್ತಿಯೊಬ್ಬ ಮದುವೆಯಾಗಲು ಪೀಡಿಸುತ್ತಿದ್ದರಿಂದ ಮಾನಸಿಕವಾಗಿ ನೊಂದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ತಾಲೂಕಿನ ಮಾಳನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಂದನಾ ಕುಬೇರಪ್ಪ ಕೊಳಕಪ್ಪನವರ (16) ಮೃತಳು. ಈ ಕುರಿತು ಮೃತಳ ತಾಯಿ ಮಂಜುಳಾ ಕುಬೇರಪ್ಪ ಕೊಳಕಪ್ಪನವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ಮಗಳ ಸಾವಿಗೆ ಅದೇ ಗ್ರಾಮದ ಶಿವು ಹನುಮಂತಪ್ಪ ಖಂಡರಹಳ್ಳಿ ಕಾರಣ ಎಂದು ಆರೋಪಿಸಿದ್ದಾರೆ.
undefined
ದೂರಿನಲ್ಲಿ ತಿಳಿಸಿರುವ ಪ್ರಕಾರ ಆರೋಪಿಯು ಮೃತ ಬಾಲಕಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ. ಆಕೆ ವ್ಯಾಸಂಗ ಮಾಡುತ್ತಿದ್ದ ತುಮ್ಮಿನಕಟ್ಟಿ ಶಾಲೆ ಮತ್ತು ಮೆಣಸಿನಹಾಳ ಕ್ರಾಸ್ ಬಳಿ ಭೇಟಿಯಾಗಿ ನಿನ್ನನ್ನೇ ಮದುವೆಯಾಗುತ್ತೇನೆ. ನಿಮ್ಮ ತಂದೆ-ತಾಯಿ ನಿನ್ನನ್ನು ಎಲ್ಲಿ ಇಟ್ಟರೂ ಬಿಡದೇ ಮದುವೆಯಾಗುವುದಾಗಿ ಹೇಳುತ್ತಿದ್ದ. ಇದರಿಂದ ಬೇಸತ್ತ ಬಾಲಕಿಯು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಆದ್ದರಿಂದ ಆಕೆಯ ಸಾವಿಗೆ ಕಾರಣನಾದ ಆರೋಪಿ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗದಗ: ಕಿತ್ತು ತಿನ್ನುವ ಬಡತನ, ಮಗಳಿಗೆ ವಿಷ ಉಣಿಸಿ ತಾಯಿ ಆತ್ಮಹತ್ಯೆ
ಎಂಟೆಕ್ ಚಿನ್ನದ ಪದಕ ವಿಜೇತ ಗೃಹಿಣಿ ಆತ್ಮಹತ್ಯೆ
ಮೈಸೂರು ವಿವಿಯಲ್ಲಿ ಚಿನ್ನದ ಪದಕ ಪಡೆದಿದ್ದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ವಿದ್ಯಾರಣ್ಯಪುರಂನ ಅಪಾರ್ಟ್‌ಮೆಂಟ್‌ವೊಂದರ ನಿವಾಸಿ ನಾಗಪ್ರಸಾದ್ ಎಂಬುವರ ಪತ್ನಿ ಆಶಾ(31) ಆತ್ಮಹತ್ಯೆ ಮಾಡಿಕೊಂಡವರು.
ಆಶಾ ಅವರು 8 ತಿಂಗಳ ಹಿಂದೆ ಎಂ.ಟೆಕ್‌ನಲ್ಲಿ ಚಿನ್ನದ ಪದಕ ಪಡೆದಿದ್ದು, ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 9 ವರ್ಷಗಳ ಹಿಂದೆ ನಾಗಪ್ರಸಾದ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ಆಶಾ ಅವರಿಗೆ 6 ವರ್ಷದ ಮಗನಿದ್ದಾನೆ. ಕೆಲವು ವಿಚಾರಗಳಲ್ಲಿ ಪತಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಆಶಾ, ತಾನು ಸಾಯುವುದಾಗಿ ಪತಿಗೆ ಮೊಬೈಲ್‌ಗೆ ಮೇಸೆಜ್ ಕಳುಹಿಸಿದ್ದಾರೆ. ಪತಿ ಮನೆಗೆ ಬಂದು ನೋಡುವಷ್ಟರಲ್ಲಿ ಆಶಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.