ಕ್ಯಾಟರ್ ಬಿಲ್ಲು ಬಳಸಿ ಅಪಹರಣಕಾರರಿಂದ ತಂಗಿಯ ಬಚಾವ್ ಮಾಡಿದ 13ರ ಬಾಲಕ!

Published : May 14, 2023, 04:14 PM IST
ಕ್ಯಾಟರ್ ಬಿಲ್ಲು ಬಳಸಿ ಅಪಹರಣಕಾರರಿಂದ ತಂಗಿಯ ಬಚಾವ್ ಮಾಡಿದ 13ರ ಬಾಲಕ!

ಸಾರಾಂಶ

ಅಣ್ಣನಿಗೆ 13 ವರ್ಷ, ತಂಗಿಗೆ 8 ವರ್ಷ. ಇಬ್ಬರು ಮನೆಯ ಪಕ್ಕದಲ್ಲೇ ಆಟವಾಡುತ್ತಿದ್ದರು. ಬಾಲಕ ಮನೆಗೆ ತೆರಳುತ್ತಿದ್ದಂತೆ ಕಾದು ಕುಳಿತ ಅಪಹರಣಕಾರರು ಬಂದು ತಂಗಿಯನ್ನು ಎತ್ತಿಕೊಂಡು ಅಪಹರಣಕ್ಕೆ ಮುಂದಾಗಿದ್ದಾರೆ. ಕೈಯಿಂದ ತಂಗಿಯ ಬಾಯಿಯನ್ನು ಮುಚ್ಚಿದ್ದಾರೆ. ಆದರೆ ತಕ್ಷಣ ಕಾರ್ಯಪ್ರವೃತ್ತರಾದ ಅಣ್ಣ ತನ್ನ ಕ್ಯಾಟರ್‌ಪಿಲ್ಲರ್ ಮೂಲಕ ಅಪಹರಣಕಾರರನಿಗೆ ಗುರಿ ಇಟ್ಟಿದ್ದಾನೆ. ಈ ಮೂಲಕ ಕಿಡ್ನಾಪರ್ಸ್‌ನಿಂದ ತಂಗಿಯನ್ನು ಉಳಿಸಿಕೊಂಡಿದ್ದಾನೆ.  

ಮಿಚಿಗನ್(ಮೇ.14): ಪೋಷಕರು ಮನೆಯಲ್ಲಿಲ್ಲ. ಅಣ್ಣ ತಂಗಿ ಇಬ್ಬರು ಆಟವಾಡುತ್ತಿದ್ದರು. ಇದೇ ಸಮಯ ನೋಡಿಕೊಂಡ ಕಿಡ್ನಾಪರ್ಸ್ 8 ವರ್ಷದ ಬಾಲಕಿಯನ್ನು ಅಪಹರಣ ಮಾಡಲು ಪ್ಲಾನ್ ಮಾಡಿದ್ದಾರೆ. ಇತ್ತ 13 ವರ್ಷದ ಅಣ್ಣ ಯಾವುದೋ ಕಾರಣಕ್ಕೆ ಮನೆಯೊಳಗೆ ಹೋಗುತ್ತಿದ್ದಂತೆ ಅಪಹರಣಕಾರ ದಿಢೀರ್ ಆವರಣದೊಳಕ್ಕೆ ನುಗ್ಗಿ, ಬಾಲಕಿಯ ಬಾಯಿ ಬಿಗಿ ಹಿಡಿದು ಎತ್ತಿಕೊಂಡು ಅಪಹರಣ ಮಾಡಲು ಯತ್ನಿಸಿದ್ದಾನೆ. ಇದೇ ವೇಳೆ ಮನೆಯೊಳಗಿಂದ ಓಡಿ ಬಂದ ಬಾಲಕ ತನ್ನ ಕೈಯಲ್ಲಿದ್ದ ಕ್ಯಾಟರ್ ಬಿಲ್ಲಿನ ಮೂಲಕ ಅಪಹರಣಕಾರನಿಗೆ ಗುರಿ ಇಟ್ಟಿದ್ದಾನೆ. ಆಕ್ರೋಶ ಭರಿತ ಗುರಿ ನೇರವಾಗಿ ಅಪಹರಣಕಾರನ ತಲೆ ಹಾಗೂ ಎದೆಗೆ ತಾಗಿದೆ.ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. 13ರ ಬಾಲಕನ ಸಾಹಸದಿಂದ ಅಪಹರಣಕಾರನಿಂದ ತಂಗಿಯನ್ನು ಬಚಾವ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಈ ಘಟನೆ ನಡೆದಿರುವುದು 

ಅಮೆರಿಕದ ಮಿಚಿಗನ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಮಿಚಿಗನ್ ಪೊಲೀಸರ ಪ್ರಕಾರ, 8 ವರ್ಷದ ಬಾಲಕಿ ಹಾಗೂ ಬಾಲಕಿ ಅಣ್ಣ 13 ವರ್ಷದ ಬಾಲಕ ಇಬ್ಬರು ಜೊತೆಯಾಗಿ ಮನೆಯ ಪಕ್ಕದಲ್ಲೇ ಆಟವಾಡುತ್ತಿದ್ದರು. ಇತ್ತ 17ರ ಅಪ್ರಾಪ್ತ ಬಾಲಕಿಯನ್ನು ಅಪಹರಿಸಲು ಹೊಂಚು ಹಾಕಿದ್ದಾರೆ. ಪೋಷಕರು ಮನೆಯಲ್ಲಿ ಇಲ್ಲ ಅನ್ನೋದನ್ನ ಅರಿತ ಕಿಡ್ನಾಪರ್, ಬಾಲಕಿ ಅಪಹರಣಕ್ಕೆ ಹೊಂಚು ಹಾಕಿ ಕುಳಿತಿದ್ದ.

ಬಟ್ಟೆ ಅಡಿ ನಿದ್ರೆ ಮಾಡ್ತಿದ್ದ ಮಗು: ಕಿಡ್ನ್ಯಾಪ್ ದೂರು ದಾಖಲಿಸಿದ ಪೋಷಕರು

ಬಾಲಕ ಆಟವಾಡುತ್ತ ಮನೆಯೊಳಗ್ಗೆ ಹೋಗುತ್ತಿದ್ದಂತೆ, ಇತ್ತ ಹೊಂಚು ಹಾಕಿ ಕುಳಿತಿದ್ದ ಅಪಹರಣಕಾರ ದಿಢೀರ್ ನುಗ್ಗಿ ಬಾಲಕಿಯ ಬಾಯಿಯನ್ನು ಬಿಗಿ ಹಿಡಿದು ಎತ್ತಿಕೊಂಡು ಅಪಹರಣ ಮಾಡಲು ಮುಂದಾಗಿದ್ದಾನೆ. ಇದೇ ಸಂದರ್ಭದಲ್ಲಿ ಮನೆಯೊಳಗಿಂದ ಹೊರಗೆ ಬಂದ ಬಾಲಕ ತನ್ನ ಕೈಯಲ್ಲಿದ್ದ ಕ್ಯಾಟರ್ ಪಿಲ್ಲರ್‌ನಿಂದ ಅಪಹರಣಕಾರನಿಗ ಗುರಿ ಇಟ್ಟಿದ್ದಾನೆ. ಅಪಹರಣಕಾರನ ತಲೆಗೆ ಗುರಿ ಇಟ್ಟಿದ್ದಾನೆ. ತಲೆ ಹಾಗೂ ಎದೆಗೆ ಗುರಿ ಇಟ್ಟು ಹೊಡೆದ ಕಾರಣ 17 ಅಪ್ರಾಪ್ತ ತೀವ್ರಗಾಯಗೊಂಡಿದ್ದಾನೆ. ಹೀಗಾಗಿ ಬಾಲಕಿಯನ್ನು ಅಲ್ಲೆ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಓಡಿ ಪರಾರಿಯಾಗಿದ್ದಾನೆ. ಇತ್ತ ತಂಗಿಯನ್ನು ಅಪಹರಣಕಾರನಿಂದ ರಕ್ಷಿಸಿದ್ದಾನೆ. 

13ರ ಬಾಲಕ ಧೈರ್ಯ ಹಾಗೂ ತಂಗಿಯನ್ನು ಉಳಿಸಿದ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಕನ ಹೇಳಿಕೆ ಆಧರಿಸಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಬಳಿಕ 17ರ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಇತ್ತ ಕ್ಯಾಟರ್ ಪಿಲ್ಲರ್ ದಾಳಿಯಿಂದ ಆರೋಪಿ ತೀವ್ರವಾಗಿ ಗಾಯಗೊಂಡಿದ್ದಾನೆ. ಹೀಗಾಗಿ ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಕೇರಳ: EX ಬಾಯ್‌ಫ್ರೆಂಡ್‌ನ ಕಿಡ್ನಾಪ್ ಮಾಡಿ ಹಲ್ಲೆ: 19 ವರ್ಷದ ಯುವತಿಯ ಬಂಧನ

ಇದೇ ರೀತಿಯ ಘಟನೆ ಕಳೆದ ವರ್ಷ ಕರ್ನಾಟಕದ ತೀರ್ಥಹಳ್ಳಿಯಲ್ಲೂ ನಡೆದಿತ್ತು. ಶಾಲಾ ಬಾಲಕಿಯನ್ನು ಅಪಹರಿಸುವ ಪ್ರಯತ್ನ ನಡೆದಿತ್ತು. ಆದರೆ ವಿದ್ಯಾರ್ಥಿಗಳು ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ದುರ್ಘಟನೆಯೊಂದು ತಪ್ಪಿತ್ತು. ಮೇಲಿನಕುರುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ತಿಳಿಸಿದಂತೆ ಮಾರುತಿ ಓಮ್ನಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಚಾಕೋಲೆಟ್‌ ಕೊಡುವ ನೆಪದಲ್ಲಿ ಕರೆದು ಆಕೆಯ ಕೈ ಹಿಡಿದು ಎಳೆದಿದ್ದಾರೆ. ಅಷ್ಟರಲ್ಲಿ ಸಮೀಪದಲ್ಲೇ ನಡೆದುಕೊಂಡು ಹೋಗುತ್ತಿದ್ದ ಹಿರಿಯ ವಿದ್ಯಾರ್ಥಿಯೊಬ್ಬ ಬಾಲಕಿಯ ಕೈ ಹಿಡಿದುಕೊಂಡು ಬೊಬ್ಬೆ ಹೊಡೆದಿದ್ದಾನೆ. ಜೊತೆಯಲ್ಲಿದ್ದ ಮೂರನೇ ತರಗತಿಯ ಅಕುಲ್‌ ಬಾಲಕಿಯನ್ನು ಎಳೆಯುತ್ತಿದ್ದವನ ಕಾಲಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಮಕ್ಕಳ ಕೂಗಾಟ ಕೇಳಿ ಜನರು ಸೇರುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ಆಗುವುದಾಗಿ ನಂಬಿಸಿ ಅತ್ಯಾ*ರ ಮಾಡಿದ ಸೀನಿಯರ್ : ಪ್ರತಿಷ್ಠಿತ ಕಾಲೇಜಲ್ಲಿ ಘಟನೆ
ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ