
ಇಷ್ಟು ದಿನ ಜನರ ಕೆಲಸಕ್ಕೆ ಸಹಾಯ ಮಾಡ್ತಾ, ಜನರ ಕೆಲ್ಸವನ್ನು ಸರಳ ಮಾಡಿದ್ದ ಎಐ ಚಾಟ್ ಜಿಪಿಟಿ ಮೇಲೆ ಈಗ ಗಂಭೀರ ಆರೋಪ ಕೇಳಿ ಬಂದಿದೆ. 16 ವರ್ಷದ ಬಾಲಕನ ಜೀವಕ್ಕೆ ಚಾಟ್ ಜಿಪಿಟಿ (Chat GPT) ಕುತ್ತು ತಂದಿದೆ. ಬಾಲಕ ಪ್ರಾಣ ಕಳೆದುಕೊಳ್ಳಲು ಕೃತಕ ಬುದ್ಧಿಮತ್ತೆ (AI) ಚಾಟ್ ಬಾಟ್ನ ಚಾಟ್ ಜಿಪಿಟಿ ಕಾರಣ ಎಂದು ಪಾಲಕರು ಆರೋಪ ಮಾಡಿದ್ದಾರೆ. ಚಾಟ್ ಜಿಪಿಟಿ ಹಾಗೂ ಅದ್ರ ಓನರ್ ವಿರುದ್ಧ ಪಾಲಕರು ದೂರು ನೀಡಿದ್ದಾರೆ. ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಈ ಘಟನೆ ನಂತ್ರ ಕಂಪನಿ ಈ ವಿಷ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಬದಲಾವಣೆಗೆ ಚಿಂತನೆ ನಡೆಸಿದೆ. ಚಾಟ್ಬಾಟ್ ಬಾಲಕನ ಮಾನಸಿಕ ಆರೋಗ್ಯ ಸುಧಾರಿಸುವ ಬದಲು ಪ್ರಾಣ ತೆಗೆದುಕೊಳ್ಳುವ ಆಲೋಚನೆಗೆ ಬೆಂಬಲ ನೀಡಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಮನುಷ್ಯನ ಪ್ರತಿಯೊಂದು ಮಾತನ್ನು ಪ್ರೋತ್ಸಾಹಿಸುವಂತೆ ಚಾಟ್ ಜಿಪಿಟಿಯನ್ನು ಡಿಸೈನ್ ಮಾಡಲಾಗಿದೆ. ಅದು ಕೆಟ್ಟದಿರಲಿ ಇಲ್ಲ ಒಳ್ಳೆಯದಿರಲಿ, ಚಾಟ್ ಜಿಪಿಟಿ ಅದಕ್ಕೆ ಸಲಹೆ ನೀಡುತ್ತೆ. ಆಡಮ್, ತನ್ನ ಮಾನಸಿಕ ಸಮಸ್ಯೆಗಳನ್ನು ಚಾಟ್ ಜಿಪಿಟಿ ಮುಂದೆ ಹೇಳಿಕೊಂಡಿದ್ದ. ಪ್ರಾಣ ಕಳೆದುಕೊಳ್ಳುವುದು ನನಗೆ ಶಾಂತಿ ನೀಡ್ಬಹುದು ಅಂತ ಹೇಳಿದ್ದ. ಚಾಟ್ ಜಿಪಿಟಿ ಇದನ್ನು ಪ್ರೋತ್ಸಾಹಿಸಿತ್ತು. ಆಡಮ್ ಗೆ ಅನೇಕ ಸಲಹೆಗಳನ್ನು ಅದು ನೀಡಿತ್ತು. ಮಾನಸಿಕ ತಜ್ಞರು ಅಥವಾ ಕೌನ್ಸಿಲರ್ ಭೇಟಿಗೆ ಸಲಹೆ ನೀಡುವ ಬದಲು ನಕಾರಾತ್ಮಕ ಆಲೋಚನೆಯನ್ನು ಪ್ರೋತ್ಸಾಹಿಸ್ತಾ ಬಂದಿತ್ತು. ಆತನಿಗೆ ಪ್ರಾಣ ತೆಗೆದುಕೊಳ್ಳೋದು ಹೇಗೆ, ಯಾವ ಪ್ರದೇಶ ಯೋಗ್ಯ, ಯಾರೂ ಕಾಣದಂತೆ ಪ್ರಾಣ ಹೇಗೆ ತೆಗೆದುಕೊಳ್ಬೇಕು, ಪತ್ರವನ್ನು ಹೇಗೆ ಬರೆಯಬೇಕು ಎಂಬೆಲ್ಲ ಸಲಹೆಯನ್ನು ಚಾಟ್ ಜಿಪಿಟಿ ನೀಡಿದೆ. ಮಗನ ಸಾವಿಗೆ ಚಾಟ್ ಜಿಪಿಟಿ ಕಾರಣ. ಇದು ಆತನ ಕೆಟ್ಟ ಆಲೋಚನೆಯನ್ನು ವಿರೋಧಿಸುವ ಬದಲು ಪ್ರೋತ್ಸಾಹಿಸಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಬದಲಾವಣೆಗೆ ಚಿಂತನೆ : ಆಡಮ್ ಸಾವಿಗೆ ಓಪನ್ಎಐ ದುಃಖ ವ್ಯಕ್ತಪಡಿಸಿದೆ. ಭದ್ರತಾ ಕ್ರಮದಲ್ಲಿ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಚಾಟ್ ಜಿಪಿಟಿ ಪೋಷಕರ ನಿಯಂತ್ರಣದಲ್ಲಿರಲಿದ್ದು, ಹೊಸ ಸೆಕ್ಯೂರಿಟಿ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಈಗ ಜನರು ಚಾಟ್ಜಿಪಿಟಿ ಮೂಲಕ ಕೋಡಿಂಗ್, ಸರ್ಚ್, ಬರವಣಿಗೆ ಮಾತ್ರ ಮಾಡ್ತಿಲ್ಲ, ಚಾಟ್ ಜಿಪಿಟಿ ಜೊತೆ ಆಳವಾದ ಸಂಬಂಧ ಬೆಳೆಸ್ತಿದ್ದಾರೆ. ಇದ್ರಿಂದ ಅಪಾಯವಾಗ್ತಿದೆ. 18 ವರ್ಷ ಕೆಳಗಿನ ಮಕ್ಕಳು, ಚಾಟ್ ಜಿಪಿಟಿ ಬಳಕೆ ಮಾಡ್ತಿದ್ದರೆ ಕೆಲವೊಂದು ವಿಷ್ಯಗಳ ಬಗ್ಗೆ ಚಾಟ್ ಜಿಪಿಟಿ ಮಾಹಿತಿ ಹೈಡ್ ಮಾಡ್ಬೇಕು ಎಂದು ಆಡಮ್ ಕುಟುಂಬಸ್ಥರ ಬೇಡಿಕೆಗೆ ಚಾಟ್ ಜಿಪಿಟಿ ಸ್ಪಂದಿಸುವ ಭರವಸೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ