ಉಗ್ರರ ನಂಟು : ರಾಜ್ಯದ ಓರ್ವ ಸೇರಿ 12 ಜನ ಸೆರೆ

Kannadaprabha News   | Kannada Prabha
Published : Mar 26, 2026, 07:12 AM IST
  terrorism

ಸಾರಾಂಶ

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಗ್ರವಾದವನ್ನು ಪಸರಿಸಿ, ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ 12 ಮಂದಿಯನ್ನು ಆಂಧ್ರ ಪ್ರದೇಶದ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಅಮರಾವತಿ (ಆಂಧ್ರ ಪ್ರದೇಶ): ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಗ್ರವಾದವನ್ನು ಪಸರಿಸಿ, ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ 12 ಮಂದಿಯನ್ನು ಆಂಧ್ರ ಪ್ರದೇಶದ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಅಬ್ದುಲ್‌ ಸಲಾಂ (ಕರ್ನಾಟಕ), ಅಜ್ಮಾನುಲ್ಲಾ ಖಾನ್ (ಬಿಹಾರ), ಲಕ್ಕಿ ಅಹ್ಮದ್ (ದೆಹಲಿ), ಮೀರ್ ಆಸಿಫ್ ಅಲಿ (ಪ. ಬಂಗಾಳ), ಜೀಶನ್ (ರಾಜಸ್ಥಾನ), ಶಾರುಖ್ ಖಾನ್ ಮತ್ತು ಶಿಯಾಕ್ ಪಿಯಾಜ್ ಉರ್ ರೆಹಮಾನ್ (ಮಹಾರಾಷ್ಟ್ರ) ಹಾಗೂ ಆಂಧ್ರಪ್ರದೇಶದ ಮೊಹಮ್ಮದ್ ರಹಮತುಲ್ಲಾ ಶರೀಫ್, ಮಿರ್ಜಾ ಸೊಹೈಲ್ ಬೇಗ್ ಮತ್ತು ಮೊಹಮ್ಮದ್ ಡ್ಯಾನಿಶ್ ಬಂಧಿತ ಆರೋಪಿಗಳು.

ಅಲ್ ಖೈದಾ ಮತ್ತು ಐಸಿಸ್‌ ಜೊತೆ ಸಂಪರ್ಕ

ಇವರು ನಿಷೇಧಿತ ಉಗ್ರ ಸಂಘಟನೆಗಳಾದ ಅಲ್ ಖೈದಾ ಮತ್ತು ಐಸಿಸ್‌ ಜೊತೆ ಸಂಪರ್ಕ ಹೊಂದಿದ್ದರು. ಆಂಧ್ರದ ಮೂವರು ‘ಅಲ್ ಮಾಲಿಕ್ ಇಸ್ಲಾಮಿಕ್ ಯೂತ್‌’ ಎಂಬ ಗುಂಪನ್ನು ರಚಿಸಿ, ಯುವಕರನ್ನು ತೀವ್ರವಾದಿ ಚಿಂತನೆಗಳತ್ತ ಆಕರ್ಷಿಸುವುದು, ಜಿಹಾದ್‌ಗೆ ತಯಾರು ಮಾಡುವುದು ಮತ್ತು ದೇಶಾದ್ಯಂತ ತಮ್ಮ ನೆಟ್‌ವರ್ಕ್ ವಿಸ್ತರಿಸುವ ಕೆಲಸದಲ್ಲಿ ತೊಡಗಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾದಿ ವಿಡಿಯೋಗಳನ್ನು ಹಂಚುತ್ತಾ, ಯುವಕರನ್ನು ಉಗ್ರ ಚಟುವಟಿಕೆಗಳತ್ತ ಆಕರ್ಷಿಸುತ್ತಿದ್ದರು.

ಒಸಾಮಾ ಬಿನ್ ಲಾಡೆನ್‌ನ ವಿಡಿಯೋಗಳನ್ನು ನೋಡಿ ಆತನ ಅವರ ಉಡುಪು ಮತ್ತು ವರ್ತನೆಯನ್ನು ಅನುಕರಿಸುತ್ತಿದ್ದರು. ಭಾರತವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡುವ ಗುರಿಯಿಂದ, ಒಂದು ತಿಂಗಳಲ್ಲಿ ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆಯುವ ಯೋಜನೆಯನ್ನು ರೂಪಿಸಿದ್ದರು. ಇತರ ಯುವಕರಿಗೂ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ತರಬೇತಿ ಪಡೆಯಲು ಪ್ರೇರೇಪಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

- ಕರ್ನಾಟಕ ಸೇರಿ 7 ರಾಜ್ಯದಲ್ಲಿ ಆಂಧ್ರ ಪೊಲೀಸರ ಕಾರ್ಯಾಚರಣೆ

- ಅಲ್‌ಖೈದಾ, ಐಸಿಸ್‌ ನಂಟು ಹೊಂದಿದ್ದ 12 ಶಂಕಿತ ಉಗ್ರರ ಅರೆಸ್ಟ್‌

- ಜಾಲತಾಣ ಮೂಲಕ ಜಿಹಾದಿ, ಉಗ್ರರ ಕೃತ್ಯಕ್ಕೆ ಸೆಳೆಯುವ ಯತ್ನ

- ಉಗ್ರ ಲಾಡೆನ್‌ ರೀತಿ ವಸ್ತ್ರ ಧರಿಸಿ ಅವನಂತೆ ವರ್ತಿಸುತ್ತಿದ್ದ ತಂಡ

- ಭಾರತವನ್ನು ಇಸ್ಲಾಮಿಕ್‌ ರಾಜ್ಯ ಮಾಡುವ ಗುರಿ ರೂಪಿಸಿದ್ದ ಟೀಮ್‌

- ಇದಕ್ಕೆಂದೇ ಪಾಕಿಸ್ತಾನಕ್ಕೆ ತೆರಳಿ ತರಬೇತಿ ಪಡೆಯಲೂ ಯೋಜನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉದ್ಯೋಗದ ಹೆಸರಲ್ಲಿ ಕೋಟ್ಯಂತರ ವಂಚನೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏರಿಕೆ
ಬೆಂಗಳೂರು: ರೈಲ್ವೆ ಹಳಿಗಳ ಬಳಿಯ ಮನೆಗಳ್ಳನಿಂದ ಅರ್ಧ ಕೆಜಿ ಚಿನ್ನ ಜಪ್ತಿ! ಖತರ್ನಾಕ್ ಕಳ್ಳನ ಕರಾಮತ್ತು ಕೇಳಿ!